Health tips:ಕಡಲೆ ಕಾಳುಗಳಲ್ಲಿ ಪ್ರೋಟೀನ್ ಅಂಶಗಳು ವಿಟಮಿನ್ ' ಸಿ ', ವಿಟಮಿನ್ ' ಬಿ6', ಫೋಲೇಟ್, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ ಮತ್ತು ಮೆಗ್ನೀಸಿಯಮ್ ಪೋಷಕಾಂಶಗಳು ಸಮೃದ್ಧವಾಗಿದೆ.   ಕಡಲೆಕಾಳುನ್ನು ಪ್ರತಿ ಸಾಂಬಾರಿಗೂ  ರುಚಿ ಹಾಗೂ ಸ್ವಾದಿಷ್ಟವಾಗಿರುತ್ತದೆ. ಈ ಕಾಳಿನಿಂದ ಆರೋಗ್ಯಕ್ಕೆ ಯಾವೆಲ್ಲಾ ರೀತಿಯಲ್ಲಿ ಪ್ರಯೋಜನ ಇದೆ ತಿಳಿಯೋಣ


COMMERCIAL BREAK
SCROLL TO CONTINUE READING

ಕಡಲೆ ಕಾಳಿನ ಉಪಯೋಗಗಳು
1. ತೂಕ ಇಳಿಕೆ 
ಕಡಲೆ ಕಾಳಿನಲ್ಲಿ ಸಾಕಷ್ಟು ಪ್ರೊಟೀನ್ ಮತ್ತು ಫೈಬರ್ ಸಮೃದ್ದವಾಗಿರುವುದರಿಂದ ತೂಕ ಇಳಿಕೆಗೆ ಸಹಕಾರಿ ಹಾಗೂ   ಆರೋಗ್ಯಕರ ಆಹಾರ ಕ್ರಮದಲ್ಲಿ ಸೂಕ್ತವಾಗಿದೆ. . ಪ್ರೊಟೀನ್ ಮತ್ತು ಫೈಬರ್ ಹಸಿವನ್ನು ನಿಯಂತ್ರಿಸುವ ಮೂಲಕ ತೂಕ  ನಿಯಂತ್ರಣದಲ್ಲಿ ಇಡಲು  ಉಪಯುಕ್ತವಾಗಿದೆ. 


2. ಮಧುಮೇಹ ನಿಯಂತ್ರಣ
.ಕಡಲೆ ಕಾಳು ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು  ನಿಯಂತ್ರಿಸುತ್ತದೆ.ಕಡಲೆ ಕಾಳಿನಲ್ಲಿರುವ ಫೈಬರ್ , ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದ ಲಿಪಿಡ್ ಮಟ್ಟವನ್ನು ಉತ್ತಮವಾಗಿ ನಿಯಂತ್ರಿಸುವುದರ ಜೊತೆಗೆ , ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ. ಅಧಿಕ ಫೈಬರ್ ಉಳ್ಳ ಆಹಾರ ಸೇವಿಸುವುದರಿಂದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.


ಇದನ್ನೂ ಓದಿ: Benefits of Camphor: 2 ರೂಪಾಯಿಯ ಕರ್ಪೂರ ನಿಮ್ಮ ಜೀವನವನ್ನು ವಜ್ರದಂತೆ ಬೆಳಗಿಸುತ್ತದೆ: ಆದ್ರೆ ನೀವು ಮಾಡಬೇಕಿರುವುದು ಇಷ್ಟೇ!


3.ಸ್ನಾಯುಗಳ ಬಲ
ಕಡಲೆ ಕಾಳು ಮೂಳೆಗಳ ಬೆಳವಣಿಗೆ ಪ್ರಯೋಜನಕಾರಿಯಾಗಿದೆ.  ಅದರಲ್ಲಿರುವ ಕ್ಯಾಲ್ಸಿಯಂ, ಮೆಗ್ನೀಶಿಯಂ, ಪ್ರಾಸ್ಫರಸ್ ಮತ್ತು ವಿಟಮಿನ್ ಕೆ ಸೇರಿದಂತೆ ಹಲವಾರು  ವಿಟಮಿನ್ ಇದರಲ್ಲಿ ಸಮೃದ್ಧವಾಗಿದೆ. 
4. ಹೃದಯದ ಆರೋಗ್ಯ
ಅಧ್ಯಯನ ವರದಿಯ ಪ್ರಕಾರ  ಕಡಲೆ ಕಾಳಿನ ಬಳಕೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿರುತ್ತದೆ.  ಅಧಿಕ ಕೊಲೆಸ್ಟ್ರಾಲ್‍ ಅಂಶವು  ಹೃದಯ ಸಂಬಂಧಿ ಖಾಯಿಲೆಯಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಕಡಲೆ ಕಾಳು ಸೇವನೆ ಹೃದಯದ ಆರೋಗ್ಯ ಸುಧಾರಿಸುತ್ತದೆ.


ಇದನ್ನೂ ಓದಿ:ತೂಕ ಇಳಿಕೆಯ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳಲ್ಲಿ ಪರಿಣಾಮಕಾರಿ ಈ ಚಹಾ ಸೇವನೆ!


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದು ತಜ್ಞರ ಅಭಿಪ್ರಾಯವಲ್ಲ. ಇದನ್ನು ಅಳವಡಿಸಿಕೊಳ್ಳುವ ಮೊದಲು, ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.