Diabetes: ಮಧುಮೇಹ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ, ಈ ಕಾಯಿಲೆಯಿಂದ ವಯಸ್ಕರು ಅಷ್ಟೆ ಅಲ್ಲದೆ ಯುವಕರು ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಮ್ಮ ಆಹಾರ ಕ್ರಮವನ್ನು ನಾವು ಸರಿಯಾಗಿ ಪಾಲಿಸುವುದರಿಂದ ನಾವು ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ಗೆ ತರಬಹುದು. ಅದರಲ್ಲಿ ಈ ತರಕಾರಿ ಕೂಡ ಒಂದು. ನಾವು ಪ್ರತಿನಿತ್ಯ ಈ ತರಕಾರಿಯನ್ನು ಸೇವಿಸುವುದರಿಂದ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಬಹುದು. ಹಾಗಾದರೆ ಆ ತರಕಾರಿ ಯಾವುದು? ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

ಮಧುಮೇಹ.. ಈ ಕಾಯಿಲೆಯನ್ನು ಗುಣಪಡಿಸುವ ಔಷಧಿ ಇನ್ನೂ ಕೂಡ ಲಭ್ಯವಿಲ್ಲ. ಆದರೆ, ಶುಗರ್‌ ಅನ್ನು ಕಂಟ್ರೋಲ್‌ ಮಾಡುವ ಔಷಧಿಗಳು ಮಾತ್ರ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಔಷಧಿಯನ್ನು ಸೇವಿಸುವುದರಿಂದ ಶುಗರ್‌ ಅನ್ನು ಕಂಟ್ರೋಲ್‌ ಮಾಡಬಹುದಾದರೂ, ಕೆಲವೊಮ್ಮೆ ಯಾವುದೇ ಔಷಧಿ ಸೇವನೆಯಿಂದಲೂ ಶುಗರ್‌ ಕಂಟ್ರೋಲ್‌ಗೆ ತರಲು ಸಾಧ್ಯವಾಗುವುದಿಲ್ಲ. ಆದರೆ, ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ತರಕಾರಿಗಳನ್ನು ಸೇರಿಸುವುದರಿಂದ ನಾವು ನಮ್ಮ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿಡಬಹುದು.


ಹೌದು, ಸೌತೇಕಾಯಿಯನ್ನು ನಾವು ನಮ್ಮ ಆಹಾರಕ್ರಮದಲ್ಲಿ ಅಳವಿಡಿಸಿಕೊಳ್ಳುವುದರಿಂದ ನಾವು ನಮ್ಮ ದೇಹದಲ್ಲಿನ ಬ್ಲಡ್‌ ಶುಗರ್‌ ಅನ್ನು ಕಡಿಮೆ ಮಾಡಬಹುದು. ಪ್ರತಿನಿತ್ಯ ನಾವು ಸೌತೇಕಾಯಿಯನ್ನು ಸೇವಿಸುವುದರಿಂದ ನಾವು ನಮ್ಮ ಬ್ಲಡ್‌ ಶುಗರ್‌ ಅನ್ನು ಕಂಟ್ರೋಲ್‌ನಲ್ಲಿ ಇಡಬಹುದು.


ಮಧುಮೇಹಿಗಳಿಗೆ ಸಾಮಾನ್ಯವಾಗಿ ಕಾಡುವ ಸಮಸ್ಯೆ ಎಂದರೆ, ಮೂತ್ರ ವಿಸರ್ಜನೆ ಸಮಸ್ಯೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆ ಎದುರಾಗುತ್ತದೆ. ಆದ್ದರಿಂದ ಸೌತೇಕಾಯಿಯನ್ನು ಸೇವಿಸುವುದರಿಂದ ನೀವು ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದರಿಂದ ತಡೆಯಬಹುದು. ತೂಕ ಹೆಚ್ಚಾಗುವ ಕಾರಣದಿಂದಾಗಿ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಕೂಡ ಹೆಚ್ಚಾಗಬಹುದು. ಆದರೆ, ಪ್ರತಿನಿತ್ಯ ಸೌತೇಕಾಯಿಯನ್ನು ಸೇವಿಸುವುದರಿಂದ ಇದು ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡುವುದಷ್ಟೆ ಅಲ್ಲದೆ ನಿಮ್ಮ ಮಧುಮೇಹವನ್ನು ಕಂಟ್ರೋಲ್‌ನಲ್ಲಿಡಲು ಸಹಾಯ ಮಾಡುತ್ತದೆ.


ಹೀಗೆ ಸೌತೇಕಾಯಿಯನ್ನು, ಸೂಪ್‌, ಸಲಾಡ್‌ , ಕೋಸಂಬರಿ ಹೀಗೆ ಹಲವಾರು ಆಹಾರ ಪದಾರ್ಥಗಳಲ್ಲಿ ಸೌತೇಕಾಯಿಯನ್ನು ಬೆರಸಿ ಸೇವಿಸುವುದರಿಂದ ನಿಮ್ಮ ಶುಗರ್‌ ಕಂಟ್ರೋಲ್‌ನಲ್ಲಿರುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.