Ghee With Black Pepper Benefit : ಚಳಿಗಾಲದಲ್ಲಿ ಕೆಮ್ಮು, ಶೀತ ಮತ್ತು ಜ್ವರದಂತಹ ಅನೇಕ ರೋಗಗಳ ಅಪಾಯವು ಹೆಚ್ಚಾಗುತ್ತದೆ. ಅಡುಗೆಮನೆಯಲ್ಲಿರುವ ಕೆಲವು ಮಸಾಲೆಗಳು ಚಳಿಗಾಲದಲ್ಲಿ ದೇಹವನ್ನು ಫಿಟ್ ಮತ್ತು ಆರೋಗ್ಯಕರವಾಗಿಡಲು ಸಹಕಾರಿಯಾಗುತ್ತವೆ.  ಈ ಮಸಾಲೆಗಳಲ್ಲಿ ಕರಿಮೆಣಸು ಕೂಡಾ ಒಂದು. ಹೌದು, ಕರಿಮೆಣಸು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ವಿಟಮಿನ್ ಎ, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್, ಫ್ಲೇವನಾಯ್ಡ್ ಗಳು ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಚಳಿಗಾಲದಲ್ಲಿ ಕರಿಮೆಣಸನ್ನು ತುಪ್ಪದೊಂದಿಗೆ ಸೇವಿಸಿದರೆ ಹಲವಾರು ರೋಗಗಳಿಂದ ಮುಕ್ತಿ ಪಡೆಯಬಹುದು.


COMMERCIAL BREAK
SCROLL TO CONTINUE READING

ತುಪ್ಪ ಮತ್ತು ಕರಿಮೆಣಸಿನ ಪ್ರಯೋಜನ : 
ರೋಗನಿರೋಧಕ ಶಕ್ತಿ  ಹೆಚ್ಚಿಸುತ್ತದೆ  : 

ಚಳಿಗಾಲದಲ್ಲಿ ಜನರ ರೋಗನಿರೋಧಕ ಶಕ್ತಿ ಸಾಮಾನ್ಯವಾಗಿ ದುರ್ಬಲಗೊಳ್ಳುತ್ತದೆ. ಇದರಿಂದಾಗಿ ಅವರು ಋತುಮಾನದ ಕಾಯಿಲೆಗಳಿಗೆ ತುತ್ತಾಗುತ್ತಾರೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ತುಪ್ಪ ಮತ್ತು ಕರಿಮೆಣಸನ್ನು ಸೇವಿಸಬಹುದು. ಇವೆರಡರಲ್ಲಿರುವ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಈ ಹೂವನ್ನು ಪೇಸ್ಟ್ ಮಾಡಿ ಹಚ್ಚಿದರೆ ಬೋಳು ತಲೆಯಲ್ಲಿಯೂ ನೈಸರ್ಗಿಕವಾಗಿ ಬೆಳೆಯುವುದು ಕೂದಲು


ಕೆಮ್ಮು ಮತ್ತು ಶೀತದಿಂದ ಪರಿಹಾರ : 
ತುಪ್ಪ ಮತ್ತು ಕರಿಮೆಣಸನ್ನು ಸೇವಿಸುವುದರಿಂದ ಕೆಮ್ಮು ಮತ್ತು ನೆಗಡಿಯಿಂದ ಪರಿಹಾರ  ಸಿಗುತ್ತದೆ. ಚಳಿಗಾಲದಲ್ಲಿ ಪ್ರತಿ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಬೇಕು. ಹೀಗೆ ಮಾಡುವುದರಿಂದ ಕೆಮ್ಮು, ನೆಗಡಿ, ಗಂಟಲು ನೋವು ಮುಂತಾದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.


ಕೀಲು ನೋವಿನಿಂದ ಪರಿಹಾರ : 
ಚಳಿಗಾಲದಲ್ಲಿ ಕೀಲು ನೋವಿನ ಸಮಸ್ಯೆಯಿಂದ ಅನೇಕ ಜನರು ತೊಂದರೆಗೊಳಗಾಗುತ್ತಾರೆ. ನಿಮಗೂ ಈ ಸಮಸ್ಯೆ ಇದ್ದರೆ ತುಪ್ಪ ಮತ್ತು ಕರಿಮೆಣಸನ್ನು ಸೇವಿಸಬಹುದು. ಇದು ಕೀಲು ನೋವು ಮತ್ತು ಊತದಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.


ಜೀರ್ಣಾಂಗ ವ್ಯವಸ್ಥೆಯನ್ನು  ಸುಧಾರಿಸುತ್ತದೆ : 
ಚಳಿಗಾಲದಲ್ಲಿ ಅನೇಕ ಜನರು ಸಾಮಾನ್ಯವಾಗಿ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ತುಪ್ಪ ಮತ್ತು ಕರಿಮೆಣಸಿನ ಸೇವನೆಯು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ತುಂಬಾ ಪ್ರಯೋಜನಕಾರಿ. ತುಪ್ಪ ಮತ್ತು ಕರಿಮೆಣಸಿನ ಮಿಶ್ರಣವು ಕರುಳಿನಲ್ಲಿ ಸಂಗ್ರಹವಾದ ಕೊಳೆಯನ್ನು ತೆಗೆದುಹಾಕುತ್ತದೆ. ಇದರಿಂದಾಗಿ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.


ಇದನ್ನೂ ಓದಿ : ವಾರಕ್ಕೊಮ್ಮೆ ಹುಣಸೆ ಎಲೆ ಜ್ಯೂಸ್ ಕುಡಿಯಿರಿ: ಈ ಕಾಯಿಲೆಗಳಿಗೆ ಪರ್ಮನೆಂಟಾಗಿ ಹೇಳಿ ಟಾಟಾ ಬೈಬೈ


ಹೃದಯದ ಆರೋಗ್ಯ ಕಾಪಾಡುತ್ತದೆ : 
ಚಳಿಗಾಲದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ತುಪ್ಪ ಮತ್ತು ಕರಿಮೆಣಸಿನ ಸೇವನೆಯು ಹೃದಯವನ್ನು ಆರೋಗ್ಯಕರವಾಗಿಡಲು ಪ್ರಯೋಜನಕಾರಿಯಾಗಿದೆ. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಆಂಜಿಯೋಜೆನೆಸಿಸ್ ಅನ್ನು ಉತ್ತೇಜಿಸುತ್ತದೆ.  ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಇದರ ನಿಯಮಿತ ಸೇವನೆಯು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ