Guava leaves Business : ಈ ಭೂಮಿಯಲ್ಲಿ ನೂರಾರು ಸಾವಿರ ವಿಧದ ಸಸ್ಯಗಳಿವೆ. ಅವುಗಳಲ್ಲಿ 90 ಪ್ರತಿಶತ ಭಾರತದಲ್ಲಿ ಬೆಳೆಯುತ್ತವೆ. ಅದಕ್ಕಾಗಿಯೇ ನಮ್ಮ ದೇಶವು ತುಂಬಾ ವಿಶೇಷವಾಗಿದೆ. ಸಂಜೀವನಿ ಹುಟ್ಟಿದ್ದು ಮಣ್ಣು ನಮ್ಮದು. ಜಗತ್ತನ್ನು ಪೋಷಿಸುವ ಬೇವಿನ ನಾಡು ನಮ್ಮದು. ನಮ್ಮ ಭಾರತವು ಸಾವಿರಾರು ಬಗೆಯ ಹೂವುಗಳು, ಹಣ್ಣುಗಳು ಮತ್ತು ತರಕಾರಿಗಳಿಗೆ ನೆಲೆಯಾಗಿದೆ. 


COMMERCIAL BREAK
SCROLL TO CONTINUE READING

ಇಂತಹ ದೇಶದಲ್ಲಿ ಪ್ರತಿ ಸಸ್ಯವೂ ಅಮೂಲ್ಯ. ಪ್ರತಿಯೊಂದು ಮರವೂ ಒಂದಿಷ್ಟು ಔಷಧಿ ಗುಣಗಳನ್ನು ಹೊಂದಿವೆ.. ನಿಮ್ಮ ಮನೆಯ ಹಿತ್ತಲಿನಲ್ಲಿ ಬೆಳೆಯುವ ಹಲವು ಸಸ್ಯಗಳೂ ಸಹ ಔಷಧ ಗುಣಗಳನ್ನು ಹೊಂದಿರುತ್ತವೆ ಆದರೆ, ಈ ವಿಚಾರ ನಿಮಗೆ ತಿಳಿದಿರುವುದಿಲ್ಲ. ಈ ಪೈಕಿ ಪೇರಲ ಮರವೂ ಒಂದು. ಪೇರಲ ಎಲೆಯ ನಿಜವಾದ ಪ್ರಯೋಜನಗಳು ನಿಮಗೆ ತಿಳಿದಿದೆಯೇ? ಬನ್ನಿ ತಿಳಿಯೋಣ.. 


ಇದನ್ನೂ ಓದಿ:ಕಿಡ್ನಿ ಸ್ಟೋನ್ ಅನ್ನು ಪುಡಿ ಮಾಡಿ ಮೂತ್ರದ ಮೂಲಕವೇ ಹೊರ ಹಾಕುತ್ತದೆ ಈ ವಸ್ತು! ಅಸಹನೀಯ ನೋವಿನಿಂದಲೂ ಸಿಗುವುದು ಪರಿಹಾರ


ಇಂದಿನ ಬ್ಯುಸಿ ಲೈಫ್ ನಲ್ಲಿ.. ನಾವು ಏನು ತಿನ್ನುತ್ತೇವೆ.. ಯಾವಾಗ ತಿನ್ನುತ್ತೇವೆ ಎಂಬುದರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯದ ಜೊತೆಗೆ ಕಳಪೆ ಆಹಾರವನ್ನೂ ನಾವು ಇಂದು ಸೇವಿಸುತ್ತಿದ್ದೇವೆ.. ಇದು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. 


ಉತ್ತಮ ಆರೋಗ್ಯವು ಉತ್ತಮ ಜೀವನಶೈಲಿ ಮಾತ್ರವಲ್ಲ, ಸರಿಯಾದ ಆಹಾರವೂ ಸಹ ಅಗತ್ಯ. ನೇರವಾಗಿ ವಿಷಯಕ್ಕೆ ಬರೋಣ.. ಪೇರಲ ಪುಡಿ. ಇದು ಪೇರಲ ಹಣ್ಣಿನ ಪುಡಿ ಅಲ್ಲ. ಅದರ ಏಲೆಯಿಂದ ತಯಾರಿಸಿದ ಪುಡಿ. ಇದನ್ನು ಚಹಾ ಮತ್ತು ಕಷಾಯದೊಂದಿಗೆ ಬೆರೆಸಿ ತಿನ್ನುವುದು ಟ್ರೆಂಡ್ ಆಗಿ ಮಾರ್ಪಟ್ಟಿದೆ. ನಮ್ಮ ಪೂರ್ವಜರು ಈ ಪೇರಲ ಎಲೆಗಳನ್ನು ಮೌತ್ ಫ್ರೆಶ್ನರ್ ಆಗಿ ಬಳಸುತ್ತಿದ್ದರು ಎನ್ನುವುದು ಅನೇಕರಿಗೆ ಗೊತ್ತಿಲ್ಲ. 


ಇದನ್ನೂ ಓದಿ:ಸೌತೆಕಾಯಿ ರಸಕ್ಕೆ ಇದನ್ನು ಬೆರೆಸಿ ಕುಡಿದರೆ ಸಾಕು.. ಬ್ಲಡ್‌ ಶುಗರ್‌ ಕೂಡಲೇ ಕಂಟ್ರೋಲ್‌ ಆಗುವುದು


ಹೀಗೆ ಹಲವಾರು ಔಷಧೀಯ ಗುಣಗಳಿಂದಾಗಿ ಪೇರಲ ಎಲೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಹೊಂದಿದೆ. ಕೆಜಿಗೆ 20ರಿಂದ 50 ರೂಪಾಯಿಗೆ ಈ ಎಲೆ ಮಾರಾಟವಾಗುತ್ತಿವೆ. ಇದನ್ನು ಒಣಗಿಸಿ ಬೆಂಗಳೂರು, ಚೆನ್ನೈ ಮತ್ತು ಇತರ ನಗರಗಳಿಗೆ ರಫ್ತು ಮಾಡಲಾಗುತ್ತಿದೆ. ಪೇರಲ ಎಲೆಗಳ ಪುಡಿಯನ್ನು ಕಷಾಯವಾಗಿ ಉಪಯೋಗಿಸಿ ಜೇನುತುಪ್ಪದೊಂದಿಗೆ ಸೇವಿಸಿದರೆ ತುಂಬಾ ಉಪಯುಕ್ತ ಎಂದು ಹಲವು ಸಂಶೋಧನಾ ಸಂಸ್ಥೆಗಳು ಹೇಳುತ್ತವೆ. ಹಾಗಾಗಿಯೇ ಇಷ್ಟೊಂದು ಬೇಡಿಕೆ ಬಂದಿದೆ ಎನ್ನುತ್ತಾರೆ ನರ್ಸರಿ ಮಾಲೀಕರು. ಅಲ್ಲದೆ, ಒಂದು ಟನ್ ಪೇರಲ ಎಲೆಯ ವಾಸ್ತವಿಕ ಬೆಲೆ 37 ಸಾವಿರ ರೂಪಾಯಿ.  


ಪೇರಲದಲ್ಲಿ ಹಲವಾರು ಔಷಧೀಯ ಗುಣಗಳಿವೆ ಎಂದು ವೈದ್ಯಕೀಯ ತಜ್ಞರು, ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು ಹೇಳುತ್ತಾರೆ. ಯಾವುದೇ ಕಲಬೆರಕೆ ಇಲ್ಲದ ಹಣ್ಣು ಪೇರಲ ಎಂದು ಹೇಳಲಾಗುತ್ತದೆ. ಮಧುಮೇಹ ರೋಗಿಗಳಿಗೆ ಈ ಹಣ್ಣು ಉತ್ತಮ ಔಷಧ. ಪೇರಲ ಎಲೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಕಷಾಯ ಮಾಡಿ ಬೆಳಗ್ಗೆ ಕುಡಿದರೆ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು. (ಸೂಚನೆ:ಪೇರಲ ಎಲೆಯ ಕಷಾಯ ಕುಡಿಯುವ ಮೊದಲು ವೈಧ್ಯರ ಸಲಹೆ ಪಡೆಯಿರಿ..)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.