ನವದೆಹಲಿ: ಪ್ರತಿಯೊಬ್ಬರಿಗೂ ತಮ್ಮ ಕೂದಲು ಸುದರವಾಗಿರಬೇಕು ಎಂಬ ಆಸೆ ಇದ್ದೇ ಇರುತ್ತದೆ. ಅದಕ್ಕಾಗಿ ಸಾಕಷ್ಟು ಕಾಳಜಿಯನ್ನೂ ಸಹ ವಹಿಸುತ್ತಾರೆ. ಆದರೆ ಈ ಹಂತದಲ್ಲಿ ಆಗುವ ಕೆಲವೊಂದು ಸಣ್ಣಪುಟ್ಟ ತಪ್ಪುಗಳಿಂದಾಗಿ ನೀವು ವಹಿಸುವ ಕಾಳಜಿ ವ್ಯರ್ಥವಾಗುತ್ತದೆ. ಅಂತಹ ತಪ್ಪುಗಳ ಸರಿಪಡಿಕೆಗೆ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಡಾ.ನಿವೇದಿತಾ ದಾದು ಡರ್ಮಟಾಲಾಜಿ ಕ್ಲಿನಿಕ್'ನ ಅಧ್ಯಕ್ಷೆ ಹಾಗೂ ಸಂಸ್ಥಾಪಕಿ ಡಾ.ನಿವೇದಿತಾ ದಾದು ಹಾಗೂ ಏಗ್ಟೆ ಹೇರ್ ಅಂಡ್ ಸ್ಕಿನ್ ಲಕ್ಸುರಿಯ ಸ್ಥಾಪಕಿ ಹಾಗೂ ಚರ್ಮ ಮತ್ತು ಕೂದಲ ತಜ್ಞೆ ರೂಪಾಲಿ ಶರ್ಮಾ ಅವರು ಕೂದಲ ಆರೈಕೆ ಹೇಗಿರಬೇಕು ಎಂಬುದರ ಬಗ್ಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. 


* ಸರಿಯಾದ ಶಾಂಪೂ ಆಯ್ಕೆ ಮಾಡಿ
ನಿಮ್ಮ ಕೂದಲಿಗೆ ಹೊಂದುವಂತಹ ಶಾಂಪೂ ಆಯ್ಕೆ ಮಾಡುವುದು ಬಹಳ ಅಗತ್ಯ. ಇತ್ತೀಚಿನ ದಿನಗಳಲ್ಲಿ ಜನರು ಮಾರುಕಟ್ಟೆಗೆ ಬರುವ ಹೊಸ ಹೊಸ ಉತ್ಪನ್ನಗಳ ಬಳಕೆಗಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿದ್ದಾರೆ. ಆದರೆ ಇದು ತಪ್ಪು. ಎಲ್ಲಾ ಶಾಂಪೂಗಳನ್ನೂ ಟ್ರೈ ಮಾಡುತ್ತಾ ಕೂದಲನ್ನು ಹಾಳುಮಾಡಿಕೊಳ್ಳುವ ಬದಲಾಗಿ ನಿಮ್ಮ ಕೂದಲಿಗೆ ಹೊಂದುವ ಒಂದು ಶಾಂಪುವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ.


* ಶಾಂಪೂ ಮಾಡುವುದು ಹೇಗೆ ಎಂದು ತಿಳಿಯಿರಿ
ನಾವೆಲ್ಲರೂ ನಿಯಮಿತವಾಗಿ ನಮ್ಮ ಕೂದಳಿಗೆ ಶಾಂಪೂ ಹಾಕಿ ತೊಳೆಯುತ್ತೇವೆ. ಆದರೆ ನಮ್ಮಲ್ಲಿ ಕೆಲವರು ಮಾತ್ರ ಸರಿಯಾಗಿ ಶಾಂಪೂ ಮಾಡುತ್ತಾರೆ. ಯಾವಾಗಲೂ ಕೂದಲನ್ನು ಶಾಂಪೂ ಹಾಕಿ ತೊಳೆಯುವ ಮೊದಲು ಸರಿಯಾಗಿ ಸಿಕ್ಕಿಲ್ಲದಂತೆ ಬಾಚುವುದು ಅಗತ್ಯ. ಶಾಂಪೂ ಹಾಕುವ ಮುಖ್ಯ ಉದ್ದೇಶವೆಂದರೆ ನಿಮ್ಮ ಕೂದಲಿನ ಬೇರುಗಳವರೆಗೆ ಅದು ತಲುಪಬೇಕು ಎನ್ನುವುದು. ಆದರೆ ಶಾಂಪೂ ಕೂದಲಿನ ತೇವಾಂಶ ಕಡಿಮೆ ಮಾಡುವುದರಿಂದ ಹೆಚ್ಚಾಗಿ ಬಳಸಬೇಡಿ.


* ಕೂದಲನ್ನು ಒಣಗಿಸಲು ಟವಲ್ ಬಳಸಬೇಡಿ
ನಿಮ್ಮ ಕೂದಲನ್ನು ಟವೆಲ್ನಿಂದ ಒಣಗಿಸುವುದು ಖಂಡಿತಾ ತಪ್ಪು. ನಮ್ಮಲ್ಲಿ ಹಲವರು ಸ್ನಾನದ ಬಳಿಕ ಕೂದಲಿಗೆ ಟವಲ್ ಕಟ್ಟಿ ಬಹಳ ಹೊತ್ತಿನವರೆಗೆ ಹಾಗೇ ಬಿಡುತ್ತಾರೆ. ಇದು ಸರಿಯಾದ ಕ್ರಮವಲ್ಲ. ಕೂದಲು ಒದ್ದೆ ಇರುವಾಗ ತುಂಬಾ ಸೂಕ್ಷ್ಮವಾಗಿದ್ದು, ಬೇಗ ತುಂಡಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಕೂದಲನ್ನು ಕಾಟನ್ ಟೀ-ಶರ್ಟ್ ಅಥವಾ ಬಟ್ಟೆಯಿಂದ ಒರೆಸಿದರೆ ಉತ್ತಮ. 


* ಕೂದಲನ್ನು ಸರಿಯಾದ ರೀತಿಯಲ್ಲಿ ಬಾಚಿರಿ
 ನೀವು ಕೂದಲನ್ನು ಹೆಚ್ಚು ಬಾಚುವುದರಿಂದ ಕೂದಲಿನ ಬೇರುಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ ಕೂದಲು ತುಂಡಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹಾಗಾಗಿ ತಲೆಗೆ ಸ್ನಾನ ಮಾಡಿದ ಕೂಡಲೇ ಕೂದಲನ್ನು ಬಾಚಬೇಡಿ. ಮೊದಲು ಕೂದಲನ್ನು ಒಣಗಿಸಿ, ಬಳಿಕ ದೊಡ್ಡ ಹಲ್ಲುಗಳುಳ್ಳ ಬಾಚಣಿಗೆಯಿಂದ ಬಾಚಿ. ಮೊದಲು ಕೂದಲ ತುದಿಯಲ್ಲಿ ಬಾಚಿ, ಬಳಿಕ ಮೇಲ್ಭಾಗದಿಂದ ಬಾಚಿರಿ.


* ಸ್ಟೈಲಿಂಗ್ ಉತ್ಪನ್ನಗಳ ಬಳಕೆ
 ಯಾವುದೇ ಪಾರ್ಟಿ ಅಥವಾ ಫಂಕ್ಷನ್ ಗಳಿಗೆ ಹೋಗಬೇಕೆಂದರೆ ಬ್ಲೋ ಡ್ರೈಯರ್ಗಳು, ಫ್ಲಾಟ್ ಐರನ್ಸ್, ಕರ್ಲಿಂಗ್ ರಾಡ್ಗಳು ಕೂದಲನ್ನು ಆಕರ್ಷಕವಾಗಿಸಲು ಸಹಾಯ ಮಾಡುತ್ತವೆ. ಆದರೆ, ಈ ಶಾಖ ಉತ್ಪನ್ನ ಮಾಡುವ ಉಪಕರಣಗಳು ಕೂದಲನ್ನು ಡ್ರೈ ಮಾಡಿ, ಒರಟಾಗಿಸುತ್ತದೆ. ಹಾಗಾಗಿ ಕಡಿಮೆ ಶಾಖ ಬಳಸಿ ನಿಮ್ಮ ಕೂದಲನ್ನು ಸ್ಟೈಲ್ ಮಾಡಿ. ಸ್ಟೈಲ್ ಮಾಡುವುದಕ್ಕೂ ಮೊದಲು ಶಾಖದಿಂದ ಕೂದಲನ್ನು ರಕ್ಷಿಸುವ ಜೆಲ್, ಕ್ರೀಂಗಳನ್ನು ಅಪ್ಲೈ ಮಾಡುವುದು ಒಳ್ಳೆಯದು.


* ನಿದ್ದೆ ಮಾಡುವಾಗ ಕೂದಲನ್ನು ಕಟ್ಟಿ
ನಿದ್ದೆ ಮಾಡುವಾಗ ನಿಮ್ಮ ಕೂದಲನ್ನು ಕಟ್ಟುವುದು ಬಹಳ ಮುಖ್ಯ. ಕೂದಲನ್ನು ಸಡಿಲವಾಗಿ ಕಟ್ಟುವುದರಿಂದ ಸಿಕ್ಕು ಕಟ್ಟುವುದು ಹಾಗೂ ಕೆದರುವುದು ಕಡಿಮೆ. ಮಲಗುವಾಗ ಕೂದಲನ್ನು ಕಟ್ಟದೆ ಬಿಟ್ಟರೆ ಕೂದಲ ಉದುರುವಿಕೆ ಹೆಚ್ಚಾಗುತ್ತದೆ.


* ಹೇರ್ ಕಟ್ ಮಾಡಿಸುವಲ್ಲಿ ವಿಳಂಬ
ನಮ್ಮಲ್ಲಿ ಬಹುತೇಕರು ನಿಯಮಿತವಾಗಿ ಹೇರ ಕಟ್ ಮಾಡಿಸುವುದಿಲ್ಲ. ಇದರಿಂದಾಗಿ ಕೂದಲಿನ ಡ್ಯಾಮೇಜ್ ಹೆಚ್ಚಾಗುತ್ತದೆ. ಪ್ರತಿ ಮೂರು ತಿಂಗಳಿಗೊಮ್ಮೆ ತಪ್ಪದೇ ಹೇರ್ ಕಟ್ ಅಥವಾ ಟ್ರಿಮ್ ಮಾಡಿಸುವುದರಿಂದ ಕೂದಲ ತುದಿಯಲ್ಲಿ ಕವಲೊಡೆಯುವುದು ಕಡಿಮೆಯಾಗಿ ಕೂದಲು ಆರೋಗ್ಯವಾಗಿರುತ್ತದೆ.