garlic and ghee health benefits in kannada: ಬೆಳ್ಳುಳ್ಳಿ ಮತ್ತು ತುಪ್ಪ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ಇದನ್ನು ತಿನ್ನುವುದರಿಂದ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. 


COMMERCIAL BREAK
SCROLL TO CONTINUE READING

ತುಪ್ಪದ ಸೇವನೆಯು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸಬಹುದು ಎಂದು ಹಲವರು ಭಾವಿಸುತ್ತಾರೆ, ಆದರೆ ತುಪ್ಪವನ್ನು ಸರಿಯಾಗಿ ಸೇವಿಸುವುದರಿಂದ ಕೊಬ್ಬನ್ನು ಕರಗಿಸಬಹುದು. ಬೆಳ್ಳುಳ್ಳಿ ತುಪ್ಪವನ್ನು ತಿಂದರೆ ಅಸಿಡಿಟಿಯಿಂದ ಪರಿಹಾರವನ್ನು ಪಡೆಯುತ್ತೀರಿ. ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. 


ಆರೋಗ್ಯಕ್ಕೆ ಬೆಳ್ಳುಳ್ಳಿ ಮತ್ತು ತುಪ್ಪದ ಪ್ರಯೋಜನಗಳು-


ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು -


ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿದ್ದರೆ ರೋಗಗಳಿಗೆ ಸುಲಭವಾಗಿ ಗುರಿಯಾಗುವುದಿಲ್ಲ. ಇಷ್ಟೇ ಅಲ್ಲ ಪದೇ ಪದೇ ನೆಗಡಿ ಮತ್ತು ಜ್ವರದಂತಹ ಸಮಸ್ಯೆಗಳಿಂದ ಬಳಲುವುದಿಲ್ಲ. ರಾತ್ರಿ ಮಲಗುವ 3 ಗಂಟೆಗಳ ಮೊದಲು ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


ಇದನ್ನೂ ಓದಿ:ಸೋರಿಯಾಸಿಸ್‌ಗೆ ರಾಮಬಾಣ ಬೇವಿನ ಎಲೆ... ಈ ರೀತಿ ಬಳಸಿದರೆ ದೂರವಾಗುವುದು ಕಾಯಿಲೆ!


ರಕ್ತದೊತ್ತಡ ನಿಯಂತ್ರಣ -


ಬೆಳ್ಳುಳ್ಳಿಯ ಸೇವನೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಆರೋಗ್ಯಕರ ಕೊಬ್ಬು ಮತ್ತು ಮೆಗ್ನೀಸಿಯಮ್ ಕಂಡುಬರುತ್ತವೆ. ದೇಹವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ತುಪ್ಪದ ಬದಲು ಜೇನುತುಪ್ಪದೊಂದಿಗೆ ಕೂಡ ಬೆಳ್ಳುಳ್ಳಿ ಸೇವಿಸಬಹುದು. ಇದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.


ಹೊಟ್ಟೆಯ ತೊಂದರೆಗಳು -


ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸಬಹುದು. ಇದರಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ ಇರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿನಿತ್ಯ ಸೇವಿಸಿದರೆ ಮಲಬದ್ಧತೆ, ಅಜೀರ್ಣ, ಹೊಟ್ಟೆನೋವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.


ಇದನ್ನೂ ಓದಿ:ಚಿಕನ್‌ ಬಿರಿಯಾನಿಗೆ ಮೊಸರು ಹಾಕಿ ತಿನ್ನುವುದು ಎಷ್ಟು ಡೇಂಜರಸ್‌ ಗೊತ್ತೇ!


ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.