Cholesterol: ಕಡಲೆ ಹಿಟ್ಟಿನಲ್ಲಿದೆ ಕೊಳೆಸ್ತ್ರಾಲ್ ನಿಯಂತ್ರಿಸುವ, ತೂಕ ಇಳಿಸುವ ತಾಕತ್ತು!
Cholesterol Control Tips: ಡಯಾಬಿಟೀಸ್ ರೋಗಿಗಳಿಗೆ ಬೇಸನ್ ಹಿಟ್ಟು ಸೇವನೆಯು ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಿಕೊಳ್ಳಬಹುದು.
Besan For Weight Loss: ಧಾನ್ಯಗಳು ನಮ್ಮ ಆಹಾರದ ಪ್ರಮುಖ ಭಾಗಗಳಾಗಿವೆ, ನಾವು ದಿನಕ್ಕೆ ಮೂರು ಊಟದಲ್ಲಿ ಮಾಡುತ್ತೇವೆ. ಧಾನ್ಯಗಳಲ್ಲಿ ಹಿಟ್ಟು, ಕಾಳುಗಳು ಮತ್ತು ಅಕ್ಕಿ ಶಾಮೀಲಾಗಿವೆ. ನಾವು ಚಪಾತಿ ತಯಾರಿಸಲು ಗೋಧಿಯನ್ನು ಬಳಸುತ್ತೇವೆ. ನಾವು ರೊಟ್ಟಿ ತಯಾರಿಸಲು ಅನೇಕ ರೀತಿಯ ಧಾನ್ಯಗಳನ್ನು ಬಳಸುತ್ತೇವೆ ಬಳಸುತ್ತೇವೆ. ಕೆಲವು ಬೇಳೆಕಾಳುಗಳ ಹಿಟ್ಟು ಕೂಡ ತಯಾರಿಸಲಾಗುತದೆ. ಬಹುತೇಕ ಜನರಿಗೆ ಹೆಸರುಬೇಳೆ ಹಿಟ್ಟು ತಿಳಿದಿರುತ್ತದೆ. ಕಡಲೆ ಹಿಟ್ಟು ಅಥವಾ ಬೇಸನ್ ಅನ್ನು ಕಡಲೇ ಕಾಳುಗಳಿಂದ ತಯಾರಿಸಲಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಬೇಸನ್ ನಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಇದೆ. ಈ ಹಿಟ್ಟು ಉಳಿದ ಹಿಟ್ಟಿಗಿಂತ ಹೆಚ್ಚು ಫೈಬರ್ ಅನ್ನು ಹೊಂದಿರುತ್ತದೆ. ಇದರೊಂದಿಗೆ, ಇದು ಗ್ಲುಟನ್ ಅನ್ನು ಹೊಂದಿರುವುದಿಲ್ಲ. ಇದನ್ನು ಅನೇಕ ರೀತಿಯ ಭಕ್ಷ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಬೇಸನ್ ಸೇವನೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಸೇವನೆಯಿಂದ ಸ್ಥೂಲಕಾಯ ನಿಯಂತ್ರಿಸಬಹುದು, ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಕೂಡ ಕರಗಿ ದೇಹದಿಂದ ಹೊರಬರುತ್ತದೆ. ಕಡಲೆ ಹಿಟ್ಟಿನ ಸೇವನೆಯು ಕೊಲೆಸ್ಟ್ರಾಲ್ ಅನ್ನು ಹೇಗೆ ನಿಯಂತ್ರಿಸುತ್ತದೆ ಮತ್ತು ದೇಹಕ್ಕೆ ಅದರ ಪ್ರಯೋಜನಗಳೇನು ಎಂಬುದನ್ನು ನಾವು ತಿಳಿಯೋಣ ಬನ್ನಿ.
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ
ಟೊರೊಂಟೊ ವಿಶ್ವವಿದ್ಯಾನಿಲಯದ ಸಂಶೋಧಕರು, ಬೇಳೆ ಹಿಟ್ಟಿನ ಅಧ್ಯಯನದಲ್ಲಿ, ಕಡಿಮೆ ಸಾಂದ್ರತೆಯ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಅದ್ಭುತ ಸಾಮರ್ಥ್ಯವನ್ನು ಅದು ಹೊಂದಿದೆ ಎಂದು ಕಂಡುಹಿಡಿದಿದ್ದಾರೆ, ಅಂದರೆ ಕೆಟ್ಟ ಕೊಲೆಸ್ಟ್ರಾಲ್. ಕಡಲೆ ಹಿಟ್ಟಿನಲ್ಲಿರುವ ಆಹಾರದ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ. ಇದೇ ವೇಳೆ, ಬೇಸನ್ ಸೇವನೆಯು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದಿಲ್ಲ ಎಂದು ಆಸ್ಟ್ರೇಲಿಯಾದಲ್ಲಿ ನಡೆಸಲಾದ ಒಂದು ಅಧ್ಯಯನ ಪತ್ತೆಹಚ್ಚಿದೆ.
ಸಕ್ಕರೆಯ ಮಟ್ಟ ನಿಯಂತ್ರಿಸುತ್ತದೆ
ರೆಡ್‌ಕ್ಲಿಫ್ಲ್ಯಾಬ್ ಪ್ರಕಾರ, ಕಡಲೆ ಹಿಟ್ಟು ರಕ್ತದಲ್ಲಿನ ಸಕ್ಕರೆ ಹೆಚ್ಚಾಗಲು ಅನುಮತಿಸುವುದಿಲ್ಲ. ಏಕೆಂದರೆ ಬೇಳೆ ಹಿಟ್ಟು ಆಹಾರದ ಫೈಬರ್ ನಿಂದ ಸಮೃದ್ಧವಾಗಿದೆ ಮತ್ತು ಪ್ರೋಟೀನ್‌ನಲ್ಲಿ ಸಮೃದ್ಧವಾಗಿದೆ, ಇದು ಕಾರ್ಬೋಹೈಡ್ರೇಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಅಂದರೆ, ನಾವು ಸಿಹಿ ಪದಾರ್ಥಗಳನ್ನು ಸೇವಿಸಿದಾಗ, ಇದು ಕಾರ್ಬೋಹೈಡ್ರೇಟ್ಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ, ಇದರಿಂದಾಗಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ. ಒಂದು ಅಧ್ಯಯನದ ಪ್ರಕಾರ, ಆಹಾರ ಸೇವನೆಯ ಬಳಿಕ ಬೇಸನ್ ಅಥವಾ ಬ್ಲಾಕ್ ಗ್ರಾಂ ಸೇವನೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ಶೇ.36 ರಷ್ಟು ಕಡಿಮೆಯಾಗಿಸುತ್ತದೆ.
ಬೇಸನ್ ಹಿಟ್ಟು ತೂಕವನ್ನು ನಿಯಂತ್ರಿಸುತ್ತದೆ
ಬೇಸನ್ ಹಿಟ್ಟಿನಲ್ಲಿ ಹೇರಳ ಪ್ರಮಾಣದಲ್ಲಿ ಆಹಾರದ ಫೈಬರ್ ಕಂಡುಬರುವುದರಿಂದ, ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 2010 ರಲ್ಲಿ ನಡೆಸಲಾದ ಒಂದು ಅಧ್ಯಯನದ ಪ್ರಕಾರ, ಬೇಸನ್ ಸೇವಿಸಿದ ನಂತರ, ಇಡೀ ದಿನ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಇದು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಅಧ್ಯಯನದಲ್ಲಿ, ಕೆಲವು ಜನರನ್ನು 12 ವಾರಗಳವರೆಗೆ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಬೇಳೆ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿದ ನಂತರ ಹಸಿವಿನ ಭಾವನೆ ಸಾಕಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ.
ಬೇಸನ್ ಹೃದಯವನ್ನು ಆರೋಗ್ಯವಾಗಿರಿಸುತ್ತದೆ
ಮೆಗ್ನೀಸಿಯಮ್, ಪೊಟ್ಯಾಸಿಯಮ್, ಮುಂತಾದ ಅನೇಕ ಖನಿಜಗಳು ಬೇಸನ್ ನಲ್ಲಿ ಕಂಡುಬರುತ್ತವೆ, ಇದು ಆರೋಗ್ಯಕರ ಹೃದಯಕ್ಕೆ ತುಂಬಾ ಮುಖ್ಯವಾಗಿದೆ. ಒಂದು ಅಧ್ಯಯನದ ಪ್ರಕಾರ, ಮೂರು ಟೀಚಮಚ ಬೇಳೆ ಹಿಟ್ಟಿನಲ್ಲಿ ಬಾಳೆಹಣ್ಣಿನಷ್ಟು ಪೊಟ್ಯಾಸಿಯಮ್ ಇದೆ. ಪೊಟ್ಯಾಸಿಯಮ್ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದುಬಂದಿದೆ.
ಚರ್ಮಕ್ಕೆ ಹೊಳಪು ತರುತ್ತದೆ
ತ್ವಚೆಯ ಮೇಲೆ ಬೇಳೆ ಹಿಟ್ಟನ್ನು ಬಳಸುವುದರಿಂದ ಚರ್ಮಕ್ಕೆ ಅದ್ಭುತವಾದ ಹೊಳಪು ಸಿಗುತ್ತದೆ. ಇದಲ್ಲದೆ ಮುಖದ ಮೇಲಿನ ಮೊಡವೆಗಳು ಮತ್ತು ಕಲೆಗಳನ್ನು ಸಹ ಇದರಿಂದ ತೆಗೆದುಹಾಕಬಹುದು. ಮುಖದ ಮೇಲಿನ ಫೇಸ್ ಪ್ಯಾಕ್‌ಗಳಿಗೆ ಬೇಸನ್ ಅತ್ಯುತ್ತಮ ಔಷಧವಾಗಿದೆ. ಮುಖ ಕಾಂತಿಯುತವಾಗಬೇಕೆಂದರೆ ಬೇಳೆ ಹಿಟ್ಟಿನಲ್ಲಿ ರೋಸ್ ವಾಟರ್ ಬೆರೆಸಿ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದರ ನಂತರ, ಮುಖವನ್ನು ಸ್ವಚ್ಛಗೊಳಿಸಿ. ಕೆಲವೇ ದಿನಗಳಲ್ಲಿ, ನಿಮಗೆ ಮೊಡವೆಗಳು ಮತ್ತು ಕಲೆಗಲಿಂದ ಮುಕ್ತಿ ಸಿಗಲಿದೆ.
ಇದನ್ನೂ ಓದಿ-ಹಲವು ಆರೋಗ್ಯ ಸಮಸ್ಯೆಗಳಿಗೆ ಕರಿಮೆಣಸು ಒಂದು ಪರಿಣಾಮಕಾರಿ ಮನೆಮದ್ದು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.