ಈ ಹಣ್ಣನ್ನು ಫ್ರಿಜ್ ನಲ್ಲಿಟ್ಟರೆ ಸತ್ತೇ ಹೋಗುವುದು ಇದರ ಪೋಷಕಾಂಶ
Fruits You Should Never Refrigerate:ರೆಫ್ರಿಜಿರೇಟರ್‌ನಲ್ಲಿ ಇಡಬಾರದಂತಹ ಕೆಲವು ಹಣ್ಣುಗಳಿವೆ. ಒಂದು ವೇಳೆ ಅವುಗಳನ್ನು ಫ್ರಿಜ್ ನಲ್ಲಿಟ್ಟರೆ ಆ ಹಣ್ಣಿನಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗಿ ಬಿಡುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಫ್ರಿಜ್ ನಲ್ಲಿ ಇತ್ತ ಆ ಹಣ್ಣನ್ನು ತಿಂದರೂ ಸರಿ ಬಿಟ್ಟರೂ ಸರಿ.
Fruits You Should Never Refrigerate : ವಾರಾಂತ್ಯದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ಖರೀದಿಸುವ ಹವ್ಯಾಸ ಅನೇಕರಿಗೆ ಇರುತ್ತದೆ. ಹೀಗೆ ಖರೀದಿಸಿ ತಂದ ಹಣ್ಣು ತರಕಾರಿಗಳನ್ನು ವಾರವಿಡೀ ತಾಜಾವಾಗಿಡಲು ಅವುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ರೆಫ್ರಿಜರೇಟರ್ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ. ಇಂದಿನ ಬಿಡುವಿಲ್ಲದ ಜೀವನದಲ್ಲಿ ಅತ್ಯಂತ ಮುಖ್ಯವಾದ ಪರಿಕರವಾಗಿದೆ. ಆದರೆ, ರೆಫ್ರಿಜಿರೇಟರ್‌ನಲ್ಲಿ ಇಡಬಾರದಂತಹ ಕೆಲವು ಹಣ್ಣುಗಳಿವೆ. ಒಂದು ವೇಳೆ ಅವುಗಳನ್ನು ಫ್ರಿಜ್ ನಲ್ಲಿಟ್ಟರೆ ಆ ಹಣ್ಣಿನಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗಿ ಬಿಡುತ್ತದೆ. ಒಂದರ್ಥದಲ್ಲಿ ಹೇಳುವುದಾದರೆ ಫ್ರಿಜ್ ನಲ್ಲಿ ಇತ್ತ ಆ ಹಣ್ಣನ್ನು ತಿಂದರೂ ಸರಿ ಬಿಟ್ಟರೂ ಸರಿ.
ಈ ಹಣ್ಣುಗಳನ್ನು ಫ್ರಿಡ್ಜ್‌ನಲ್ಲಿ ಇಡಬಾರದು :
1. ಬಾಳೆಹಣ್ಣು:
ಬಾಳೆಹಣ್ಣನ್ನು ಕೋಣೆಯ ಉಷ್ಣಾಂಶದಲ್ಲಿ ಮಾತ್ರ ಇಡುವುದು ಉತ್ತಮ. ಅದನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿದರೆ ಅದು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಾಗಿ ಬಹಳ ಬೇಗನೆ ಹಾಳಾಗುತ್ತದೆ. ಈ ಹಣ್ಣಿನಿಂದ ಎಥಿಲೀನ್ ಅನಿಲ ಬಿಡುಗಡೆಯಾಗುತ್ತದೆ. ಇದರಿಂದಾಗಿ ಇತರ ಹಣ್ಣುಗಳು ಕೂಡಾ ಬೇಗನೆ ಹಣ್ಣಾಗುತ್ತವೆ.
ಇದನ್ನೂ ಓದಿ : Health Tips: ದೇಹದಲ್ಲಿ ಪ್ರೋಟೀನ್ ಕೊರತೆ ಇದೆಯೇ? ಈ 4 ಆಹಾರಗಳನ್ನು ಸೇವಿಸಿ
2. ಸೇಬು :
ಸೇಬು ತುಂಬಾ ರುಚಿಕರವಾದ ಮತ್ತು ಪೌಷ್ಟಿಕಾಂಶದ ಹಣ್ಣಾಗಿದೆ. ದಿನನಿತ್ಯ ಒಂದು ಸೇಬು ತಿಂದರೆ ವೈದ್ಯರ ಬಳಿ ಹೋಗುವ ಅಗತ್ಯವೇ ಇರುವುದಿಲ್ಲ ಎನ್ನುವ ಮಾತಿದೆ. ಸೇಬನ್ನು ಫ್ರಿಡ್ಜ್ ನಲ್ಲಿಟ್ಟರೆ ಅದರಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತದೆ. ಒಂದು ವೇಳೆ ಸೇಬನ್ನು ಫ್ರಿಡ್ಜ್ ನಲ್ಲಿ ಇಡಲೇಬೇಕಾದ ಪ್ರಮೇಯ ಬಂದರೆ ಅದನ್ನು ಪೇಪರ್ ನಲ್ಲಿ ಸುತ್ತಿ ಇಡುವುದು ಸೂಕ್ತ.
3. ಕಲ್ಲಂಗಡಿ:
ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶವಿರುತ್ತದೆ. ಆದ್ದರಿಂದ ಇದು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಅದರ ಗಾತ್ರವು ಸಾಕಷ್ಟು ದೊಡ್ಡದಾಗಿರುವುದರಿಂದ, ನಾವು ಅದನ್ನು ಒಂದೇ ಬಾರಿಗೆ ತಿನ್ನಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಾವು ಕೆಲವು ಭಾಗಗಳನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿ ಇಡುತ್ತೇವೆ. ಆದರೆ ಹೀಗೆ ಮಾಡುವುದರಿಂದ ಈ ಹಣ್ಣಿನಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಪೋಷಕಾಂಶಗಳು ಸಂಪೂರ್ಣವಾಗಿ ನಾಶವಾಗಿಬಿಡುತ್ತದೆ.
ಇದನ್ನೂ ಓದಿ : ಬಿಳಿ ಕೂದಲನ್ನು ಈ ವಿಧಾನದಿಂದ ನೈಸರ್ಗಿಕವಾಗಿ ಕಪ್ಪು ಮಾಡಬಹುದು ಗೊತ್ತೇ...!
4. ಲಿಚಿ :
ಲಿಚಿಯನ್ನು ಕೂಡಾ ದೀರ್ಘಕಾಲ ಫ್ರಿಡ್ಜ್ ನಲ್ಲಿ ಇರಿಸಿದರೆ ಅದು ಒಳಗಿನಿಂದ ಕರಗಲು ಪ್ರಾರಂಭಿಸುತ್ತದೆ. ಹೀಗಾದಾಗ ಅದರ ಪೋಷಕಾಂಶಗಳು ಕೂಡಾ ಮಾಯವಾಗಿ ಬಿಡುತ್ತವೆ. ಆದ್ದರಿಂದ ಅದನ್ನು ಅಗತ್ಯವಿದ್ದಷ್ಟೇ ಖರೀದಿಸಿ ತರುವುದು ಒಳ್ಳೆಯದು.
5.ಮಾವಿನ ಹಣ್ಣು :
ಬೇಸಿಗೆ ಕಾಲದಲ್ಲಿ ಮಾವಿನ ಹಣ್ಣನ್ನು ತಿನ್ನದಿದ್ದರೆ ಈ ಸೀಸನ್ ಅಪೂರ್ಣ ಎನಿಸುತ್ತದೆ. ಮಾವಿನಹಣ್ಣನ್ನು ಹಾಗೆಯೇ ಹೊರಗೆ ಇಟ್ಟರೆ ಹಾಳಾಗಬಹುದು ಎನ್ನುವ ಯೋಚನೆಯಲ್ಲಿ ಅದನ್ನು ರೆಫ್ರಿಜರೇಟರ್‌ನಲ್ಲಿ ಇಡುವವರು ಬಹಳ ಮಂದಿ. ಆದರೆ ಹಾಗೆ ಮಾಡುವುದರಿಂದ, ಮಾವಿನಹಣ್ಣಿನಲ್ಲಿರುವ ಪೋಷಕಾಂಶಗಳು ಮತ್ತು ಉತ್ಕರ್ಷಣ ನಿರೋಧಕಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ.
ಇದನ್ನೂ ಓದಿ : ನಿತ್ಯ ಒಂದು ಕಪ್ ಮೊಸರನ್ನ ತಿನ್ನಿ ನಿಮ್ಮ ಆರೋಗ್ಯದಲ್ಲಾಗುವ ಮ್ಯಾಜಿಕ್ ನೋಡಿ !
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.