ಮುಖದ ಮೇಲಿನ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಲು ಈರುಳ್ಳಿಯನ್ನು ಹೀಗೆ ಬಳಸಿ!
acne scars: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
acne scars: ಈರುಳ್ಳಿ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೂ ಉಪಯುಕ್ತವಾಗಿದೆ. ಹೌದು, ಈರುಳ್ಳಿಯನ್ನು ಬಳಸುವುದರಿಂದ ನೀವು ಮೊಡವೆ ಮತ್ತು ಕಲೆಗಳಂತಹ ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.
ನಮ್ಮಲ್ಲಿ ಹಲವರ ಮುಖದಲ್ಲಿ ಬಿಳಿ ಕಲೆಗಳು, ಕಪ್ಪು ಕಲೆಗಳು ಮತ್ತು ಮೊಡವೆಗಳಿರುತ್ತವೆ. ಇವು ಕಿರಿಕಿರಿಯನ್ನು ಉಂಟುಮಾಡುವುದು ಮಾತ್ರವಲ್ಲ, ನಮ್ಮ ಮುಖದ ಅಂದವನ್ನು ಕಡಿಮೆ ಮಾಡುತ್ತದೆ.
ಮೇಕಪ್‌ನಿಂದ ಕೂಡ ಈ ಸಮಸ್ಯೆಗಳನ್ನು ಮರೆಮಾಚಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಅವುಗಳನ್ನು ಶಾಶ್ವತವಾಗಿ ತೆಗೆದುಹಾಕುವ ಮಾರ್ಗವನ್ನು ನಾವು ಅನುಸರಿಸಬೇಕಾಗಿದೆ. ಆದರೆ ಅದು ಹೇಗೆ ಎನ್ನುವ ಪ್ರಸ್ನೆ ನಿಮ್ಮಲ್ಲಿಯೂ ಇರಬಹುದು. ಅದಕ್ಕೆ ಉತ್ತರ ತಿಳಿಯಲು ಈ ಸ್ಟೋರಿ ಓದಿ...
ಮೊಡವೆಗಳು, ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ತೊಡೆದುಹಾಕಲು ದೊಡ್ಡ ಈರುಳ್ಳಿ ತೆಗೆದುಕೊಳ್ಳಿ. ಇದನ್ನು ನುಣ್ಣಗೆ ರುಬ್ಬಿ ಜ್ಯೂಸ್ ಮಾಡಿ. ಈ ಈರುಳ್ಳಿ ರಸವನ್ನು ಮೊಡವೆಗಳು ಮತ್ತು ಕಲೆಗಳ ಮೇಲೆ ಹಚ್ಚಿ ಮತ್ತು ಸ್ವಲ್ಪ ಸಮಯದವರೆಗೆ ಮೃದುವಾಗಿ ಮಸಾಜ್ ಮಾಡಿ.
ಈರುಳ್ಳಿ ರಸವನ್ನು ಮುಖಕ್ಕೆ ಚೆನ್ನಾಗಿ ಹಚ್ಚಿ 15 ನಿಮಿಷಗಳ ಕಾಲ ಬಿಡಿ. ಅದರ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ಹೀಗೆ ಕೆಲವು ವಾರಗಳ ಕಾಲ ನಿರಂತರವಾಗಿ ಮಾಡಿದರೆ ಮುಖದಲ್ಲಿರುವ ಮೊಡವೆಗಳು ಮತ್ತು ಕಲೆಗಳು ಸುಲಭವಾಗಿ ಮಾಯವಾಗುತ್ತವೆ.
ಈರುಳ್ಳಿ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೆ ನಮ್ಮ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ. ಈರುಳ್ಳಿಯಲ್ಲಿರುವ ಕೆಂಪ್‌ಫೆರಾಲ್ ಮತ್ತು ಸೆಫಾಲಿನ್‌ನಂತಹ ಬಯೋಫ್ಲಾವೊನೈಡ್‌ಗಳು ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡಲು ಬಹಳ ಪರಿಣಾಮಕಾರಿ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.