Hair Care Tips: ಕೂದಲಿನ ಹೊಳಪು ಹೆಚ್ಚಿಸುವ ಸೌತೆಕಾಯಿ, ಈ ರೀತಿ ಬಳಸಿ
ಕೂದಲಿಗೆ ಸೌತೆಕಾಯಿಯ ಪ್ರಯೋಜನಗಳು: ಸೌತೆಕಾಯಿಯನ್ನು ಆರೋಗ್ಯಕ್ಕೆ ತುಂಬಾ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ನಿಮ್ಮ ಕೂದಲಿಗೆ ಸೌತೆಕಾಯಿಯನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ನವದೆಹಲಿ: ಸೌತೆಕಾಯಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದರಲ್ಲಿ ನೀರಿನಂಶ ಹೇರಳವಾಗಿದ್ದು, ಅದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಇದು ಅನೇಕ ಇತರ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಆದರೆ, ಸೌತೆಕಾಯಿಯನ್ನು ಸೇವಿಸುವುದರ ಜೊತೆಗೆ ತ್ವಚೆ ಮತ್ತು ಕೂದಲಿನ ಆರೋಗ್ಯಕ್ಕೂ ಬಳಸಬಹುದು. ಇದು ಚರ್ಮ ಮತ್ತು ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ನೀವು ಇದನ್ನು ಕೂದಲಿಗೆ ಹಲವಾರು ರೀತಿಯಲ್ಲಿ ಬಳಸಬಹುದು. ಸೌತೆಕಾಯಿಯನ್ನು ಕೂದಲಿಗೆ ಹೇಗೆ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ: ಈ ಮೂರು ಸಮಸ್ಯೆಗಳಿಂದ ತಕ್ಷಣ ಮುಕ್ತಿ ನೀಡುತ್ತದೆ ನೇರಳೆ ಹಣ್ಣು
ಸೌತೆಕಾಯಿಯನ್ನು ಕೂದಲಿಗೆ ಈ ರೀತಿ ಬಳಸಿ
ಸೌತೆಕಾಯಿ ರಸದಿಂದ ಮಸಾಜ್ ಮಾಡಿ: ಕೂದಲಿನ ಬೆಳವಣಿಗೆ ಮತ್ತು ಹೊಳಪಿಗೆ ಸೌತೆಕಾಯಿ ರಸವನ್ನು ಬಳಸಬೇಕು. ಇದು ನಿಮ್ಮ ಕೂದಲಿಗೆ ಅತ್ಯಂತ ಪರಿಣಾಮಕಾರಿ ಪಾಕವಿಧಾನ ಎಂದು ಸಾಬೀತುಪಡಿಸಬಹುದು. ಇದನ್ನು ಬಳಸಲು ನಿಮ್ಮ ಕೂದಲಿನ ಉದ್ದಕ್ಕೆ ಅನುಗುಣವಾಗಿ ಒಂದರಿಂದ 2 ಸೌತೆಕಾಯಿಗಳನ್ನು ತೆಗೆದುಕೊಳ್ಳಿ. ಇದನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಸೌತೆಕಾಯಿ ರಸವನ್ನು ಒಂದು ಬಟ್ಟಲಿನಲ್ಲಿ ಇರಿಸಿರಿ. ಈಗ ಸೌತೆಕಾಯಿ ರಸವನ್ನು ನಿಮ್ಮ ಕೂದಲಿನ ಬೇರುಗಳಿಗೆ ಹಚ್ಚಿ ಮತ್ತು ಸ್ವಲ್ಪ ಸಮಯ ಬಿಡಿ. ಇದರ ನಂತರ ವೃತ್ತಾಕಾರದ ಚಲನೆಯಲ್ಲಿ ಚೆನ್ನಾಗಿ ಮಸಾಜ್ ಮಾಡಿ. ನಂತರ ನಿಮ್ಮ ಕೂದಲನ್ನು ನೀರಿನಿಂದ ತೊಳೆಯಿರಿ. ಕೂದಲನ್ನು ತೊಳೆಯುವಾಗ ಶಾಂಪೂ ಬಳಸದಂತೆ ನೋಡಿಕೊಳ್ಳಿ.
ಇದನ್ನೂ ಓದಿ: Raw Turmeric Benefits: ಈ ರೋಗಗಳಿಗೆ ಹಸಿ ಅರಿಶಿನ ರಾಮಬಾಣ, ಹೀಗೆ ಬಳಸಿರಿ
ಕೂದಲಿಗೆ ಸೌತೆಕಾಯಿ ರಸ ಮತ್ತು ನಿಂಬೆ ಹಚ್ಚಿರಿ: ಸೌತೆಕಾಯಿ ರಸ ಮತ್ತು ನಿಂಬೆ ರಸವನ್ನು ಬಳಸುವುದರಿಂದ ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಬಹುದು. ಕೂದಲಿಗೆ ಇದನ್ನು ಬಳಸಲು ಸ್ವಲ್ಪ ಪ್ರಮಾಣದ ಸೌತೆಕಾಯಿ ರಸವನ್ನು ತೆಗೆದುಕೊಳ್ಳಿ. ಇದರ ನಂತರ ಅದರಲ್ಲಿ 2 ಟೇಬಲ್ ಸ್ಪೂನ್ ನಿಂಬೆ ರಸವನ್ನು ಮಿಶ್ರಣ ಮಾಡಿ. ಇದರ ನಂತರ ಸುಮಾರು 30 ನಿಮಿಷಗಳ ನಂತರ ಕೂದಲನ್ನು ತೊಳೆಯಿರಿ. ಈಗ ಹೊಳೆಯುವ ಜೊತೆಗೆ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ