Mens Health : ಸ್ಪರ್ಮ್‌ ನಾಶಕ್ಕೆ ನಿಮ್ಮ ಹವ್ಯಾಸಗಳೇ ಕಾರಣವಾಗುತ್ತಿರಬಹುದು. ಬಹುಷ್ಯಃ ನೀವು ಸ್ನಾನ ಮಾಡುವ ವಿಧಾನವೂ ಸಹ ನಿಮ್ಮ ವಿರ್ಯಾಣುವನ್ನು ನಾಶ ಮಾಡುತ್ತಿರಬಹುದು ಅಥವಾ ನಿಮ್ಮ ಆಹಾರ ಪದ್ದತಿಯೂ ಸಹ ಇದಕ್ಕೆ ಹೊರತಾಗಿಲ್ಲ. ಇದರಿಂದಾಗಿ ತಂದೆಯಾಗುವ ಭಾಗ್ಯವನ್ನೇ ನೀವು ಕಳೆದುಕೊಳ್ಳುವ ಸಂಭವ ಹೆಚ್ಚಾಗಿರುತ್ತದೆ. ಅಲ್ಲದೆ, ನಿಮ್ಮ ಲೈಂಗಿಕ ಆರೋಗ್ಯದ ಮೇಲೆಯೂ ಇದು ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುವುದನ್ನು ನೀವು ತಿಳಿದುಕೊಂಡಿರಬೇಕು. ಸದ್ಯ ನಿಮ್ಮ ವಿರ್ಯ ನಾಶಕ್ಕೆ ಕಾರಣವಾಗುತ್ತಿರುವ ಆ ಅಂಶಗಳನ್ನು ಗಮನಿಸೋಣ. 


COMMERCIAL BREAK
SCROLL TO CONTINUE READING

ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದು : ಹೆಚ್ಚು ಕಾರ್ಬೊನೇಟೆಡ್ ಒಳಗೊಂಡಿರುವ ಪಾನೀಯಗಳನ್ನು ಕುಡಿಯುವುದರಿಂದ ನಿಮ್ಮ ವೀರ್ಯ ಚಲನಶೀಲತೆ ಕಡಿಮೆಯಾಗುತ್ತದೆ. ಅಂದ್ರೆ ಬಿಯರ್‌ ಜಾಸ್ತಿ ಕುಡಿದ್ರೂ ವಿರ್ಯ ನಾಶಕ್ಕೆ ನಿವೇ ದಾರಿ ಮಾಡಿಕೊಟ್ಟಂತಾಗುತ್ತದೆ. ಹೆಚ್ಚು ಬಿಯರ್ ಕುಡಿಯುವುದರಿಂದ ದುರ್ಬಲವಾದ ಅನಾರೋಗ್ಯಕರ ವೀರ್ಯ ಉತ್ಪತ್ತಿಯಾಗುತ್ತದೆ. ಏಕೆಂದರೆ ಕಾರ್ಬೊನೇಟೆಡ್ ಪಾನೀಯಗಳು ಸಕ್ಕರೆಯಿಂದ ತುಂಬಿರುತ್ತವೆ, ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ ಮತ್ತು ವೀರ್ಯ ಚಲನಶೀಲತೆಯನ್ನು ಅಡ್ಡಿಪಡಿಸುತ್ತವೆ.


ಇದನ್ನೂ ಓದಿ: ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುತ್ತದೆ ಸೌತೆಕಾಯಿ


ಪ್ಯಾಂಟ್ ಫೋನ್‌ ಪಾಕೆಟ್‌ನಲ್ಲಿ ಇಟ್ಟುಕೊಳ್ಳುವುದು : ನಿಮ್ಮ ಫೋನ್ ಅನ್ನು ನಿಮ್ಮ ಮುಂಭಾಗದ ಪ್ಯಾಂಟ್‌ ಜೇಬಿನಲ್ಲಿ ಇಟ್ಟುಕೊಳ್ಳುವುದು ಸುರಕ್ಷಿತ ದೃಷಿಯಿಂದ ಒಳ್ಳೆಯದರು, ಆದರೆ ಆರೋಗ್ಯ ದೃಷ್ಟಿಯಿಂದ ಇದು ಕೆಟ್ಟದ್ದು. ಇದು ನಿಮ್ಮ ವೀರ್ಯಕ್ಕೆ ಹಾನಿಕಾರಕವಾಗಿದೆ. ಫೋನ್‌ನ ವಿಕಿರಣಗಳು, ಪುರುಷ ಸಂತಾನೋತ್ಪತ್ತಿ ಭಾಗಗಳಿಗೆ ಹತ್ತಿರವಾದಾಗ, ವೀರ್ಯ ನಾಶವಾಗುತ್ತದೆ. ಆದ್ದರಿಂದ ಫೋನ್‌ಗಳನ್ನು ಪ್ಯಾಂಟ್‌ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ 9% ವೀರ್ಯ ಕಡಿಮೆಯಾಗುತ್ತದೆ.


ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಳ್ಳುವುದು : ಲ್ಯಾಪ್‌ಟಾಪ್ ಅನ್ನು ತೊಡೆಯ ಮೇಲೆ ಇಟ್ಟುಕೊಂಡು ಕೆಲಸಮಾಡುವುದು ತುಂಬಾ ಅಪಾಯಕಾರಿ. ಈ ಹವ್ಯಾಸ ವೀರ್ಯವನ್ನು ಸಹ ಕೊಲ್ಲುತ್ತದೆ. ವೃಷಣಗಳು ತಂಪಾಗಿರಬೇಕು, ಅದಕ್ಕಾಗಿಯೇ ಅವು ದೇಹದ ಹೊರಗೆ ಇರುತ್ತವೆ. ಆದರೆ ನಿಮ್ಮ ಲ್ಯಾಪ್‌ಟಾಪ್ ಅನ್ನು ನಿಮ್ಮ ತೊಡೆಯ ಮೇಲೆ ಇಟ್ಟುಕೊಂಡರೆ, ವೃಷಣಗಳು ಬೆಚ್ಚಗಾಗುತ್ತವೆ. ಇದರ ಪರಿಣಾಮವಾಗಿ ವೀರ್ಯಗಳು ಸಾಯುತ್ತವೆ.


ಇದನ್ನೂ ಓದಿ: Free Health Camp: ಮಾರ್ಚ್ 18ರಂದು ಮಾಧ್ಯಮದವರಿಗೆ ಉಚಿತ ಆರೋಗ್ಯ ಶಿಬಿರ !


ಬಿಸಿ ನೀರಿನ ಸ್ನಾನ : ಬೆಚ್ಚಗಿನ ಶವರ್ ತೆಗೆದುಕೊಳ್ಳುವುದು ತುಂಬಾ ಹಿತಕರವಾಗಿರುತ್ತದೆ ಅನಿಸುತ್ತದೆ ಆದ್ರೆ, ಇದರಿಂದ ನಿಮ್ಮ ವೀರ್ಯಕ್ಕೆ ಹಾನಿ ಉಂಟಾಗುತ್ತದೆ.


ನಿದ್ರೆಯ ಕೊರತೆ : ನಿಮ್ಮ ದೇಹಕ್ಕೆ ವಿಶ್ರಾಂತಿ ಬೇಕು, ನಿಮ್ಮ ಮನಸ್ಸು ಶಾಂತವಾಗಿರಬೇಕು. ನಿಮ್ಮ ವೀರ್ಯದ ವಿಷಯದಲ್ಲೂ ಹಾಗೆಯೇ ಸರಿಯಾದ ಕಾರ್ಯನಿರ್ವಹಣೆಗೆ ಮತ್ತು ಸಕ್ರಿಯವಾಗಿ ಉಳಿಯಲು, ವೀರ್ಯಗಳಿಗೆ ನಿದ್ರೆಯ ಅಗತ್ಯವಿರುತ್ತದೆ. ನಿಮ್ಮ ವೀರ್ಯಗಳ ಅಪ್‌ಸ್ಟ್ರೀಮ್ ಈಜುವಿಕೆಯನ್ನು ಹೆಚ್ಚಿಸಲು ಕನಿಷ್ಠ 7-8 ಗಂಟೆಗಳ ನಿದ್ರೆ ಅತ್ಯಗತ್ಯ. ನಿದ್ರಾಹೀನತೆಯು ನಿಮ್ಮ ಕಾಮವನ್ನು ಕಡಿಮೆ ಮಾಡುತ್ತದೆ. ನೀವು 7 ಗಂಟೆಗಳ ಕಾಲ ನಿದ್ರಿಸದಿದ್ದರೆ, ಯೋಗದ ಮೂಲಕ ನಿಮ್ಮ ವೀರ್ಯವನ್ನು ಸಕ್ರಿಯವಾಗಿಡಲು ನೀವು ಪ್ರಯತ್ನಿಸಬಹುದು.


ಬಿಗಿಯಾದ ಜೀನ್ಸ್ ಧರಿಸುವುದು : ಸ್ಲಿಮ್ ಫಿಟ್ ಪ್ಯಾಂಟ್ ಆಕರ್ಷಕವಾಗಿ ಕಾಣುತ್ತದೆ ಅಂತ ಯಾವಾಗ್ಲೂ ಫಿಟ್‌ ಪ್ಯಾಂಟ್‌ಗಳನ್ನು ಧರಿಸುವುದರಿಂದ ನಿಮ್ಮ ವೀರ್ಯ ಸಂಖ್ಯೆಯನ್ನು ಕಡಿಮೆಯಾಗಬಹುದು. ಬಿಗಿಯಾದ ಪ್ಯಾಂಟ್‌ ನಿಮ್ಮ ವೃಷಣಗಳಿಗೆ ಇಕ್ಕಟ್ಟಿಗೆ ಸಿಲುಕಿಸುತ್ತವೆ ಇದರಿಂದಾಗಿ ಅವು ಬಿಸಿಯಾಗುತ್ತವೆ. ಅದು ನಿಮ್ಮ ವೀರ್ಯಕ್ಕೆ ಒಳ್ಳೆಯದಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.