Guava Benefits In Winter: ನಿಸರ್ಗಕದತ್ತವಾಗಿ ದೊರೆಯುವ ಯಾವುದೇ ಆಹಾರವೂ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಉತ್ತಮ ಆರೋಗ್ಯಕ್ಕೆ ವೈದ್ಯರೂ ಕೂಡ ಹಣ್ಣುಗಳನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ. ಎಲ್ಲ ಹಣ್ಣುಗಳನ್ನು ಸೇವಿಸಲು ಒಂದೊಂದು ಋತುಮಾನಗಳಿವೆ. ಹಾಗೆಯೇ ಆರ್ಯುವೇದದಲ್ಲಿ ಪೇರಳೆ ಹಣ್ಣನ್ನು ಯಾವ ಋತುಮಾನದಲ್ಲಿ, ಯಾವ ಸಮಯದಲ್ಲಿ ಸೇವಿಸಬೇಕು ಎನ್ನುವುದನ್ನು ತಿಳಿಸಲಾಗಿದೆ. ಆಯುರ್ವೇದದ ಪ್ರಕಾರ, ಚಳಿಗಾಲದಲ್ಲಿ ಪೇರಳೆ ಹಣ್ಣನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳು ಲಭ್ಯವಾಗಲಿದೆ ಎಂದು ಉಲ್ಲೇಖಿಸಲಾಗಿದೆ. 


COMMERCIAL BREAK
SCROLL TO CONTINUE READING

ಪೇರಳೆ ಹಣ್ಣನ್ನು ತಿನ್ನುವುದರಿಂದ ನೀವು ಫಿಟ್‌ ಆಗಿರಬಹುದು. ಮಾತ್ರವಲ್ಲ ಹೊಟ್ಟೆಯಲ್ಲಿನ ಕೊಬ್ಬಿನ ಸಮಸ್ಯೆಯನ್ನು ನಿವಾರಿಸಲು ಕೂಡ ಪೇರಳೆ ಹಣ್ಣಿನ ಸೇವನೆ ಉತ್ತಮ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಚಳಿಗಾಲದಲ್ಲಿ ಪೇರಳೆ ಹಣ್ಣು ಎಂದರೆ ಸೀಬೆಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವೆಲ್ಲಾ ಪ್ರಯೋಜನಗಳು ಲಭ್ಯವಾಗಲಿದೆ ಎಂದು ತಿಳಿಯೋಣ...


ಇದನ್ನೂ ಓದಿ- Health Tipes : ಕಲ್ಲಂಗಡಿ ಹಣ್ಣಿನಲ್ಲಿದೆ ಔಷಧೀಯ ಗುಣಗಳು ....!


ಪೇರಳೆ ಹಣ್ಣನ್ನು ಸೇವಿಸುವುದರಿಂದಾಗುವ ಪ್ರಯೋಜನಗಳು :
* ಪೇರಳೆ ಹಣ್ಣನ್ನು ತಿನ್ನುವುದರಿಂದ ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡಬಹುದು 
* ಈ ಹಣ್ಣು ಹಲ್ಲುಗಳನ್ನು ಗಟ್ಟಿಯಾಗಿ ಮತ್ತು ಸುಂದರವಾಗಿಸುತ್ತವೆ.
* ಮಲಬದ್ದತೆ ಸಮಸ್ಯೆ ಇರುವವರಿಗೆ ಪೇರಳೆ ಹಣ್ಣಿನ ನಿಯಮಿತ ಸೇವನೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
* ಅಜೀರ್ಣ, ಗ್ಯಾಸ್‌ ನಂತಹ ಉದರ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುವಲ್ಲಿಯೂ ಕೂಡ ಪೇರಳೆ ಸಹಕಾರಿ.
* ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ.
* ವಿಶೇಷವಾಗಿ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಈ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿದೆ.
* ಪೇರಳೆ ಹಣ್ಣಿನ ಸೇವನೆಯು ರಕ್ತ ಪರಿಚಲನೆಯನ್ನು ಸರಿಯಾಗಿಡುವುದರ ಜೊತೆಗೆ ನಿಮ್ಮ ಆರೋಗ್ಯವನ್ನ ಸಕ್ರಿಯವಾಗಿ ಕಾಪಾಡುತ್ತದೆ.


ಇದನ್ನೂ ಓದಿ- ಡಯಾಬಿಟಿಸ್ ರೋಗಿಗಳೇ ಗಮನಿಸಿ! ಯಾವುದೇ ಕಾರಣಕ್ಕೂ ಈ ಹಣ್ಣುಗಳನ್ನು ಸೇವಿಸಬೇಡಿ


ಪೇರಳೆ ಹಣ್ಣುಗಳನ್ನು ಸೇವಿಸಲು ಸರಿಯಾದ ಸಮಯ ಹಾಗೂ ಋತುಮಾನ ಯಾವುದು?
ಬೇಸಿಗೆ ಕಾಲದಲ್ಲಿ ಪೇರಳೆಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಆದರೆ ಚಳಿಗಾಲದಲ್ಲಿ ಈ ರೀತಿ ಮಾಡುವುದರಿಂದ ಶೀತ ಹಾಗೂ ಹೊಟ್ಟೆ ನೋವು ಉಂಟಾಗಬಹುದು. ಅದ್ದರಿಂದ ಚಳಿಗಾಲದಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಉಪಹಾರದ ಮೊದಲು ತಿಂದರೆ ಅದು ನಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.  


ಮಳೆಗಾಲದಲ್ಲಿ ಪೇರಳೆ ಹಣ್ಣಿನಲ್ಲಿ ಹುಳುಗಳು ಹೆಚ್ಚಾಗಿ ಕಂಡು ಬರುತ್ತವೆ. ಆದ್ದರಿಂದ ಈ ಋತುವಿನಲ್ಲಿ ನೈರ್ಮಲ್ಯದ ದೃಷ್ಟಿಯಿಂದ ಪೇರಳೆಯನ್ನು ಹೆಚ್ಚು ಕಾಳಜಿಯಿಂದ ಸೇವಿಸಬೇಕು. ಪೇರಳೆ ಹಣ್ಣನ್ನು ಉಪ್ಪಿನೊಂದಿಗೆ ಸೇವಿಸುವುದರಿಂದ ಸಾಕಷ್ಟು ಆರೋಗ್ಯದ ಪ್ರಯೋಜನಗಳನ್ನು ಪಡೆಯಬಹುದು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.