ನವದೆಹಲಿ : ಗ್ರೀನ್ ಟೀ (Green tea) ಬಗ್ಗೆ ನಿಮಗೆ ಹೆಚ್ಚಿಗೆ ಹೇಳಬೇಕಿಲ್ಲ. ದೇಹದ ರೋಗ ನಿರೋಧಕತೆಯನ್ನು (Immunity) ಬಲಿಷ್ಠಗೊಳಿಸಲು ಗ್ರೀನ್ ಟೀ ಒಂದು ಉತ್ತಮ ಪೇಯ.  ಗ್ರೀನ್ ಟೀ ಇಮ್ಯೂನಿಟಿಯನ್ನು ಬಲಗೊಳಿಸುತ್ತೆ ಎನ್ನುವುದು ಹಲವು ಸಂಶೋಧನೆಗಳಿಂದ ಸಾಬೀತಾಗಿದೆ.  ಗ್ರೀನ್ ಟೀಯಲ್ಲಿ ಅಂಟಿ ಆಕ್ಸಿಡೆಂಟ್ಸ್ ಮತ್ತು ಫಾಲಿಫೆನಾಲ್ ಸಾಕಷ್ಟು  ಪ್ರಮಾಣದಲ್ಲಿ ಸಿಗುತ್ತದೆ. ಇದು ಇಮ್ಯೂನ್ ಬೂಸ್ಟ್ ಮಾಡುತ್ತೆ. ಇದರಲ್ಲಿ ಆಂಟಿ ಮೈಕ್ರೋಬಿಯಲ್ ಪ್ರಾಪರ್ಟಿಸ್  ಕೂಡಾ ಇದೆ. ಇದು ಬ್ಯಾಕ್ಟಿರಿಯಾ ಮತ್ತು ವೈರಸ್ (Virus) ವಿರುದ್ಧ ಹೋರಾಡುವ ಶಕ್ತಿಯನ್ನು ಬಲಗೊಳಿಸುತ್ತದೆ.  ಹಾಗಾಗಿ ಕರೋನಾ ಕಾಲಕ್ಕೆ ಇದೊಂದು ಸೂಪರ್ ಡ್ರಿಂಕ್ ಆಗಿದೆ.  ದಿನಕ್ಕೆ ಕನಿಷ್ಠ ಒಂದು ಕಪ್ ಸಾಕು. 


COMMERCIAL BREAK
SCROLL TO CONTINUE READING

ಗ್ರೀನ್ ಟೀಯನ್ನು ಇನ್ನಷ್ಟು ಸ್ಟ್ರಾಂಗ್ ಮಾಡಿ  :
ಗ್ರೀನ್ ಟೀ (green tea), ಶ್ಯಾಮ್ ಅಥವಾ ರಾಮ್ ತುಳಸಿಯ (Tulis) 15 ಎಲೆ, ಶುಂಠಿ, ನಿಂಬೆ, ಜೇನು ತುಪ್ಪ, ಮೆಂತ್ಯೆ ಕಾಳು, ಅಮೃತಬಳ್ಳಿಯ ತುಂಡು, ಅಶ್ವಗಂಧ, ಲಿಂಬೆ ಎಲೆ, ದಾಲ್ಚಿನಿ ಎಲೆ,  ಕಚ್ಚಾ ಅರಶಿಣ (Turmeric), ಪುದಿನ ಎಲೆ ಇತ್ಯಾದಿ ವಸ್ತುಗಳನ್ನು ಗ್ರೀನ್ ಟೀಗೆ ಸೇರಿಸಬಹುದು. 


ಇದನ್ನೂ ಓದಿ : Immunity Booster: ಇಲಾಚಿ ಹಣ್ಣಿನಲ್ಲಿದೆ ರೋಗನಿರೋಧಕ ಶಕ್ತಿ: ಇಲ್ಲಿದೆ ಅದರ 5 ಪ್ರಯೋಜನಗಳು!


ಮಾಡುವ ವಿಧಾನ :
1. ಹಿಂದಿನ ರಾತ್ರಿ ಒಂದು ಚಮಚ ಮೆಂತ್ಯೆ ಕಾಳು, ಅಮೃತಬಳ್ಳಿಯ ಕೆಲವು ತುಂಡು, ಸ್ವಲ್ಪ ಅಶ್ವಗಂಧ, ನಾಲ್ಕು ಲಿಂಬೆ ಎಲೆ, ತುಳಸಿ ಎಲೆ, ದಾಲ್ಚಿನಿ, ನಾಲ್ಕು ಲವಂಗ, ಒಂದು ಚಮಚ ಕರಿಮೆಣಸು (pepper), ಸ್ವಲ್ಪ ಕಚ್ಚಾ ಅರಶಿಣ ಇವೆಲ್ಲವನ್ನೂ ಒಂದು ಪಾತ್ರೆಯಲ್ಲಿ ನೆನೆಯಲು ಹಾಕಿ.
2. ಬೆಳಗೆದ್ದು ಮಿಕ್ಸಿಗೆ ಹಾಕಿ ಇವೆಲ್ಲವನ್ನೂ ಚೆನ್ನಾಗಿ ರುಬ್ಬಿ
3. ಒಂದು ಪಾನ್ ಗೆ ಒಂದು ಗ್ಲಾಸ್ ನೀರು ಹಾಕಿ. ಅದರಲ್ಲಿ ರುಬ್ಬಿದ ಸಾಮಾಗ್ರಿ ಹಾಕಿ. 15 ನಿಮಿಷ ಚೆನ್ನಾಗಿ ಕುದಿಸಿ. ಒಂದು ಗ್ಲಾಸ್ ನೀರು (water) ಕುದಿದು ಮುಕ್ಕಾಲು ಭಾಗಕ್ಕೆ ಇಳಿದ ಮೇಲೆ ಗ್ಯಾಸ್ ಬಂದ್ ಮಾಡಿ. ಅದರಲ್ಲಿ ಗ್ರೀನ್ ಟೀ ಬ್ಯಾಗ್ ಸೇರಿಸಿ. ಐದು ನಿಮಿಷ ಅದರಲ್ಲಿ ಹಾಗೇ ಮುಳುಗಿಸಿ ಇಡಿ. 
4. ಅದನ್ನು ಒಂದು ಕಪ್ ಗೆ ಸೋಸಿರಿ. ಬಳಿಕ ನಿಂಬೆ ರಸ (Lemon), ಸ್ವಲ್ಪ ಜೇನು ತುಪ್ಪ, ಪುದಿನ ಫ್ರೆಶ್ ಎಲೆ ಸೇರಿಸಿ ಮಿಕ್ಸ್ ಮಾಡಿ. 
5. ಇಲ್ಲಿಗೆ ನಿಮ್ಮ ಸ್ಪೆಶಲ್ ಗ್ರೀನ್ ಟೀ ತಯಾರಾಗಿರುತ್ತದೆ. ಬೆಳಗೆದ್ದು ಇದೇ ಗ್ರೀನ್ ಟೀ ಕುಡಿಯಿರಿ. 


ಇದನ್ನೂ ಓದಿ : ಕರೋನಾ ಕಾಲದಲ್ಲಿ ಬಿಸಿನೀರಿನ ಸ್ಟೀಮ್ ಗಿಂತ ಮೊದಲು ಈ 5 ವಿಚಾರ ತಿಳಿದಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್