Benefits of guava leaves mixed With Ginger :ನಾವು ಆರೋಗ್ಯ ಸಮಸ್ಯೆ ಕಾಣಿಸಿಕೊಂಡಾಗ ತಕ್ಷಣ ಮಾತ್ರೆಗಳನ್ನು ಸೇವಿಸಲು ಮುಂದಾಗುತ್ತೇವೆ. ಆದರೆ ಎಲ್ಲಾ  ಸಮಸ್ಯೆಗಳಿಗೂ ಮಾತ್ರೆ, ಸಿರಪ್ ಸೇವಿಸುವ ಅಗತ್ಯವಿರುವುದಿಲ್ಲ. ಮನೆ ಮದ್ದಿನ ಸಹಾಯದಿಂದಲೂ ಈ ಸಮಸ್ಯೆಯನ್ನು ಬಗೆಹರಿಸಬಹುದು. ನಾವಿಂದು ಅಂಥದ್ದೇ ಒಂದು ಮನೇ ಮದ್ದಿನ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ಇದನ್ನೂ ಸೇವಿಸಿದರೆ ನೀವು ಎದುರಿಸುತ್ತಿರುವ ಅನೇಕ ರೋಗಗಳು ಬುಡದಿಂದಲೇ ಮಾಯವಾಗುತ್ತದೆ. ಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ  ಕೆಲಸ ಮಾಡುತ್ತದೆ. ಆದರೆ, ಸರಿಯಾದ ವಿಧಾನದಲ್ಲಿ ಇದನ್ನೂ ಸೇವಿಸಬೇಕು ಅಷ್ಟೇ. 


COMMERCIAL BREAK
SCROLL TO CONTINUE READING

ಪೇರಳೆ ಎಲೆ ಮತ್ತು ಶುಂಠಿ ರಸ : 
ನೀವು ಎಂದಾದರೂ ಪೇರಳೆ ಎಲೆಗಳು ಮತ್ತು ಶುಂಠಿಯನ್ನು ಒಟ್ಟಿಗೆ ಸೇವಿಸಿದ್ದೀರಾ? ಇಲ್ಲ ಎಂದಾದಲ್ಲಿ ಒಮ್ಮೆ ಈ ಎರಡರ ಮಿಶ್ರಣವನ್ನು ಖಂಡಿತವಾಗಿಯೂ ಪ್ರಯತ್ನಿಸಿ. ಈ ಎರಡೂ ಪದಾರ್ಥಗಳನ್ನು ಬೆರೆಸಿ ತರಾರಿಸುವ ಮಿಶ್ರಣ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು  ಬುಡದಿಂದಲೇ ತೆಗೆದು ಹಾಕುತ್ತದೆ. ಪೇರಳೆ ಎಲೆಗಳಲ್ಲಿ ಪಾಲಿಸ್ಯಾಕರೈಡ್, ಫೈಬರ್, ವಿಟಮಿನ್ ಸಿ, ಆ್ಯಂಟಿ ಹೈಪರ್ ಗ್ಲೈಸೆಮಿಕ್ ನಂತಹ ಗುಣಗಳು ಕಂಡು ಬರುತ್ತವೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  ಇನ್ನು ಶುಂಠಿ ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದಲ್ಲದೆ, ಇದು ಪೋಷಕಾಂಶಗಳ ಉಗ್ರಾಣವಾಗಿದೆ. ಇಷ್ಟು ಮಾತ್ರವಲ್ಲದೆ, ಪೇರಳೆ ಎಲೆಗಳಲ್ಲಿ ವಿಟಮಿನ್ ಬಿ ಮತ್ತು ಸಿ ಕಂಡುಬರುತ್ತದೆ. ಇದು ನಿಮ್ಮ ಅನೇಕ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಪೇರಳೆ ಎಲೆಯ ರಸ ಮತ್ತು ಶುಂಠಿಯನ್ನು ನಿಯಮಿತವಾಗಿ ಸೇವಿಸಿದರೆ, ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪರಿಣಾಮಕಾರಿಯಾಗುವುದು ಗ್ಯಾರಂಟಿ. ಪೇರಳೆ ಎಲೆ ಮತ್ತು ಶುಂಠಿಯನ್ನು ಒಟ್ಟಿಗೆ ಸೇವಿಸುವುದರಿಂದ ಆಗುವ ಲಾಭಗಳೇನು  ನೋಡೋಣ. 


ಇದನ್ನೂ ಓದಿ : ಮಧುಮೇಹಿಗಳು ಖಾಲಿ ಹೊಟ್ಟೆಗೆ ಹಾಗಲಕಾಯಿ ಜ್ಯೂಸ್ ಕುಡಿದರೆ ಏನಾಗುತ್ತದೆ ಗೊತ್ತೇ!


ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ : 
ಪೇರಳೆ ಎಲೆ ಮತ್ತು ಶುಂಠಿಯ ರಸವನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.ಇದು ಮಲವನ್ನು ಸಡಿಲಗೊಳಿಸುವ ಮೂಲಕ ಕರುಳಿನ ಚಲನೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.ನೀವು ದೀರ್ಘಕಾಲದವರೆಗೆ ಮಲಬದ್ಧತೆಯಿಂದ ಬಳಲುತ್ತಿದ್ದರೆ, ಪೇರಳೆ ಎಲೆಗಳೊಂದಿಗೆ ಶುಂಠಿಯನ್ನು ಖಂಡಿತವಾಗಿ ಸೇವಿಸಬಹುದು. 


ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣ : 
ಪೇರಳೆ ಎಲೆಗಳು ಮಧುಮೇಹ ನಿವಾರಕ ಗುಣಗಳನ್ನು ಹೊಂದಿವೆ. ಇನ್ನು ಶುಂಠಿಯು ಉರಿಯೂತದ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಈ ಎರಡು ಪದಾರ್ಥಗಳ ಮಿಶ್ರಣಗಳನ್ನು ಸೇವಿಸುವ ಮೂಲಕ ಮಧುಮೇಹದ ಮಟ್ಟವನ್ನು ನಿಯಂತ್ರಿಸಬಹುದು. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಬಚ್ಚನ್ ಮೊಮ್ಮಗನಿಗೆ ಇದೆಯಂತೆ ಗುಣವಾಗದ ಕಾಯಿಲೆ ! ತಾಯಿ ಶ್ವೇತಾ ಬಚ್ಚನ್ ನಿಂದ ಬಂದಿರುವ ರೋಗ ಎಂದ ಅಗಸ್ತ್ಯ ನಂದಾ!


ಹಲ್ಲುನೋವು ನಿವಾರಣೆ :
ಹಲ್ಲುನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು ಪೇರಳೆ ಎಲೆಯ ರಸ ಮತ್ತು ಶುಂಠಿಯ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸಿ.ಇದಲ್ಲದೆ, ಈ ಮಿಶ್ರಣವನ್ನು ನಿಮ್ಮ ಹಲ್ಲುಗಳ ಮೇಲೆ ಸ್ವಲ್ಪ ಸಮಯದವರೆಗೆ  ಇರಿಸಿಕೊಳ್ಳಬಹುದು. ಇದು ನೋವನ್ನು ಕಡಿಮೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ.


ತೂಕ ಇಳಿಸಲು ಸಹಾಯಕ : 
ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು, ಪೇರಳೆ ಎಲೆಗಳು ಮತ್ತು ಶುಂಠಿಯ ಮಿಶ್ರಣವನ್ನು ಸೇವಿಸುವುದು ಆರೋಗ್ಯಕರ ಆಯ್ಕೆಯಾಗಿದೆ. ಇದಕ್ಕಾಗಿ ಕೆಲವು ಪೇರಳೆ ಎಲೆಗಳನ್ನು 1 ಕಪ್ ನೀರಿನಲ್ಲಿ ತುರಿದ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬೆಳಿಗ್ಗೆ ಈ ಕಷಾಯವನ್ನು ಸೇವಿಸುವುದರಿಂದ ದೇಹದ ತೂಕವನ್ನು ತ್ವರಿತವಾಗಿ ಕಡಿಮೆಯಾಗುತ್ತದೆ.  


ಗಂಟಲು ನೋವಿನಿಂದ ಪರಿಹಾರ : 
ಗಂಟಲು ನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು, ಶುಂಠಿ ಮತ್ತು ಪೇರಳೆ ಎಲೆಗಳ ರಸವನ್ನು ಕುಡಿಯಬಹುದು. ಇದು ಗಂಟಲಿನ ಊತ ಮತ್ತು ನೋವಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.