ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ದುಬಾರಿ ಆರೋಗ್ಯ ಸೇವೆ ಇದೀಗ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸಿಗುತ್ತಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್ ಲೋಕಾರ್ಪಣೆ ಮಾಡಲಾಗಿದೆ.  ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಯೂನಿಟ್ ಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವ ಡಾ.ಸುಧಾಕರ್, ಇಂತಹ ಆರೋಗ್ಯ ಸೌಲಭ್ಯಗಳು ಕರ್ನಾಟಕದ ಆರೋಗ್ಯ ಕ್ಷೇತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಆರೋಗ್ಯ ಸೇವೆ ಸಾರ್ವಜನಿಕರಿಗೆ ಸಿಗುತ್ತಿದೆ. ದುಬಾರಿ ಚಿಕಿತ್ಸೆಗಳು ಸರ್ಕಾರಿ ಆರೋಗ್ಯ ಸೇವೆಗಳ ಮೂಲಕ ಬಡವರಿಗೂ ಸಿಗುವಂತಾಗಬೇಕು ಎಂದು ಹೇಳಿದರು.  


COMMERCIAL BREAK
SCROLL TO CONTINUE READING

ಇದನ್ನೂ ಓದಿ:Viral Video: ಯಶ್ ಸ್ಟೈಲ್ ಕಾಪಿ ಮಾಡಿದ ನಟಿ ಶಿಲ್ಪಾ ಶೆಟ್ಟಿ


ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿ ಅಥವಾ  HBO2 ದುಬಾರಿ ಚಿಕಿತ್ಸೆಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಸೇವೆ ಲಭ್ಯವಾಗುತ್ತಿರುವುದರಿಂದ ಸಾಮಾನ್ಯ ಜನರಿಗೂ ಇದರ ಸೇವೆ ಸಿಗುವ ಹಾಗಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಉದ್ಘಾಟನೆಯಾಗಿರುವ ಈ HBO2 ಯೂನಿಟ್ ಅನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗಿದೆ. ಸುಮಾರು 3.5 ಕೋಟಿ ರೂಪಾಯಿ ವೆಚ್ಚದ ಆಧುನಿಕ ಯಂತ್ರೋಪಕರಣಗಳು ಇದಾಗಿದೆ ಎಂದು ವಿವರಿಸಿದರು.


ಸ್ಕೂಬಾ ಡೈವಿಂಗ್ ಮಾಡುವಾಗ ಉಸಿರಾಟದ ವ್ಯವಸ್ಥೆಗಾಗಿ ಒಂದು ಟ್ಯಾಂಕ್ ಇರುತ್ತದೆ. ಅದರಲ್ಲಿರುವ ಪೈಪ್ ಮೂಲಕ ಮನುಷ್ಯ ನೀರಿನ ಒಳಗೆ ಹೋದಾಗ ಉಸಿರಾಡುತ್ತಾನೆ. ಈ ಪ್ರಕ್ರಿಯೆ ವೇಳೆ 80 ಪ್ರತಿಶತ ನೈಟ್ರೋಜನ್ ಮತ್ತು 20 ಪ್ರತಿಶತ ಆಕ್ಸಿನ್ ಇರುತ್ತದೆ.  ಆದರೆ ಹೈಪರ್ ಬ್ಯಾರಿಕ್ ಆಕ್ಸಿಜನ್ ಥೆರಪಿಯಲ್ಲಿ 100 ಪ್ರತಿಶತ ಆಕ್ಸಿಜನ್ ಮಾತ್ರ ಇರುತ್ತದೆ.  ಉತ್ಕೃಷ್ಠ ದರ್ಜೆಯ ಮೆಡಿಕಲ್ ಆಕ್ಸಿಜನ್ ಇದಾಗಿದೆ. 


ಇದನ್ನೂ ಓದಿ:Arecanut Today Price: ಶಿವಮೊಗ್ಗ ಅಡಿಕೆ ಮಾರುಕಟ್ಟೆ ಇಂದಿನ ಧಾರಣೆ


HBO2 ಸುಟ್ಟಗಾಯಕ್ಕೆ ತುತ್ತಾದವರಿಗೆ, ಡಯಾಬಿಟಕ್ ಪೇಷಂಟ್ ಗಳಿಗೆ ವಾಸ್ಕ್ಯುಲರ್ ಸಮಸ್ಯೆ ಹೊಂದಿರುವವರಿಗೆ, ಕ್ರೀಡಾಪಟುಗಳ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳ ಚಿಕಿತ್ಸಾ ವೇಳೆಯಲ್ಲಿ ನೆರವಾಗುತ್ತದೆ.  HBO2 ಚಿಕಿತ್ಸೆಯ ಅವಧಿ ಸಾಮಾನ್ಯವಾಗಿ ಒಂದೂವರೆ ಗಂಟೆಯಿಂದ 2 ಗಂಟೆಗಳ ಅವಧಿಯದ್ದಾಗಿರುತ್ತದೆ. ಕಠಿಣ ಸನ್ನಿವೇಶಗಳಲ್ಲಿ 5 ರಿಂದ 6 ಬಾರಿ ಈ ಚಿಕಿತ್ಸೆಯನ್ನು ನೀಡಬಹುದು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.