High BP remedy : ಈ 3 ಹಣ್ಣುಗಳು ʼಬಿಪಿʼ ಸಮಸ್ಯೆಗೆ ರಾಮಬಾಣ..! ತಪ್ಪದೇ ತಿನ್ನಿರಿ
High BP : ಅಧಿಕ ರಕ್ತದೊತ್ತಡವು ಒಮ್ಮೆ ಸಂಭವಿಸಿದರೆ ಅದು ಜೀವನದುದ್ದಕ್ಕೂ ಇರುತ್ತದೆ. ನಿಯಂತ್ರಣದಲ್ಲಿರಿಸದಿದ್ದರೆ ಅದು ಮಾರಣಾಂತಿಕವಾಗಬಹುದು. ಇದು ಮೆದುಳಿನ ರಕ್ತಸ್ರಾವದ ಅಪಾಯವನ್ನೂ ಹೆಚ್ಚಿಸುತ್ತದೆ. ಈ ಕೆಳಗೆ ನೀಡಿರುವ ಹಣ್ಣನ್ನು ಸೇವಿಸುವ ಮೂಲಕ ಅಧಿಕ ರಕ್ತದೊತ್ತಡವನ್ನು ಹೇಗೆ ನಿಯಂತ್ರಿಸಬಹುದು ಎಂಬುದನ್ನು ಇಂದು ನಾವು ನಿಮಗೆ ಹೇಳೋಣ.
High BP remedy : ಬದಲಾದ ಇಂದಿನ ಜೀವನಶೈಲಿಯಿಂದಾಗಿ ಅನೇಕ ಜನರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದ್ದಾರೆ. ಅಧುನಿಕ ಜೀವನಶೈಲಿಯಿಂದಾಗಿ ಆಹಾರ ಪದ್ಧತಿ ಬದಲಾಗಿದ್ದು, ಜನ ಒತ್ತಡದ ಜೀವನ ನಡೆಸುತ್ತಿದ್ದಾರೆ. ಅಲ್ಲದೆ, ನಿಯಮಿತ ವ್ಯಾಯಾಮವೂ ಇಲ್ಲದೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಪೈಕಿ ಅಧಿಕ ರಕ್ತದೊತ್ತಡ ಸಮಸ್ಯೆಯೂ ಒಂದು.
ಅಧಿಕ ರಕ್ತದೊತ್ತಡವು ಒಂದು ಗಂಭೀರ ಸಮಸ್ಯೆಯಾಗಿದ್ದು, ಅದು ಒಮ್ಮೆ ಬಂದರೆ ಜೀವನದುದ್ದಕ್ಕೂ ನಮ್ಮ ಜೊತೆಯಲ್ಲಿಯೇ ಇರುತ್ತದೆ. ಅದನ್ನು ಆಹಾರ, ವ್ಯಾಯಾಮದ ಮೂಲಕ ನಿಯಂತ್ರಣದಲ್ಲಿಡಬೇಕು. ಇಲ್ಲದಿದ್ದರೇ ಮಾರಣಾಂತಿಕವಾಗಬಹುದು. ಸದ್ಯ ಈ ಕೆಳಗೆ ನೀಡಿರುವ ಹಣ್ಣುಗಳು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ..
ಬಾಳೆಹಣ್ಣು : ಬಾಳೆಹಣ್ಣು ಪೌಷ್ಟಿಕ ಹಣ್ಣು. ಇದು ಜೀರ್ಣಕ್ರಿಯೆಯನ್ನು ಬಲಪಡಿಸುತ್ತದೆ. ಈ ಹಣ್ಣಿನಲ್ಲಿರುವ ಪೋಷಕಾಂಶಗಳು ರಕ್ತದೊತ್ತಡಕ್ಕೆ ರಾಮಬಾಣವೆಂದು ಸಾಬೀತಾಗಿದೆ. ಬಾಳೆಹಣ್ಣಿನ ನಿಯಮಿತ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ ಮತ್ತು ಪಾರ್ಶ್ವವಾಯು ತಡೆಯುತ್ತದೆ.
ಕಿವಿ : ಈ ಹಣ್ಣು ಪೌಷ್ಟಿಕ ಭರಿತವಾಗಿದೆ. ಇದು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಕಿವಿಯಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಖನಿಜಗಳು ಸಮೃದ್ಧವಾಗಿವೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಒಂದು ತಿಂಗಳು ʼಚಹ ಮತ್ತು ಕಾಫಿʼ ಕುಡಿಯದಿದ್ದರೆ ದೇಹದಲ್ಲಿ ಏನಾಗುತ್ತೆ ಗೊತ್ತಾ..!
ಮಾವು : ಎಲ್ಲರೂ ಇಷ್ಟಪಡುವ ಈ ಹಣ್ಣು ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನ ಹೊಂದಿದೆ. ರಕ್ತದೊತ್ತಡ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಮಾವಿನಹಣ್ಣು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ. ಇದು ದೇಹಕ್ಕೆ ಬೀಟಾ ಕ್ಯಾರೋಟಿನ್ ಮತ್ತು ಫೈಬರ್ ಅನ್ನು ಒದಗಿಸುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.