Ginger Tea Benefits: ಚಹಾ ಮಾಡುವಾಗ ಒಂದು ಸಣ್ಣ ತುಂಡು ಶುಂಠಿ ಅದರ ಜೊತೆ ಬೆರೆಸಿದರೆ ರುಚಿ ಚೆನ್ನಾಗಿ ಆಗುತ್ತದೆ. ಜೊತೆಗೆ ಇದರಿಂದ ದೇಹದ ಬೊಜ್ಜು ಸಹ ಕಡಿಮೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಕೆಮ್ಮು, ನೆಗಡಿ, ಜ್ವರ ಇದ್ದರೆ ಅದಕ್ಕೆ ಮದ್ದಾಗಿ ಶುಂಠಿ ಟೀ ಕುಡಿದರೆ ಉತ್ತಮ ಎಂಬುದು ನಮಗೆಲ್ಲಾ ತಿಳಿದ ಸಂಗತಿ. ಆದರೆ ಶುಂಠಿ ಟೀ ಕುಡಿಯುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ? ನಿಮಗೆ ತಿಳಿದಿಲ್ಲದಿದ್ದರೆ, ಇಂದು ನಾವು ನಿಮಗೆ ಶುಂಠಿ ಚಹಾದ ಪ್ರಯೋಜನಗಳನ್ನು ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಬ್ಬಬ್ಬಾ ಇಲ್ಲಿ ಪೆಟ್ರೋಲ್‌ ಬೆಲೆ ಮತ್ತೆ ಏರಿಕೆ: 275 ರೂ. ಕ್ಕೆ ತಲುಪಿದ ಇಂಧನ ದರ!


ತೂಕ ಇಳಿಕೆ: 
ನಿಯಮಿತವಾಗಿ ಶುಂಠಿ ಟೀ ಕುಡಿಯುವುದರಿಂದ ತೂಕ ನಿಯಂತ್ರಣದಲ್ಲಿರುತ್ತದೆ. ವಾಸ್ತವವಾಗಿ ಶುಂಠಿ ಚಹಾವನ್ನು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ. ಆದ್ದರಿಂದ ನಿಮ್ಮ ಆಹಾರವು ಸ್ಥಿರವಾಗಿರುತ್ತದೆ. 


ಜೀರ್ಣಾಂಗ ವ್ಯವಸ್ಥೆ ಉತ್ತಮ: 
ಶುಂಠಿ ಚಹಾ ಸೇವನೆಯಿಂದ ಜೀರ್ಣಕ್ರಿಯೆಯೂ ಉತ್ತಮವಾಗಿರುತ್ತದೆ. ವಾಸ್ತವವಾಗಿ, ಶುಂಠಿ ನೈಸರ್ಗಿಕ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.


ಶೀತ ಜ್ವರಕ್ಕೆ ಮನೆಮದ್ದು: 
ಜ್ವರ ಮತ್ತು ಶೀತದಂತಹ ಸಮಸ್ಯೆಗಳಿಗೆ ಶುಂಠಿ ಕಷಾಯ ಅಥವಾ ಶುಂಠಿ ಸೇವನೆಯು ಪ್ರಯೋಜನಕಾರಿಯಾಗಿದೆ. ನೆಗಡಿ ಜಾಸ್ತಿ ಇದ್ದಲ್ಲಿ ಶುಂಠಿ ಟೀ ಸೇವಿಸಿದರೆ ಶೀಘ್ರ ಉಪಶಮನ ದೊರೆಯುತ್ತದೆ.


ರಕ್ತದೊತ್ತಡ ನಿಯಂತ್ರಣ: 
ಶುಂಠಿ ಚಹಾ ಸೇವನೆಯಿಂದ ಅಧಿಕ ರಕ್ತದೊತ್ತಡದ ಅಪಾಯ ಕಡಿಮೆಯಾಗುತ್ತದೆ. ಅಲ್ಲದೆ ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 


ತಲೆನೋವು ಶಮನ:
ಶುಂಠಿ ಟೀ ಕುಡಿಯುವುದರಿಂದ ತಲೆನೋವಿನಿಂದ ಮುಕ್ತಿ ಸಿಗುತ್ತದೆ. ನಿಮಗೆ ತಲೆ ನೋಯುತ್ತಿದ್ದರೆ ನೀವು ಶುಂಠಿ ಚಹಾವನ್ನು ಕುಡಿಯಿರಿ. ಹೀಗೆ ಮಾಡಿದರೆ ನೀವು ತಕ್ಷಣ ಪರಿಹಾರವನ್ನು ಪಡೆಯುತ್ತೀರಿ. 


ಇದನ್ನೂ ಓದಿ: ನಿವೃತ್ತಿಯ ನಂತರ ರಾಷ್ಟ್ರಪತಿ ಕೋವಿಂದ್ ಗೆ ಲೈಫ್ ಲಾಂಗ್ ಸಿಗಲಿವೆ ಈ ಸೌಲಭ್ಯಗಳು!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.