Hair Care Foods: ಬಾಚಿಕೊಂಡ ತಕ್ಷಣ ಕೂದಲು ಕೈಗೆ ಬರುತ್ತದೆಯೇ? ಈ 5 ಸೂಪರ್ಫುಡ್ ಸಹಕಾರಿ
ಕೂದಲ ರಕ್ಷಣೆಯ ಸಲಹೆಗಳು: ನಿರಂತರ ಕೂದಲು ಉದುರುವಿಕೆ ಇಂದಿನ ದಿನಗಳಲ್ಲಿ ಎಲ್ಲರನ್ನೂ ಕಾಡುತ್ತಿದೆ. ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರೂ ಈ ಸಮಸ್ಯೆಯೊಂದಿಗೆ ಹೋರಾಡುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ಸೇವಿಸುವ 5 ಆಹಾರಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯಸ್ಸಿನ ಜನರು ಕೂದಲು ಉದುರುವಿಕೆಯಿಂದ ತೊಂದರೆಗೀಡಾಗಿದ್ದಾರೆ. ಬಾಚಿದಾಗಲೆಲ್ಲ ಅನೇಕ ಕೂದಲುಗಳು ಉದುರಿ ಬೀಳುತ್ತವೆ. ಈ ಸ್ಥಿತಿಗೆ ಹಲವು ಕಾರಣಗಳಿರಬಹುದು ಎಂದು ವೈದ್ಯರು ಹೇಳುತ್ತಾರೆ. ಕೆಟ್ಟ ಆಹಾರ ಅಥವಾ ಕೆಟ್ಟ ನೀರಿನಿಂದ ಕೂಡ ಕೂದಲು ಉದುರುವುದು ಪ್ರಾರಂಭವಾಗುತ್ತದೆ. ಕೆಲವೊಮ್ಮೆ ಈ ಪರಿಸ್ಥಿತಿಯು ಮಾನಸಿಕ ಒತ್ತಡದಿಂದಲೂ ಉಂಟಾಗುತ್ತದೆ. ನೀವು ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಇಂದು ನಾವು ನಿಮಗೆ 5 ಸೂಪರ್ ಆಹಾರಗಳ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವು ನಿಮ್ಮನ್ನು ಬೋಳುತಲೆ ಆಗದಂತೆ ರಕ್ಷಿಸುತ್ತದೆ.
ಕೂದಲು ಉದುರುವಿಕೆ ನಿಲ್ಲಿಸುವುದು ಹೇಗೆ?
ಚಳಿಗಾಲದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯಿರಿ
ಕೂದಲು ಉದುರುವುದನ್ನು ತಡೆಯಲು ಚಳಿಗಾಲದಲ್ಲಿ ಕ್ಯಾರೆಟ್ ಜ್ಯೂಸ್ ಕುಡಿಯುವುದು ಒಳ್ಳೆಯದು. ಈ ರಸದಲ್ಲಿ ಅನೇಕ ಪೋಷಕಾಂಶಗಳಿವೆ, ಇದು ತಲೆಯ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಈ ಕಾರಣದಿಂದ ದೇಹದಲ್ಲಿನ ರಕ್ತದ ಪ್ರಮಾಣವು ಹೆಚ್ಚಾಗುತ್ತದೆ, ಇದರಿಂದಾಗಿ ತಲೆಗೆ ರಕ್ತ ಪೂರೈಕೆಯೂ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಸಲಾಡ್ ತಿನ್ನುವುದರ ಬಗ್ಗೆಯೂ ಗಮನ ಹರಿಸಬೇಕು.
ಇದನ್ನೂ ಓದಿ: ಕ್ಯಾನ್ಸರ್-ಹೃದ್ರೋಗಗಳಂತಹ ಮಾರಕ ಕಾಯಿಲೆಗಳ ಅಪಾಯ ತಗ್ಗಿಸುತ್ತದೆ ಈ ಕಪ್ಪು ಗಜ್ಜರಿ
ಪಾಲಕ್ ಸೊಪ್ಪು ತಿನ್ನುವುದರಿಂದ ಕಬ್ಬಿಣಾಂಶ ದೊರೆಯುತ್ತದೆ
ಕೂದಲು ಗಟ್ಟಿಯಾಗಲು ಕಬ್ಬಿಣಾಂಶದ ಅಗತ್ಯವಿದೆ. ನೀವು ಪಾಲಕ್ ಸೊಪ್ಪಿನಿಂದ ಈ ಅಗತ್ಯವನ್ನು ಪಡೆಯಬಹುದು. ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಅಥವಾ ಪಾಲಕ್ ಸೊಪ್ಪಿನ ಪಲ್ಯ ತಯಾರಿಸಿ ತಿನ್ನಬಹುದು. ಇದರೊಂದಿಗೆ ನೀವು ಹಸಿರು ತರಕಾರಿಗಳ ಸೇವನೆಯನ್ನು ಹೆಚ್ಚಿಸಬೇಕು. ಹೀಗೆ ಮಾಡುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತದೆ.
ಬಾದಾಮಿ ಮತ್ತು ಅಗಸೆ ಬೀಜಗಳ ಪ್ರಯೋಜನ
ಕೂದಲು ಉದುರುವುದನ್ನು ತಡೆಯಲು ಒಮೆಗಾ 3 ಫ್ಯಾಟಿ ಆಸಿಡ್ ದೇಹಕ್ಕೆ ಅಗತ್ಯವಿದೆ. ಈ ಆಮ್ಲವು ಕೂದಲನ್ನು ದಪ್ಪವಾಗಿಸಲು ಮತ್ತು ಪೋಷಿಸಲು ಕೆಲಸ ಮಾಡುತ್ತದೆ. ಈ ಆಮ್ಲವು ಅಗಸೆ ಬೀಜಗಳು ಮತ್ತು ಬಾದಾಮಿಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ಆದ್ದರಿಂದಲೇ ಇವುಗಳನ್ನು ಸೇವಿಸಿದರೆ ಖಂಡಿತಾ ಲಾಭವಾಗುತ್ತದೆ. ವಾಲ್‌ನಟ್ಸ್ ಸೇವಿಸುವುದು ಕೂದಲಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಚ್ಯವನ್ಪ್ರಾಶ್ ಆರೋಗ್ಯಕ್ಕೆ ತುಂಬಾ ಲಾಭಕಾರಿ, ಆದ್ರೆ ಈ ಜನರು ಮರೆತೂ ಸೇವಿಸಬಾರದು
ಪ್ರತಿವಾರ ಸಿಟ್ರಸ್ ಹಣ್ಣು ತಿನ್ನಲು ಪ್ರಾರಂಭಿಸಿ
ಕೆಲವೊಮ್ಮೆ ದೇಹದಲ್ಲಿನ ದುರ್ಬಲ ರೋಗನಿರೋಧಕ ಶಕ್ತಿಯಿಂದ ಕೂದಲಿನ ಬೇರು ಕೂಡ ದುರ್ಬಲವಾಗುತ್ತದೆ. ಇದರಿಂದಾಗಿ ಅವು ಉದುರಲು ಪ್ರಾರಂಭಿಸುತ್ತವೆ. ಇದನ್ನು ತಪ್ಪಿಸಲು ನೀವು ವಿಟಮಿನ್-ಸಿ ಸಮೃದ್ಧವಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು. ಶೀತದ ದಿನಗಳಲ್ಲಿ ಕಿತ್ತಳೆ, ನಿಂಬೆ, ಟ್ಯಾಂಗರಿನ್ ಮತ್ತು ಕಿವಿಯಂತಹ ಹಣ್ಣುಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಕೂದಲು ಮೊದಲಿಗಿಂತ ಹೆಚ್ಚು ಹೊಳೆಯಲು ಪ್ರಾರಂಭಿಸುತ್ತದೆ.
ಮೊಟ್ಟೆ ತಿನ್ನುವುದರಿಂದ ದೇಹಕ್ಕೆ ಪ್ರೋಟೀನ್ ಸಿಗುತ್ತದೆ
ಅನೇಕ ಜನರು ಮೊಟ್ಟೆಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಆದರೆ ಇದನ್ನು ತಿಂದರೆ ಆರೋಗ್ಯಕ್ಕೆ ಒಳ್ಳೆಯದು. ಮೊಟ್ಟೆಗಳಲ್ಲಿ ಪ್ರೋಟೀನ್ ಹೇರಳವಾಗಿ ಕಂಡುಬರುತ್ತದೆ. ಈ ಪ್ರೋಟೀನ್‌ನಿಂದಾಗಿ ಕೂದಲು ಬಲಗೊಳ್ಳುತ್ತದೆ ಮತ್ತು ಕೂದಲು ಉದುರುವುದು ಬಹಳ ಕಡಿಮೆಯಾಗುತ್ತದೆ. ಮೊಟ್ಟೆಯ ಆಮ್ಲೆಟ್ ಕೂಡ ಮಾಡಿ ತಿನ್ನಬಹುದು.
(ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಸಲಹೆಗಳನ್ನು ಪಾಲಿಸುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಬೇಕು. Zee Kannada News ಇದನ್ನು ದೃಢಪಡಿಸುವುದಿಲ್ಲ.)
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.