Ginger Tea: ಆರೋಗ್ಯಕ್ಕೆ ವರದಾನವಿದ್ದಂತೆ ಶುಂಠಿ ಟೀ
Ginger Tea: ವಿಶಿಷ್ಟ ಪರಿಮಳ ಮತ್ತು ಸುವಾಸನೆಭರಿತವಾದ ಶುಂಠಿಯಿಂದ ಚಹಾ ತಯಾರಿಸಿ ಕುಡಿಯುವುದು ಆರೋಗ್ಯಕ್ಕೆ ವರದಾನವಿದ್ದಂತೆ ಎನ್ನಲಾಗುತ್ತದೆ.
Ginger Tea Benefits: ಶುಂಠಿ ಟೀ ರುಚಿಗಷ್ಟೇ ಅಲ್ಲ ಆರೋಗ್ಯಕ್ಕೂ ತುಂಬಾ ಲಾಭದಾಯಕವಾಗಿದೆ. ಶುಂಠಿಯಲ್ಲಿ ಹಲವು ಔಷಧೀಯ ಗುಣಗಳು ಅಡಕವಾಗಿರುವುದರಿಂದ ನಿತ್ಯ ಒಂದೆರಡು ಕಪ್ ಶುಂಠಿ ಟೀ (Ginger Tea) ಕುಡಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಜೊತೆಗೆ ನಮ್ಮ ಹಲವು ಆರೋಗ್ಯ ಸಮಸ್ಯೆಗಳಿಗೂ ಕೂಡ ಪರಿಹಾರ ದೊರೆಯುತ್ತದೆ ಎಂದು ಹೇಳಲಾಗುತ್ತದೆ.
ಶುಂಠಿ ಟೀ ಕುಡಿಯುವುದರಿಂದ ಈ ಸಮಸ್ಯೆಗಳಿಂದ ಸಿಗುತ್ತೆ ಪರಿಹಾರ:
* ಇಮ್ಯುನಿಟಿ ಬೂಸ್ಟರ್:
ಶುಂಠಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದರಿಂದ ಕಾಲೋಚಿತ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು.
* ವಾಕರಿಕೆಗೆ ಮದ್ದು:
ಸಾಮಾನ್ಯವಾಗಿ ಕಾಡುವ ವಾಕರಿಕೆ ಅಥವಾ ವಾಂತಿ ಸಮಸ್ಯೆಗೆ ಶುಂಠಿ ಚಹಾ ಬೆಸ್ಟ್ ಮದ್ದು ಎಂತಲೇ ಹೇಳಬಹುದು. ಶುಂಠಿ ಬೇರಿನಲ್ಲಿ ಕಂಡು ಬರುವ ಬಾಷ್ಪಶೀಲ ತೈಲಗಳು ಮತ್ತು ಫೀನಾಲ್ ಸಂಯುಕ್ತಗಳಂತಹ ಸಕ್ರಿಯ ಘಟಕಗಳು ನರಮಂಡಲ, ಹೊಟ್ಟೆ ಮತ್ತು ಕರುಳಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
ಇದನ್ನೂ ಓದಿ- ಒಂದು ಚಮಚ ಈರುಳ್ಳಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ 5 ದಿನದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು!
* ರಕ್ತ ಪರಿಚಲನೆ:
ಶುಂಠಿ ಚಹಾವು ಅತ್ಯುತ್ತಮ ಆರೋಗ್ಯವನ್ನು (Ginger Tea For Health) ಕಾಪಾಡಿಕೊಳ್ಳಲು, ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಜಿಂಜರೋಲ್ ಮತ್ತು ಜಿಂಗರೋನ್ ನಂತಹ ಸಂಯುಕ್ತಗಳು ದೇಹವನ್ನು ಬೆಚ್ಚಗಿರಿಸುವ ಮೂಲಕ ಉತ್ತಮ ರಕ್ತಪರಿಚಲನೆಯನ್ನು ಪ್ರಚೋದಿಸುತ್ತವೆ.
* ನೋವು ನಿವಾರಕ
ಶುಂಠಿಯಲ್ಲಿ ಜಿಂಜರಾಲ್ ಎಂಬ ಸಂಯುಕ್ತ ಕಂಡು ಬರುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಸ್ನಾಯು ಮತ್ತು ಕೀಲು ನೋವಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ- ತೆಂಗಿನಕಾಯಿಯ ಈ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?
* ಮುಟ್ಟಿನ ಸಮಸ್ಯೆ:
ಹೆಣ್ಣು ಮಕ್ಕಳು ಋತುಚಕ್ರದ ಸಂದರ್ಭದಲ್ಲಿ ಶುಂಠಿ ಚಹಾ ಕುಡಿಯುವುದರಿಂದ ಮುಟ್ಟಿನ ಸೆಳೆತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ, ಇದು ಮುಟ್ಟು ಸಂಬಂಧಿತ ಇತರ ಅಸ್ವಸ್ಥತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.