Hair Fall: ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಪಡೆಯಲು ಯೋಗವೇ ಮದ್ದು
Hair Fall: ಚಳಿಗಾಲ ಬಂತೆಂದರೆ ಕೂದಲು ಉದುರುವ ಸಮಸ್ಯೆಯೂ ಹೆಚ್ಚುತ್ತದೆ. ಆದರೆ, ಈ ಬಗ್ಗೆ ಚಿಂತಿಸಬೇಕಿಲ್ಲ. ಯೋಗದ ಮೂಲಕ ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಬಹುದು.
Hair Fall: ಚಳಿಗಾಲವು ಅನೇಕರ ನೆಚ್ಚಿನ ಋತುಮಾನ. ಆದರೆ, ಈ ಋತುವಿನಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಿನ ಜನರನ್ನು ಕಾಡುತ್ತದೆ. ವಿಶೇಷವಾಗಿ, ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚು ಕಾಡುತ್ತದೆ. ಕೂದಲು ಉದುರಲು ಒತ್ತಡವೇ ಮುಖ್ಯ ಕಾರಣ. ಇದಲ್ಲದೆ, ಅನೇಕ ಜನರು ಬಿಳಿ ಅಥವಾ ತೆಳ್ಳನೆಯ ಕೂದಲನ್ನು ಹೊಂದಿರುತ್ತಾರೆ ಅಥವಾ ಅದರ ನಿಧಾನಗತಿಯ ಬೆಳವಣಿಗೆಯ ಸಮಸ್ಯೆಯನ್ನು ಎದುರಿಸುತ್ತಾರೆ.
ಯೋಗವು ಸಮಗ್ರ ಆರೋಗ್ಯ (Yoga For Health) ಪ್ರಯೋಜನಗಳನ್ನು ಒದಗಿಸುತ್ತದೆ ಎಂಬುದು ತಿಳಿದೇ ಇದೆ. ಯೋಗವು ಒಬ್ಬರ ದೇಹದಲ್ಲಿನ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ಒತ್ತಡದ ಮಟ್ಟಗಳ ನಿರಂತರ ಹೆಚ್ಚಳ, ಕೆಟ್ಟ ಆಹಾರದ ಆಯ್ಕೆಗಳು, ಜೀವನಶೈಲಿ ಅಭ್ಯಾಸಗಳು ಆನುವಂಶಿಕ ಅಸ್ವಸ್ಥತೆ ಸೇರಿದಂತೆ ಹಲವು ಅಂಶಗಳು ಕೂದಲು ಉದುರುವ ಸಮಸ್ಯೆಗೆ ಮುಖ್ಯ ಕಾರಣವಾಗಿವೆ.
ಕೂದಲು ಉದುರುವಿಕೆಗೆ ಕಾರಣವಾಗುವ ಹಲವು ಪ್ರಚೋದಕಗಳಿವೆ. ಆದರೆ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಅಥವಾ ನಿಲ್ಲಿಸಲು ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುವ ಕೆಲವು ವಿಧಾನಗಳಿವೆ ಎಂದು ನಿಮಗೆ ತಿಳಿದಿದೆಯೇ? ತಜ್ಞರ ಪ್ರಕಾರ, ಕೂದಲು ಉದುರುವ ಸಮಸ್ಯೆ ಬಗ್ಗೆ ಚಿಂತಿಸಬೇಕಿಲ್ಲ. ಏಕೆಂದರೆ, ಯೋಗದ ಮೂಲಕ ಈ ಸಮಸ್ಯೆಯನ್ನು ಹೋಗಲಾಡಿಸಬಹುದು.
ಇದನ್ನೂ ಓದಿ- Hair Care Tips: ತಲೆಹೊಟ್ಟಿನಿಂದ ಕೂದಲು ಹಾಳಾಗಿದೆಯೇ? ತ್ವರಿತ ಪರಿಹಾರಕ್ಕಾಗಿ ಈ 5 ಮನೆಮದ್ದನ್ನು ಟ್ರೈ ಮಾಡಿ
ಕೂದಲು ಉದುರುವಿಕೆಯನ್ನು (Hair Fall) ಕಡಿಮೆ ಮಾಡುವ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಕೆಲವು ಯೋಗ ಆಸನಗಳು ಇವೆ. ಕೂದಲು ಉದುರುವಿಕೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಯೋಗದ ಮೂಲಕ ನೀವು ಅದನ್ನು ನಿವಾರಿಸಬಹುದು. ವಿಶೇಷ ಯೋಗಾಸನಗಳು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಇದು ಉತ್ತಮ ಕೂದಲು ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಹೇಳಲಾಗುತ್ತದೆ.
* ಕೂದಲು ಉದುರುವುದನ್ನು ತಡೆಯಲು ಬಲಯಂ ಮುದ್ರೆ: ನಿಮ್ಮ ಉಗುರುಗಳನ್ನು ಪರಸ್ಪರ ಉಜ್ಜುವ ಪ್ರಕ್ರಿಯೆಯನ್ನು ಬಲಯಂ ಮುದ್ರೆ ಎಂದು ಕರೆಯಲಾಗುತ್ತದೆ. ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಇದು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ನಿತ್ಯ 5-10 ನಿಮಿಷಗಳ ಕಾಲ ಈ ಮುದ್ರೆಯನ್ನು ಮಾಡುವುದರಿಂದ ಕೂದಲುದುರುವ ಸಮಸ್ಯೆಗೆ ಪರಿಹಾರ ಪಡೆಯಬಹುದು ಎನ್ನಲಾಗುವುದು.
ಈ ಎಲೆಯನ್ನು ಬಳಸುವುದರಿಂದ ಪೂರ್ತಿಯಾಗಿ ಹೋಗಲಾಡಿಸಬಹುದು ಬಿಳಿ ಕೂದಲಿನ ಸಮಸ್ಯೆ
* ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ವಜ್ರಾಸನ:
ವಜ್ರಾಸನವು ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಕೂದಲು ಉದುರುವಿಕೆಗೆ ಪ್ರಮುಖ ಪ್ರಚೋದಕಗಳಲ್ಲಿ ಒಂದಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.