Foods pregnancy women must avoid: ಗರ್ಭಾವಸ್ಥೆಯು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಸುಂದರವಾದ ಅವಧಿ. ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಏಕೆಂದರೆ ಇದು ಅವರಿಗೆ ಮಾತ್ರವಲ್ಲದೆ ಅವರ ಮಗುವಿನ ಆರೋಗ್ಯಕ್ಕೂ ಬಹಳ ಮುಖ್ಯವಾಗಿದೆ.


COMMERCIAL BREAK
SCROLL TO CONTINUE READING

ಪ್ರತಿ ಮಹಿಳೆಯು ತನ್ನ ಮಗು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾಳೆ. ಇದಕ್ಕಾಗಿ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಾಳೆ. ಆದರೆ ಗರ್ಭಾವಸ್ಥೆಯಲ್ಲಿ ನೀವು ಸೇವಿಸುವ ಆಹಾರವು ಹುಟ್ಟಲಿರುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚು ಕಾಳಜಿ ವಹಿಸಬೇಕು.


ಇದನ್ನೂ ಓದಿ: ಯಾವ ಪಥ್ಯ ಕೂಡ ಬೇಡ! ಒಂದು ಲೋಟ ಎಳನೀರಿಗೆ ಈ ಬೀಜ ಬೆರೆಸಿ ಕುಡಿಯಿರಿ: ಕಿಡ್ನಿ ಸ್ಟೋನ್ ಆಗಿದ್ದರೆ ಸುಲಭವಾಗಿ ಕರಗುತ್ತೆ!


ಗರ್ಭಾವಸ್ಥೆಯಲ್ಲಿ ಮಹಿಳೆಯರು ಹೆಚ್ಚು ಪೌಷ್ಟಿಕಾಂಶವಿರುವ ಆಹಾರವನ್ನು ಸೇವಿಸಬೇಕು. ಆದರೆ ಕೆಲವೊಂದು ಆಹಾರಗಳು ನಿಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ಹುಟ್ಟುವ ಮಗುವಿಗೂ ಬಹಳಷ್ಟು ಹಾನಿಕಾರಕವಾಗಿದೆ.


ಪಪ್ಪಾಯಿ: ಗರ್ಭಿಣಿಯರು ಪಪ್ಪಾಯಿಯನ್ನು ಸೇವಿಸಲೇಬಾರದು. ಹಸಿ ಪಪ್ಪಾಯಿಯು ಗರ್ಭಪಾತಕ್ಕೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಪಪ್ಪಾಯಿಯು ಲ್ಯಾಟೆಕ್ಸ್ ಅನ್ನು ಹೊಂದಿದ್ದು, ಅದು ಗರ್ಭಾಶಯದ ಸಂಕೋಚನವನ್ನು ಪ್ರಚೋದಿಸುತ್ತದೆ.


ಪೀಚ್: ಪೀಚ್ ಹಣ್ಣನ್ನು ಗರ್ಭಾವಸ್ಥೆಯಲ್ಲಿ ಸೇವಿಸಬಾರದು. ಇದರಲ್ಲಿ ಉಷ್ಣದ ಅಂಶ ಹೆಚ್ಚಾಗಿರುವುದರಿಂದ ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಉಂಟಾಗುತ್ತದೆ. ಇದು ಆಂತರಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು ಮತ್ತು ಗರ್ಭಪಾತಕ್ಕೆ ಕಾರಣವಾಗಬಹುದು.


ಅನಾನಸ್: ಗರ್ಭಿಣಿಯರು ಅನಾನಸ್ ಸೇವಿಸಬಾರದು. ಅನಾನಸ್ ತಾಯಿ ಮತ್ತು ಮಗು ಇಬ್ಬರಿಗೂ ಒಳ್ಳೆಯದಲ್ಲ. ಅನಾನಸ್‌’ನಲ್ಲಿ ಹೆಚ್ಚಿನ ಬ್ರೋಮೆಲಿನ್ ಅಂಶವಿದೆ, ಇದು ಕಿಣ್ವವಾಗಿದ್ದು ಅದು ಗರ್ಭಕಂಠವನ್ನು ಮೃದುಗೊಳಿಸುತ್ತದೆ. ಜೊತೆಗೆ ಗರ್ಭಾಶಯದ ಸಂಕೋಚನವನ್ನು ಸಹ ಪ್ರಚೋದಿಸುತ್ತದೆ.


ಮೊಳಕೆಯೊಡೆದ ಧಾನ್ಯಗಳು: ಮೊಳಕೆಯೊಡೆದ ಧಾನ್ಯಗಳು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ ಆದರೆ ಗರ್ಭಾವಸ್ಥೆಯಲ್ಲಿ ಹಸಿ ಮೊಳಕೆಯೊಡೆದ ಧಾನ್ಯಗಳನ್ನು ಸೇವಿಸದಿರುವುದೇ ಉತ್ತಮ.


ಇದಲ್ಲದೆ, ಪಾಶ್ಚರೀಕರಿಸದ ಹಾಲು, ಚೀಸ್, ಕೆಫೀನ್, ಆಲ್ಕೋಹಾಲ್ ಇವುಗಳಿಂದ ದೂರವಿರುವುದು ಒಳ್ಳೆಯದು.


ಇದನ್ನೂ ಓದಿ: ಕಾವ್ಯಾ ಮಾರನ್ ಎಷ್ಟೊಂದು ಸಿರಿವಂತೆ ಗೊತ್ತಾ? ವಿರಾಟ್ ಕೊಹ್ಲಿಗಿಂತಲೂ ದುಪ್ಪಟ್ಟು ಆಸ್ತಿ ಹೊಂದಿರುವ ಈಕೆ ಕನ್ನಡದ ಪ್ರಖ್ಯಾತ ಚಾನೆಲ್’ವೊಂದರ ಮಾಲಕಿ


ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಹೇಳಿಕೊಳ್ಳುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ