Gym and fitness tips : ದೈಹಿಕ ಆರೋಗ್ಯದ ವಿಷಯಕ್ಕೆ ಬಂದಾಗ ಹೆಚ್ಚಾಗಿ ಜನರು ಜಿಮ್‌ನಲ್ಲಿ ವರ್ಕೌಟ್ ಮಾಡಲು ಬಯಸುತ್ತಾರೆ. ಏಕೆಂದರೆ, ಜಿಮ್‌ನಲ್ಲಿ ಅಂತಹ ವಾತಾವರಣ ಇರುತ್ತದೆ. ಅಲ್ಲದೆ, ನಿಮಗೆ ಬೇಕಾದ ಎಲ್ಲಾ ವಸ್ತುಗಳು ಲಭ್ಯವಿರುತ್ತದೆ. ದೇಹವನ್ನು ಫಿಟ್ ಆಗಿಟ್ಟುಕೊಳ್ಳಲು ಜಿಮ್ ಬಹಳ ಮುಖ್ಯ. ಈ ಪ್ರಾಮುಖ್ಯತೆಯಿಂದಾಗಿ, ಜಿಮ್ ಅನ್ನು ಆಯ್ಕೆಮಾಡುವ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಏಕೆಂದರೆ, ಜಿಮ್ ಎಂದರೆ ಕೇವಲ ವಾತಾವರಣ ಮತ್ತು ಯಂತ್ರಗಳಿಗೆ ಸಂಬಂಧಿಸಿದ್ದಲ್ಲ.. ವ್ಯಾಯಾಮ ಶಾಲೆಯನ್ನು ಆಯ್ಕೆಮಾಡುವಾಗ ಈ ಕೇಳಗೆ ನೀಡಿರು ಅಂಶಗಳು ಇವೆಯೇ ಎಂದು ಗಮನಿಸಿ.


COMMERCIAL BREAK
SCROLL TO CONTINUE READING

1- ಕಾರಣ : ಜಿಮ್ ಅನ್ನು ಆಯ್ಕೆಮಾಡುವ ಮೊದಲು, ನೀವು ಜಿಮ್ಗೆ ಏಕೆ ಹೋಗುತ್ತೀರಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಿ. ಕೆಲವರು ಸ್ನಾಯುಗಳ ಬೆಳವಣಿಗೆಗಾಗಿ ಜಿಮ್‌ಗೆ ಹೋಗುತ್ತಾರೆ ಮತ್ತು ಕೆಲವರು ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಕೆಲವರು ವೃತ್ತಿಪರ ಬಾಡಿ ಬಿಲ್ಡಿಂಗ್‌ಗಾಗಿ ಜಿಮ್‌ಗೆ ಹೋಗುತ್ತಾರೆ. ಆದ್ರೆ, ಈ ಮೂರು ಗುರಿಗಳನ್ನು ತಲುಪುವ ಮಾರ್ಗ ವಿಭಿನ್ನವಾಗಿರುತ್ತದೆ, ವಿಭಿನ್ನ ಯಂತ್ರಗಳು ಬೇಕಾಗುತ್ತವೆ. ನೀವು ಆಯ್ಕೆಮಾಡುವ ಜಿಮ್ ನಿಮ್ಮ ಅಗತ್ಯಗಳಿಗೆ ಸೂಕ್ತವಾಗಿದೆಯೇ ಎಂದು ಮೊದಲು ಪರಿಶೀಲಿಸಿ.


ಇದನ್ನೂ ಓದಿ:High Cholesterol ಅನ್ನು ಒಂದೇ ವಾರದಲ್ಲಿ ನಿಯಂತ್ರಿಸುತ್ತೆ ಈ ಆಹಾರಗಳು


2- ದೂರ : ಇದು ಅರ್ಥಹೀನ ಎಂದು ನೀವು ಭಾವಿಸಬಹುದು, ಆದರೆ ಮನೆಯಿಂದ ಜಿಮ್ ತುಂಬಾ ದೂರದಲ್ಲಿದ್ದರೆ, ನೀವು ಸೋಮಾರಿಯಾಗಿರುತ್ತೀರಿ ಅಲ್ಲದೆ, ನಾಳೆ ಹೋದ್ರಾಯ್ತು ಬಿಡು, ಅಷ್ಟು ದೂರ ಹೋಗಿ ಬರಲು ಸಮಯವಿಲ್ಲ, ಇನ್ನೊಂದು ದಿನ ಹೋಗುವ ಎನ್ನುವ ನಕಾರಾತ್ಮಕ ಯೋಚನೆಗಳು ನಿಮ್ಮ ಮೈಂಡ್‌ಗೆ ಬರುತ್ತವೆ.


3- ವಾರ್ಮ್‌ ಅಪ್‌ಗೆ ಹೆಚ್ಚಿನ ಸ್ಥಳ : ವ್ಯಾಯಾಮದ ಮೊದಲು ವಾರ್ಮ್‌ಅಪ್‌ ಮಾಡುವುದು ಬಹಳ ಮುಖ್ಯ. ಅದು ವ್ಯಾಯಾಮಕ್ಕೆ ಸ್ನಾಯುಗಳನ್ನು ಸಿದ್ಧಪಡಿಸುತ್ತದೆ ಅಲ್ಲದೆ, ಗಾಯದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ, ವಾರ್ಮ್‌ ಅಪ್‌ ಮಾಡಲು ಹೆಚ್ಚಿನ ಸ್ಥಳ ಇದೆಯೇ ಎಂದು ಪರಿಶೀಲಿಸಿ.


ಇದನ್ನೂ ಓದಿ: ಗ್ರೀನ್ ಟೀ ಸೇವನೆ ವೇಳೆ ಮಾಡುವ ಈ ತಪ್ಪು ಅಡ್ಡ ಪರಿಣಾಮಗಳನ್ನು ಬೀರಬಹುದು


4- ಕ್ರಮೇಣವಾಗಿ ವ್ಯಾಯಾಮವನ್ನು ಹೆಚ್ಚಿಸಿ : ವ್ಯಾಯಾಮದ ವೇಗ ಮತ್ತು ತೀವ್ರತೆಯನ್ನು ಕ್ರಮೇಣವಾಗಿ ಹೆಚ್ಚಿಸಿ. ಒಂದೇ ದಿನಕ್ಕೆ ಅತಿಯಾಗಿ ಏಕಾಏಕಿ ಶ್ರಮದಾಯಕ ವ್ಯಾಯಾಮ ಮಾಡುವುದು ದೇಹಕ್ಕೆ ಒಳ್ಳೆಯದಲ್ಲ. ಇದರಿಂದ ದೇಹದ ಒಂದು ಭಾಗದಲ್ಲಿ ಅತಿಯಾದ ನೋವು ಮತ್ತು ಸ್ನಾಯು ಸೆಳೆತ ಕಂಡುಬರುತ್ತದೆ.


5- ನೀರು ಕುಡಿಯಿರಿ : ವ್ಯಾಯಾಮದ ಸಮಯದಲ್ಲಿ ಬೆವರುವುದು ಒಳ್ಳೆಯದು. ಆದರೆ ದೇಹವು ನಿರ್ಜಲೀಕರಣವಾಗದಂತೆ ಎಚ್ಚರವಹಿಸಿ. ಆಗಾಗ ಸಾಕಷ್ಟು ನೀರು ಕುಡಿಯುವುದು ಮುಖ್ಯ. ನಿರ್ಜಲೀಕರಣ ತಲೆತಿರುಗುವಿಕೆಗೆ ಕಾರಣವಾಗಬಹುದು ಎಚ್ಚರಿಕೆ.


ಇದನ್ನೂ ಓದಿ: ಅಧಿಕ ತಾಪಮಾನದಿಂದ ನಿಮ್ಮನ್ನು ಹೀಗೆ ರಕ್ಷಿಸಿಕೊಳ್ಳಿರಿ...!


6- ಯಂತ್ರೋಪಕರಣಗಳ ಬಳಕೆ : ನೀವು ಜಿಮ್‌ನಲ್ಲಿ ಯಾವುದೇ ಯಂತ್ರವನ್ನು ಬಳಸುವ ಮೊದಲು ತರಬೇತುದಾರರಿಂದ ಮೊದಲು ಯಂತ್ರದ ಬಳಕೆಯ ಕುರಿತು ತಿಳಿಯಿರಿ. ಇಲ್ಲದಿದ್ದರೆ ನಿಮ್ಮ ದೇಹಕ್ಕೆ ಹಾನಿ ಉಂಟಾಗುತ್ತದೆ. ಸ್ನಾಯುಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರಗಳನ್ನು ಹೆಚ್ಚಾಗಿ ಹೊಟ್ಟೆ, ಸೊಂಟ, ಬೆನ್ನು ಮತ್ತು ತೋಳುಗಳನ್ನು ಟೋನ್ ಮಾಡಲು ಬಳಸಲಾಗುತ್ತದೆ, ಆದ್ದರಿಂದ ಮೊದಲು ತಿಳಿದು ನಂತರ ಬಳಸಿ.


7- ಬಟ್ಟೆ ಮತ್ತು ಬೂಟುಗಳು  : ವ್ಯಾಯಾಮದ ಸಮಯದಲ್ಲಿ ಕ್ರೀಡಾ ಉಡುಗೆ ಮತ್ತು ಬೂಟುಗಳನ್ನು ಧರಿಸುವುದು ಬಹಳ ಮುಖ್ಯ. ವ್ಯಾಯಾಮದ ಸಮಯದಲ್ಲಿ ಬೂಟುಗಳು ಸರಿಯಾಗಿ ಹೊಂದಿಕೊಳ್ಳದಿದ್ದರೆ, ಪಾದದ ಸ್ನಾಯುಗಳು ಗಾಯಗೊಳ್ಳಬಹುದು ಎಚ್ಚರಿಕೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ