ದಕ್ಷಿಣ ಭಾರತೀಯ ಭಕ್ಷ್ಯಗಳು 'ಕರಿಬೇವು' ಇಲ್ಲದೆ ಏಕೆ ಪೂರ್ಣವಾಗುವುದಿಲ್ಲ ಎಂದು ಹಲವರು ಯೋಚಿಸಿದರೆ, ಮತ್ತೆ ಕೆಲವರು ಒಗ್ಗರಣೆಗೆ ಕರಿಬೇವಿಲ್ಲದೆ ಮಜಾನೆ... ಬರಲ್ಲ ಅಂತಾರೆ. ಆದರೆ ನಿಮಗೆ ಗೊತ್ತಾ ಕರಿಬೇವನ್ನು ಬಳಿಸುವುದು ಕೇವಲ ರುಚಿಗಾಗಿ ಮಾತ್ರವಲ್ಲ ಇದರಿಂದ ಹಲವು ಪ್ರಯೋಜನಗಳಿವೆ ಎಂದು...


COMMERCIAL BREAK
SCROLL TO CONTINUE READING

ಸಮೃದ್ಧವಾಗಿದೆ ಐರನ್:
ಕರಿಬೇವು ಕಬ್ಬಿಣದ(ಐರನ್) ಅಂಶ ಮತ್ತು ಫೋಲಿಕ್ ಆಮ್ಲದ ಮೂಲವಾಗಿದೆ. ಹಾಗಾಗಿ ಕರಿಬೇವು ಸೇವನೆ ದೇಹದಲ್ಲಿ ಐರನ್ ಕೊರತೆ ಇದ್ದರೆ ಅದನ್ನು ಪರಿಹರಿಸಿ ರಕ್ತಹೀನತೆಯಿಂದ ನಮ್ಮನ್ನು ರಕ್ಷಿಸುತ್ತದೆ.


ಲಿವರ್ ರಕ್ಷಣೆ:
ಹೆಚ್ಚು ಅಲ್ಕೋ ಹಾಲ್ ಸೇವಿಸುವವರ ಆಹಾರದಲ್ಲಿ ಕರಿಬೇವನ್ನು ಸೇರಿಸುವುದರಿಂದ ಲಿವರ್ ಸಂಬಂಧಿತ ಕಾಯಿಲೆಗಳಿಂದ ರಕ್ಷಿಸುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಏಷಿಯಲ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಅಂಡ್ ಕ್ಲಿನಿಕಲ್ ರಿಸರ್ಚ್ ಪ್ರಕಾರ, ಆಕ್ಸಿಡೇಟಿವ್ ಒತ್ತಡ ಮತ್ತು ಕಾಂಪ್ಫರಾಲ್ ಕಾರಣದಿಂದ ದೇಹದಲ್ಲಿ ಉಂಟಾಗುವ ಜೀವಾಣು ಯಕೃತ್ ಹಾನಿ ಮಾಡುತ್ತದೆ.


ಬ್ಲಡ್ ಶುಗರ್ ಕಂಟ್ರೋಲ್:
ಜರ್ನಲ್ ಆಫ್ ಪ್ಲಾಂಟ್ ಫುಡ್ ಫಾರ್ ನ್ಯೂಟ್ರಿಶಿಯನ್ ಅಧ್ಯಯನದ ಪ್ರಕಾರ,  ಕರಿಬೇವಿನಲ್ಲಿರುವ ಫೈಬರ್ ರಕ್ತದಿಂದ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಮತ್ತು ತೂಕ ಹೆಚ್ಚಿರುವ ಜನರು ತಪ್ಪದೆ ಕರಿಬೇವಿನ ಎಲೆಗಳನ್ನು ತಿನ್ನುವುದು ಮುಖ್ಯವಾಗಿದೆ.


ಕೊಲೆಸ್ಟರಾಲ್ ಮಟ್ಟ ಕಡಿಮೆ ಮಾಡುವಲ್ಲಿ ಸಹಾಯಕ:
ರಕ್ತದಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವುದರಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಇದು ರಕ್ತದಲ್ಲಿನ ಉತ್ತಮ ಕೊಲೆಸ್ಟರಾಲ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಹೃದಯರಕ್ತನಾಳದ ಕಾಯಿಲೆ ಮತ್ತು ಎಥೆರೊಕ್ಲಾರೋಸಿಸ್ ನಿಂದ ರಕ್ಷಿಸುತ್ತದೆ.