Curry Leaves Benefits: ನಮ್ಮ ದೈನಂದಿನ ಜೀವನದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಹಾರದ ರುಚಿ ಹೆಚ್ಚಿಸಲು ಬಳಸಲಾಗುವ ಕೆಲವು ಪದಾರ್ಥಗಳು ನಮ್ಮ ಆರೋಗ್ಯಕ್ಕೂ ಲಾಭದಾಯಕವಾಗಿದ್ದು, ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತವೆ. ಅಂತಹ ಪದಾರ್ಥಗಳಲ್ಲಿ ಕರಿಬೇವಿನ ಸೊಪ್ಪು (Curry Leaf) ಕೂಡ ಒಂದು. 


COMMERCIAL BREAK
SCROLL TO CONTINUE READING

ಖನಿಜಗಳ ಆಗರ ಕರಿಬೇವು: 
ಪ್ರತಿ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಬಿ 1, ಬಿ 3, ಬಿ 9 ಮತ್ತು ಸಿ ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಿಂದ ತುಂಬಿರುತ್ತದೆ. ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅವುಗಳೆಂದರೆ... 


ಕಫದಿಂದ ಉಪಶಮನ:
ಕರಿಬೇವಿನ ಸೊಪ್ಪಿನ (Curry Leaves) ರಸದೊಂದಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಇದು ಕಫ ಕರಗಿಸಲು ದಿವ್ಯೌಷಧಿಯಾಗಿ ಕಾರ್ಯನಿರ್ವಹಿಸುತ್ತದೆ. 


ಇದನ್ನೂ ಓದಿ- ಮೊಟ್ಟೆಯ ಹಳದಿ ಭಾಗ ತಿನ್ನುವುದರಿಂದ ಕೊಲೆಸ್ಟ್ರಾಲ್, ತೂಕ ಹೆಚ್ಚಾಗುತ್ತಾ?


ತೂಕ ಇಳಿಕೆ: 
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದೆರಡು ಕರಿಬೇವಿನ ಸೊಪ್ಪನ್ನು ಜಗಿದು ತಿನ್ನುವುದರಿಂದ ಇದು ದೇಹದಲ್ಲಿ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬನ್ನು ಕರಗಿಸುತ್ತದೆ. 


ಲಿವರ್/ಯಕೃತ್ತಿನ ರಕ್ಷಣೆ: 
ಪ್ರತಿ ದಿನ ನಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವುದರಿಂದ ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಂದ ಯಕೃತ್ತನ್ನು ರಕ್ಷಿಸುತ್ತದೆ. 


ಕಣ್ಣುಗಳ ಆರೋಗ್ಯ: 
ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಎ  ಹೇರಳವಾಗಿದ್ದು ಇದು ನಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸಲು ತುಂಬಾ ಲಾಭದಾಯಕವೈದೇ. 


ಡಯಾಬಿಟಿಸ್:
ಕರಿಬೇವಿನಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ, ಸರಿಯಾದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಇದನ್ನೂ ಓದಿ- ಮಳೆಗಾಲದಲ್ಲಿ ಪದೇ ಪದೇ ಕಾಡುವ ನೆಗಡಿ, ಕೆಮ್ಮಿಗೆ ನಿಮ್ಮ ಮನೆ ಅಂಗಳದಲ್ಲಿಯೇ ಇದೆ ಪರಿಹಾರ !


ಕೂದಲು: 
ಕರಿಬೇವಿನ ನಿಯಮಿತ ಬಳಕೆಯಿಂದ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಬಹುದು ಏನು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.