Hair Care Tips: ಇತ್ತೀಚಿನ ದಿನಗಳಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಸಮಸ್ಯೆಯನ್ನು ತಪ್ಪಿಸಲು ಜನರು ವಿವಿಧ ಕ್ರಮಗಳನ್ನು ಸಹ ಅನುಸರಿಸುತ್ತಾರೆ. ಆದರೆ ಯಾವುದೇ ಅಷ್ಟಾಗಿ ಪರಿಣಾಮಕಾರಿಯಾಗಿಲ್ಲ ಎಂದು ಕೊರಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸುವುದು ಹೇಗೆ ಎಂದು ನಾವು ನಿಮಗೆ ಸಲಹೆ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ನಿಮ್ಮ ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಆಲೂಗಡ್ಡೆ ಸಿಪ್ಪೆ ಬಹಳ ಪ್ರಯೋಜನಕಾರಿಯಾಗಿದೆ. ಹೊಸ ಕೂದಲನ್ನು ಬೆಳೆಸಲು ಆಲೂಗೆಡ್ಡೆ ಸಿಪ್ಪೆಗಳನ್ನು ಬಳಸಬಹುದು. ಇದು ನೈಸರ್ಗಿಕವಾಗಿ ನಿಮ್ಮ ಕೂದಲನ್ನು (Hair) ಕಪ್ಪಾಗಿಸುತ್ತದೆ ಮತ್ತು ಕೂದಲಿನ ಬಣ್ಣವು ಮರಳುತ್ತದೆ. ಆಲೂಗಡ್ಡೆ ಸಿಪ್ಪೆಯನ್ನು ಕೂದಲಿಗೆ ಯಾವ ರೀತಿ ಬಳಸಬೇಕು ಎಂದು ತಿಳಿಯೋಣ....


ಇದನ್ನೂ ಓದಿ - 


ಆಲೂಗಡ್ಡೆ ಸಿಪ್ಪೆ ಹೇರ್ ಮಾಸ್ಕ್:
ಆಲೂಗಡ್ಡೆ ಸಿಪ್ಪೆ ಹೇರ್ ಮಾಸ್ಕ್ ತಯಾರಿಸಲು, ಮೊದಲು ಆಲೂಗಡ್ಡೆಯ ಸಿಪ್ಪೆ(Potato Peel)ಯನ್ನು ತೆಗೆಯಿರಿ. ಈ ಸಿಪ್ಪೆಗಳನ್ನು ತಣ್ಣೀರಿನಲ್ಲಿ ಹಾಕಿ ಬಳಿಕ ಅದನ್ನು ಕುದಿಸಿ. 10 ನಿಮಿಷಗಳ ಕಾಲ ಕುದಿಸಿದ ನಂತರ, ಈ ನೀರನ್ನು ಸಂಪೂರ್ಣವಾಗಿ ತಣ್ಣಗಾಗಿಸಿ. ಈ ನೀರನ್ನು ಒಂದು ಜಗ್ ನಲ್ಲಿ ಮುಚ್ಚಿಡಿ.


ಇದನ್ನೂ ಓದಿ  -


ನೀವು ಆಲೂಗೆಡ್ಡೆ ಸಿಪ್ಪೆ ಹಾಕಿ ಕುದಿಸಿಟ್ಟ ನೀರು ತಣ್ಣಗಾದ ಬಳಿಕ ಅದನ್ನು ನಿಮ್ಮ ನೆತ್ತಿಯ ಮೇಲೆ ಹಾಕಿ 5 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಡಿ. ಈ ಆಲೂಗೆಡ್ಡೆ ನೀರನ್ನು ನಿಮ್ಮ ಕೂದಲಿಗೆ 30 ನಿಮಿಷಗಳ ಕಾಲ ಬಿಡಿ. ಅದರ ತಣ್ಣೀರಿನಿಂದ ನಿಮ್ಮ ಕೂದಲನ್ನು ವಾಶ್ ಮಾಡಿ. ಈ ರೀತಿ ಮಾಡುವುದರಿಂದ ಕೂದಲು ನೈಸರ್ಗಿಕವಾಗಿ ಕಪ್ಪಾಗುತ್ತದೆ ಎಂದು ಹೇಳಲಾಗುತ್ತದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.