Health Benefits Clay and Copper Water: ನೀರನ್ನು ಈ ರೀತಿ ಸಂಗ್ರಹಿಸಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ
Health Benefits Clay and Copper Water: ನೀರನ್ನು ಈ ರೀತಿ ಸಂಗ್ರಹಿಸಿಡುವುದರ ಹಲವು ಆರೋಗ್ಯಕರ ಲಾಭಗಳಿವೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದಲ್ಲದೆ, ಇದು ವಾತ, ಪಿತ್ತ, ಕಫದಂತಹ ಮೂರು ದೋಷಗಳನ್ನು ಸಮತೋಲನದಲ್ಲಿರಿಸುತ್ತದೆ.
Health Benefits Clay and Copper Water: ನೀರನ್ನು ಈ ರೀತಿ ಸಂಗ್ರಹಿಸಿಡುವುದರ ಹಲವು ಆರೋಗ್ಯಕರ ಲಾಭಗಳಿವೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುವುದಲ್ಲದೆ, ಇದು ವಾತ, ಪಿತ್ತ, ಕಫದಂತಹ ಮೂರು ದೋಷಗಳನ್ನು ಸಮತೋಲನದಲ್ಲಿರಿಸುತ್ತದೆ.
Health Benefits Clay and Copper Water - ಆಯುರ್ವೇದದ ಪ್ರಕಾರ ಆಹಾರದಂತೆ ನೀರಿನ (Water) ಜೀರ್ಣಕ್ರಿಯೆ ಕೂಡ ಅವಶ್ಯಕವಾಗಿದೆ. ಆಯುರ್ವೇದದಲ್ಲಿ ನೀರಿನ ಬಗ್ಗೆ ವಿಶೇಷ ಪ್ರೋಟೋಕಾಲ್ ಗಳನ್ನು ಶಿಫಾರಸು ಮಾಡಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ನೀವೂ ಕೂಡ ನೀರಿನ ಗರಿಷ್ಠ ಲಾಭವನ್ನು ಪಡೆಯಬಹುದು.
ತಜ್ಞರು ಹೇಳುವ ಪ್ರಕಾರ, ನೀವು ನೀರನ್ನು ಸಂಗ್ರಹಿಸಲು ಬಳಕೆ ಮಾಡುವ ಪಾತ್ರೆಯ ಗಾತ್ರ ಹಾಗೂ ಆಕಾರ ತುಂಬಾ ಮಹತ್ವದ್ದಾಗಿದೆ. ಹೀಗಾಗಿ ರೌಂಡ್ ಆಗಿರುವ ಅಥವಾ ದುಂಡು ಗಾತ್ರದ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಲು ಸಲಹೆ ನೀಡಲಾಗುತ್ತದೆ.
ತ್ವಚೆಯ ಸಮಸ್ಯೆ (Skin Problems) ದೂರಾಗುತ್ತದೆ
ನೀರಿನ ಸಂಗ್ರಹಣೆಗಾಗಿ ಮಣ್ಣಿನ ಮಡಿಕೆಗಳು ಮತ್ತು ತಾಮ್ರದ ಪಾತ್ರೆಗಳನ್ನುಅತ್ಯುತ್ತಮ ಪರಿಗಣಿಸಲಾಗಿದೆ. ಮಣ್ಣಿನ ಮಡಿಕೆಗಳು ಏರ್ ಸ್ಪೇಸಸ್ ಹೊಂದಿರುತ್ತವೆ, ಇದರಿಂದಾಗಿ ನೀರು (Clay Water) ತಾಜಾ ಮತ್ತು ತಂಪಾಗಿರುತ್ತದೆ. ಇದು ಆಮ್ಲೀಯತೆ ಮತ್ತು ಚರ್ಮದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಇದರೊಂದಿಗೆ ಚೈತನ್ಯ ಮತ್ತು ಶಕ್ತಿ ಕೂಡ ಹೆಚ್ಚಾಗುತ್ತದೆ. ಹಳೆಯ ಮಡಿಕೆಗಳು ಹೊಸ ಮಣ್ಣಿನ ಮಡಕೆಗಳಿಗಿಂತ ಉತ್ತಮವಾಗಿವೆ, ಏಕೆಂದರೆ ಇವುಗಳಲ್ಲಿ ನೀರು ದೀರ್ಘಕಾಲದವರೆಗೆ ತಂಪಾಗಿರುತ್ತದೆ.
ಇದನ್ನೂ ಓದಿ-Water Benefits for Kidney Problems : ಕಿಡ್ನಿ ಸಮಸ್ಯೆಗಳಿಗೆ ರಾಮಬಾಣ ನೀರು..!
ಜೀರ್ಣಕ್ರಿಯೆಯಲ್ಲಿ ಸಹಾಯ ಸಿಗುತ್ತದೆ
ತಾಮ್ರದ ಪಾತ್ರೆಯಲ್ಲಿ ನೀರನ್ನು (Copper Water) ಸಂಗ್ರಹಿಸುವುದು ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಗೆ ತುಂಬಾ ಸಹಕಾರಿಯಾಗಿದೆ ಮತ್ತು ಇದು ವಾತ, ಪಿತ್ತ, ಕಫ ಎಂಬ ಮೂರು ದೋಷಗಳನ್ನು ಸಮತೋಲನಗೊಳಿಸುತ್ತದೆ. ನಿಮಗೆ ರಕ್ತಸ್ರಾವದ ಸಮಸ್ಯೆ ಇದ್ದರೆ ತಾಮ್ರದ ಪಾತ್ರೆಯನ್ನು ಬಳಸಬೇಡಿ. ತಾಮ್ರದ ಪಾತ್ರೆಯಲ್ಲಿ ಆಹಾರ ಬೇಯಿಸಬೇಡಿ ಹಾಗೂ ಅದರಲ್ಲಿ ಬಿಸಿ ಹಾಲು ಅಥವಾ ಇತರ ಯಾವುದೇ ಬಿಸಿಯಾದ ದ್ರಾವಣ ಹಾಕಬೇಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ