ಮಧ್ಯಪ್ರದೇಶ, ಛತ್ತೀಸ್​ಗಢದಲ್ಲಿ ಮೂರು ತಿಂಗಳ ಅವಧಿಯಲ್ಲಿ ಹಂದಿ ಜ್ವರ (ಎಚ್ 1 ಎನ್ 1 ವೈರಸ್)ಕ್ಕೆ 142 ಮಂದಿ ಬಲಿಯಾಗಿದ್ದಾರೆ ಎಂಬ ಮಾಹಿತಿಯನ್ನು ಡೇಟಾ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

ಮಧ್ಯಪ್ರದೇಶದಲ್ಲಿ ಮಾರ್ಚ್ 31, 2019 ರವರೆಗೂ ನಡೆಸಲಾದ ಪರೀಕ್ಷೆಯಲ್ಲಿ 549 ಕ್ಕಿಂತ ಹೆಚ್ಚು ಜನರು ಹೆಚ್1 ಎನ್1 ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ. ಈ ಪೈಕಿ 116 ಮಂದಿ ಮೃತಪಟ್ಟಿದ್ದಾರೆ.


ಇದೇ ವೇಳೆ ಛತ್ತೀಸ್​ಗಢದಲ್ಲಿ 125 ಮಂದಿ ಹಂದಿ ಜ್ವರಕ್ಕೆ ತುತ್ತಾಗಿದ್ದು, ಮಾರ್ಚ್ 30ರವರೆಗೆ 26 ಮಂದಿ ಸಾವನ್ನಪ್ಪಿದ್ದಾರೆ.


ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ ಭಿಲಾಯಿ ಮತ್ತು ಗ್ವಾಲಿಯರ್ ಮೂಲದ ಇಬ್ಬರು ಗರ್ಭಿಣಿ ಮಹಿಳೆಯರು ಗುರುವಾರ ಹಂದಿ ಜ್ವರದಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟಾರೆ ಸತ್ತವರ ಸಂಖ್ಯೆ 144 ಕ್ಕೆ ಏರಿದೆ. ಆದಾಗ್ಯೂ, ಅಧಿಕಾರಿಗಳು ಇದನ್ನು ದೃಢೀಕರಿಸಬೇಕಾಗಿದೆ.