ನವದೆಹಲಿ: ಸತತ 21 ದಿನಗಳ ಲಾಕ್ ಡೌನ್ ಬಳಿಕ ಬೇಸಿಗೆ ಆರಂಭವಾಗಲಿದ್ದು, ವಾತಾವರಣದಲ್ಲಿನ ಉಷ್ಣಾಂಶ ಏರಿಕೆ ಭಾರತದಲ್ಲಿ ಕೊರೊನಾ ವೈರಸ್ (ಕೊವಿಡ್-19) ಸೋಂಕು ಪ್ರಸಾರವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಟಾಪ್ ಭಾರತೀಯ ಮೈಕ್ರೋಬಯಾಲಾಜಿಸ್ಟ್ ಒಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೇಶದ ಅತ್ಯಂತ ಹಳೆಯ ಸೈಂಟಿಫಿಕ್ ಆರ್ಗನೈಝೇಶನ್ ಗಳಲ್ಲಿ ಒಂದಾಗಿರುವ ಅಸ್ಸೋಸಿಯೇಶನ್ ಆಫ್ ಮೈಕ್ರೋಬಯಾಲಾಜಿಸ್ಟ್ (AMI)ನ ಮುಖ್ಯಸ್ಥ ಹಾಗೂ ಸುಪ್ರಸಿದ್ಧ ಮೈಕ್ರೋಬಯಾಲಾಜಿಸ್ಟ್ ಪ್ರೊಫೆಸ್ಸರ್ ಜೆ.ಎಸ್. ವಿರ್ದಿ ಹೇಳುವ ಪ್ರಕಾರ "ಏಪ್ರಿಲ್ ಅಂತ್ಯದವರೆಗೆ ವಾತಾವರಣದ ತಾಪಮಾನದಲ್ಲಿ ನಿಶ್ಚಿತ ಪ್ರಮಾಣದಲ್ಲಿ ಏರಿಕೆಯಾಗಲಿದ್ದು, ಇದು ಈ ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್ ನ ಪ್ರಸಾರವನ್ನು ನಿಲ್ಲಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ  ಎಂಬುದು ನನ್ನ ಭರವಸೆಯಾಗಿದೆ" ಎಂದಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವದ ಪ್ರತಿಷ್ಠಿತ ಸಂಸ್ಥಾನದ ಅಧ್ಯಕ್ಷರುಗಳು ಈ ಕುರಿತು ಬಹಿರಂಗಪಡಿಸಿದ್ದು, ಕೊರೊನಾ ವೈರಸ್ ನ ವಿಭಿನ್ನ ಮಾದರಿಗಳು ಶೀತದ ವಾತಾವರಣದಲ್ಲಿ ಬಾಳುವ ಲಕ್ಷಣಗಳನ್ನೂ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಹೇಳಿದ್ದಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಕೊರೊನಾ ವೈರಸ್ ಡಿಸೆಂಬರ್-ಏಪ್ರಿಲ್ ಈ ಅವಧಿಯಲ್ಲಿ ಹೆಚ್ಚು ಸಕ್ರೀಯವಾಗಿರುತ್ತದೆ. ಅಷ್ಟೇ ಅಲ್ಲ ಈ ವರ್ಷದ ಜೂನ್ ಅಂತ್ಯದ ವೇಳೆಗೆ ಕೊವಿಡ್-19 ಪ್ರಭಾವ ಸದ್ಯಕ್ಕಿಂದ ಕಡಿಮೆಯಾಗಲಿದೆ ಎಂದು ವಿಶ್ವದ ಬಹುತೇಕ ವೈರಾಲಾಜಿಸ್ಟ್ ಗಳೂ ಕೂಡ ಸಂಕೇತ ನೀಡಿದ್ದಾರೆ.


ಈ ಕುರಿತು ಹೇಳಿಕೆ ನೀಡಿರುವ AMI ಸಂಸ್ಥೆಯ ಮಾಹಾ ನಿರ್ದೇಶಕ ಪ್ರೊ.ಪ್ರತ್ಯುಶ್ ಶುಕ್ಲಾ, "ಕೆಲ ವಿಜ್ಞಾನಿಗಳೂ ಕೂಡ ಜೂನ್ ಥಿಯರಿ ಕುರಿತು ಹೇಳಿಕೆಗಳನ್ನು ನೀಡುತ್ತಿದ್ದು, ನಿಶ್ಚಿತವಾಗಿ ಇದು ಉಷ್ಣಾಂಶ ಏರಿಕೆಗೆ ಸಂಬಂಧಿಸಿದ್ದಾಗಿದೆ. ಈ ಕುರಿತು ನಾನು ಚೀನಾದ ನಮ್ಮ ಸಹೋದ್ಯೋಗಿಗಳ ಜೊತೆಗೂ ಕೂಡ ಚರ್ಚೆ ನಡೆಸಿದ್ದು , ಅವರು ಹೇಳುವ ಪ್ರಕಾರ ಕೊರೊನಾ ವೈರಸ್ ನ ರೇಸಿಸ್ಟಂಟ್ ಪವರ್, ಹೆಚ್ಚಿನ ಉಷ್ಣಾಂಶವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಸಾರ್ಸ್ ಅಥವಾ ಫ್ಲೂ ಸೇರಿದಂತೆ ಎಲ್ಲ ರೀತಿಯ ವೈರಸ್ ಗಳ ಅತಿ ಹೆಚ್ಚು ಪ್ರಭಾವ ಅಕ್ಟೋಬರ್ ನಿಂದ ಮಾರ್ಚ್ ವರೆಗೆ ಮಾತ್ರ ಇರುತ್ತದೆ. ಏಕೆಂದರೆ ಯಾವುದೇ ವೈರಸ್ ನ ಪ್ರಸಾರದಲ್ಲ್ಲಿ ತಾಪಮಾನ ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದೂ ಕೂಡ ಅವರು ಹೇಳುತ್ತಾರೆ" ಎಂದಿದ್ದಾರೆ.


ಏಡಿನ್ ಬರ್ಗ್ ವಿವಿಯ ಸಾಂಕ್ರಾಮಿಕ ರೋಗ ಕೇಂದ್ರ ನಡೆಸಿರುವ ಒಂದು ವಿಸ್ತೃತ ಅಧ್ಯಯನದ ಪ್ರಕಾರ, ಕೊರೊನಾ ಸೋಂಕಿನ ರೋಗಿಗಳ ಶ್ವಾಸನಳಿಕೆ ಯಿಂದ ಪಡೆಯಲಾಗಿರುವ ಒಟ್ಟು ಮೂರು ಪ್ರಕಾರದ ಕೊರೊನಾ ವೈರಸ್ ನ ಮಾದರಿಗಳು ಶೀತ ಕಾಲದಲ್ಲಿ ಹೆಚ್ಚು ಬದುಕುವ ಸಂಭವನೀಯತೆಯನ್ನು ಎತ್ತಿ ಹಿಡಿದಿವೆ. ಈ ವೈರಸ್ ನ ಸೋಂಕು ಡಿಸೆಂಬರ್ ನಿಂದ ಏಪ್ರಿಲ್ ಅವಧಿಯಲ್ಲಿ ಹೆಚ್ಚು ಹರಡುತ್ತದೆ ಎಂದೂ ಕೂಡ ಅಧ್ಯಯನದಿಂದ ತಿಳಿದುಬಂದಿದೆ. ಆದರೆ, ಇದಕ್ಕೆ ವಿಪರೀತ ಎಂಬಂತೆ ಕೊವಿಡ್-19 ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತದೆ ಎಂಬ ಪ್ರಾಥಮಿಕ ಸಂಕೇತಗಳೂ ಕೂಡ ಲಭಿಸಿವೆ ಎಂಬುದನ್ನು ಮೈಕ್ರೋಬಯಾಲಾಜಿಸ್ಟ್ ಗಳು ಒಪ್ಪಿಕೊಳ್ಳುತ್ತಾರೆ. ಹೊಸ ವೈರಸ್ ನ ಪ್ಯಾಟರ್ನ್ ಅಧ್ಯಯನದಿಂದ ಈ ವೈರಸ್ ತಂಪಾದ ಹಾಗೂ ಒಣ ಕ್ಷೇತ್ರಗಳಲ್ಲಿ ಅಧಿಕ ಸೋಂಕು ಪಸರಿಸುತ್ತದೆ ಎಂದು ಕೂಡ ತಿಳಿದುಬಂದಿದೆ.