Home Remedies For Uric Acid : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯೂರಿಕ್ ಆಮ್ಲದ ಸಮಸ್ಯೆಯು ಜನರಲ್ಲಿ ಬಹಳಷ್ಟು ಹೆಚ್ಚಾಗಿದೆ. ಯೂರಿಕ್ ಆಮ್ಲವು ನಮ್ಮ ದೇಹದಲ್ಲಿನ ಒಂದು ರೀತಿಯ ತ್ಯಾಜ್ಯ ವಸ್ತುವಾಗಿದೆ. ಇದು ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಮೂತ್ರಪಿಂಡಗಳು ಅದನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ದೇಹದಿಂದ ಹೊರಹಾಕುತ್ತವೆ. ಆದರೆ, ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ಅದು ಚೂಪಾದ ಹರಳುಗಳ ರೂಪದಲ್ಲಿ ಕೀಲುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಾಗುವುದರಿಂದ, ಕೀಲುಗಳಲ್ಲಿ ನೋವು ಮತ್ತು ಊತದಂತಹ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಬಹಳ ಮುಖ್ಯ. ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಯೂರಿಕ್ ಆಮ್ಲವನ್ನು ನಿಯಂತ್ರಿಸಬಹುದು. 


COMMERCIAL BREAK
SCROLL TO CONTINUE READING

ಯೂರಿಕ್ ಆಮ್ಲ ನಿಯಂತ್ರಿಸುವಲ್ಲಿ ಶುಂಠಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಶುಂಠಿ ತುಂಬಾ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಯೂರಿಕ್ ಆಸಿಡ್ ಅನ್ನು ನಿಯಂತ್ರಿಸುವಲ್ಲಿ ಶುಂಠಿ ಹೇಗೆ ಪ್ರಯೋಜನಕಾರಿ ಮತ್ತು ಅದನ್ನು ಹೇಗೆ ಸೇವಿಸಬೇಕು  ನೋಡೋಣ. 


ಇದನ್ನೂ ಓದಿ : ವಾರದಲ್ಲಿ ಕೇವಲ ಎರಡು ಕಪ್ ಈ ಬಿಳಿ ವಸ್ತು ಸೇವಿಸಿ ! Diabetes ನಿಯಂತ್ರಣಕ್ಕೆ ಬರುವುದು ಗ್ಯಾರಂಟಿ !


ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಶುಂಠಿ ಹೇಗೆ ಪ್ರಯೋಜನಕಾರಿ? :
ದೇಹದಲ್ಲಿ ಅತಿಯಾಗಿ ಸಂಗ್ರಹವಾದ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸುವಲ್ಲಿ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಶುಂಠಿ, ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಇದು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದ್ದು, ಯೂರಿಕ್ ಆಮ್ಲದ ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ನಿಂದಾಗುವ ಕೀಲುಗಳಲ್ಲಿನ ನೋವು ಮತ್ತು ಊತದ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.


ಶುಂಠಿಯ ಬಳಕೆ ಹೇಗೆ? : 
ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಿಸಲು, ಶುಂಠಿಯನ್ನು ಹಲವು ವಿಧಗಳಲ್ಲಿ ಸೇವಿಸಬಹುದು. 


ಶುಂಠಿ ಚಹಾ : 
ಇದಕ್ಕಾಗಿ ಎರಡು ಲೋಟ ನೀರನ್ನು ಪಾತ್ರೆಯಲ್ಲಿ ತೆಗೆದುಕೊಂಡು ಬಿಸಿ ಮಾಡಿ. 1 ಇಂಚಿನ ಶುಂಠಿಯನ್ನು ಕತ್ತರಿಸಿ ಆ ನೀರಿಗೆ ಸೇರಿಸಿ. ನಂತರ ಅದನ್ನು ಸುಮಾರು 5-10 ನಿಮಿಷಗಳ ಕಾಲ ಕುದಿಸಬೇಕು. ನಂತರ ಈ ನೀರನ್ನು ಫಿಲ್ಟರ್ ಮಾಡಿ ಸೇವಿಸಬಹುದು. 


ಇದನ್ನೂ ಓದಿ : Brain stimulation: ಮೆದುಳಿನ ಪ್ರಚೋದನೆಯಿಂದ ಮಾನಸಿಕ ಕಾಯಿಲೆಗಳಿಗೆ ಹೇಳಿ ಗುಡ್ ಬೈ..!


ಓಮಕಾಳಿನೊಂದಿಗೆ  ಶುಂಠಿ : 
ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ  ಓಮ ಕಾಳು  ಕೂಡಾ  ಪರಿಣಾಮಕಾರಿಯಾಗಿದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು,  ಕೀಲು ನೋವು ಮತ್ತು ಊತದಿಂದ ಪರಿಹಾರ ನೀಡುತ್ತದೆ. ಒಂದು ಲೋಟ ನೀರನ್ನು ಬಿಸಿ ಮಾಡಿ ಅದಕ್ಕೆ ಚಮಚ ತುರಿದ ಶುಂಠಿ ಮತ್ತು ಒಂದು ಚಮಚ ಓಮಕಾಳು  ಹಾಕಿ ಕುದಿಸಿ. ನಂತರ ಅದನ್ನು ಶೋಧಿಸಿ ಜೇನುತುಪ್ಪ ಬೆರೆಸಿ ಸೇವಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.