ಬೆಂಗಳೂರು : ಬೆಳಗ್ಗೆ ಎದ್ದು ಒಂದು ಲೋಟ ಚಹಾ ಹೀರುವ ಮಜವೇ ಬೇರೆ. ಕೆಲವರಿಗಂತೂ ಚಹಾ ಇಲ್ಲದೆ ದಿನದ ಆರಂಭ ಆಗುವುದೇ ಇಲ್ಲ. ಅದೊಂಥರ ಎನರ್ಜಿ ಬೂಸ್ಟರ್ ಇದ್ದ ಹಾಗೆ. ಚಹಾ ಹೊಟ್ಟೆ ಸೇರಿದ ಮೇಲೆಯೇ ಬೇರೆ ಕೆಲಸಕ್ಕೆ ಕೈ ಹಾಕುವುದು. ಆದರೆ ಚಹಾ  ಮಾಡುವಾಗ ಅದಕ್ಕೆ ಒಂದು ತುಂಡು ಶುಂಠಿಯನ್ನು ಜಜ್ಜಿ ಸೇರಿಸಿದರೆ ಚಹಾದ ರುಚಿ ದುಪ್ಪಟ್ಟು  ಆಗುವುದು ಮಾತ್ರವಲ್ಲ. ಆರೋಗ್ಯಕ್ಕೂ ಒಳ್ಳೆಯದು. ಶುಂಠಿ ಚಹಾ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಕಬ್ಬಿಣ, ವಿಟಮಿನ್, ಆ್ಯಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಮುಂತಾದ ಪೋಷಕಾಂಶಗಳು ಇರುತ್ತವೆ. 


COMMERCIAL BREAK
SCROLL TO CONTINUE READING

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ :
ಶುಂಠಿ ಚಹಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಶುಂಠಿಯಲ್ಲಿರುವ ಪೋಷಕಾಂಶಗಳು ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ. ಸಾಂಕ್ರಾಮಿಕ ರೋಗಗಳನ್ನು ಗುಣಪಡಿಸಲು ಕೆಲಸ ಮಾಡುತ್ತದೆ. ಶುಂಠಿ ಚಹಾ ಕುಡಿಯುವುದರಿಂದ ನೆಗಡಿ, ಕೆಮ್ಮು ಮುಂತಾದ ಕಾಯಿಲೆಗಳಿಂದ ಪರಿಹಾರ ಸಿಗುತ್ತದೆ.


ಇದನ್ನೂ ಓದಿ : Dates Benefits : ತೂಕ ಇಳಿಕೆಗೆ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಖರ್ಜೂರ..!


ರಕ್ತ ಪರಿಚಲನೆ :
ಚಳಿ ಹೆಚ್ಚಾದಾಗ ದೇಹದ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಹೊತ್ತಿನಲ್ಲಿ ಶುಂಠಿ ಚಹಾವನ್ನು ಕುಡಿಯುವುದರಿಂದ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿ ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳಿದ್ದು, ರಕ್ತ ಪರಿಚಲನೆ ಸುಧಾರಿಸುತ್ತದೆ. 


ಆಯಾಸವನ್ನು ನಿವಾರಿಸುತ್ತದೆ :
ಶುಂಠಿ ಚಹಾದಲ್ಲಿರುವ ಕೆಲವು ಅಂಶಗಳು ಆತಂಕ ಮತ್ತು ಆಯಾಸವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಈ ಟೀ ಕುಡಿಯುವುದರಿಂದ ನರಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ತಲೆನೋವಿನಿಂದಲೂ ಪರಿಹಾರ ದೊರೆಯುತ್ತದೆ  ಶುಂಠಿ ಚಹಾ. 


ಆಸಿಡಿಟಿಯನ್ನು ಹೋಗಲಾಡಿಸುತ್ತದೆ :   
ಶುಂಠಿ ಟೀ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ. ಸಾದಾ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಆದರೆ ಶುಂಠಿ ಟೀ ಕುಡಿಯುವುದರಿಂದ ಅಸಿಡಿಟಿಯಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. 


ಇದನ್ನೂ ಓದಿ : Health Tips: ಈ ರೋಗಕ್ಕೆ ರಾಮಬಾಣ ಒಣ ಶುಂಠಿಯ ನೀರು


ತೂಕ ಇಳಿಸಲು ಸಹಾಯಕ :
ಶುಂಠಿ ಚಹಾವನ್ನು ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶುಂಠಿಯಲ್ಲಿರುವ ಪೋಷಕಾಂಶಗಳು ಚಯಾಪಚಯವನ್ನು ಹೆಚ್ಚಿಸುತ್ತದೆ. ಈ ಚಹಾವು ಕ್ಯಾಲೊರಿಗಳನ್ನು  ಬರ್ನ್ ಮಾಡುವಲ್ಲಿ ಸಹಾಯ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಿಸುತ್ತದೆ. 


ಆದರೆ ಈ ವಿಷಯಗಳು ನೆನಪಿರಲಿ : 
ಶುಂಠಿ ಚಹಾವು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅತಿಯಾದರೆ ಅಮೃತ ಕೂಡಾ ವಿಷ ಎನ್ನುವುದನ್ನು ಮರೆಯಬಾರದು. ಒಬ್ಬ ವ್ಯಕ್ತಿ ದಿನಕ್ಕೆ 1-2 ಕಪ್ ಗಳಿಗಿಂತ ಹೆಚ್ಚು ಚಹಾವನ್ನು ಕುಡಿಯಬಾರದು. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.