Hibiscus Tea Benefits: ಮನೆಯಲ್ಲಿ ಬೆಳೆಸುವ ಹೂವಿನ ಗಿಡಗಳಲ್ಲಿ ದಾಸವಾಳ ಗಿಡವೂ ಒಂದು. ದಾಸವಾಳದ ಹೂವುಗಳು ಮಾರುಕಟ್ಟೆಯಲ್ಲಿ ಹಲವು ವಿಧಗಳಲ್ಲಿ ಲಭ್ಯವಿದೆ. ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಈ ಹೂವುಗಳು ಕೇವಲ ಪೂಜೆಗೆ ಅಲಂಕಾರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಉಪಕಾರಿಯಾಗಿವೆ. 


COMMERCIAL BREAK
SCROLL TO CONTINUE READING

ದಾಸವಾಳ ಹೂವುಗಳು ಸುಂದರವಾಗಿದ್ದು, ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಕೂದಲು ಬೆಳವಣಿಗೆಗೆ ದಾಸವಾಳ ಹೂವು ಬಳಸುತ್ತಾರೆ. ದಾಸವಾಳ ಹೂವುಗಳನ್ನು ಬಳಸುವುದರಿಂದ ಕೂದಲು ಸುಂದರವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ. ಆದರೆ ದಾಸವಾಳದ ಹೂವುಗಳು ಕೂದಲಿನ ಬೆಳವಣಿಗೆಗೆ ಮಾತ್ರವಲ್ಲ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ದಾಸವಾಳದ ಹೂವುಗಳಿಂದ ತಯಾರಿಸಿದ ಚಹಾವನ್ನು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. 


ಇದನ್ನೂ ಓದಿ : ವಾಲ್ ನಟ್ಸ್.. ತೂಕ ಇಳಿಕೆಗೆ ಪ್ರತಿನಿತ್ಯ ಮುಂಜಾನೆ ಹೀಗೆ ಸೇವಿಸಿ 


ದಾಸವಾಳ ಚಹಾವನ್ನು ತಯಾರಿಸಲು ಮೊದಲು ಒಂದು ಲೋಟ ನೀರು, ದಾಸವಾಳದ ಹೂವುಗಳು, ಒಂದು ಚಮಚ ಕಾಳುಮೆಣಸಿನ ಪುಡಿ, ಒಂದು ಗ್ರಾಂ ದಾಲ್ಚಿನ್ನಿ ಪುಡಿ ಸೇರಿಸಿ, ಕುದಿಸಿ. ಹೀಗೆ ತಯಾರಿಸಿದ ಚಹಾವನ್ನು 12 ವಾರಗಳ ಕಾಲ ಕುಡಿಯುವುದರಿಂದ ದೇಹದಿಂದ ಕಫ ಮತ್ತು ಪಿತ್ತ ದೋಷಗಳು ದೂರವಾಗುತ್ತವೆ. 


ಇದರಿಂದ ಒತ್ತಡ ಕಡಿಮೆಯಾಗುವುದಲ್ಲದೆ ಮನಸ್ಸಿಗೆ ನೆಮ್ಮದಿಯೂ ಸಿಗುತ್ತದೆ. ಈ ದಾಸವಾಳದ ಟೀ ಕುಡಿಯುವುದರಿಂದ ಮೈಗ್ರೇನ್ ತಲೆನೋವು ನಿವಾರಣೆಯಾಗುತ್ತದೆ. ಈ ಟೀ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆ ದೂರವಾಗುತ್ತದೆ.


ವಸಡಿನ ಊತ, ವಸಡಿನಿಂದ ರಕ್ತಸ್ರಾವದಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಈ ಚಹಾವು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗುತ್ತದೆ. 


ಇದನ್ನೂ ಓದಿ : ಅರಿಶಿನದಿಂದ ಉಪಯೋಗದಷ್ಟೇ ಅಪಾಯವೂ ಇದೆ.. ಈ ಸಮಸ್ಯೆಯಿದ್ದರೆ ಮುಟ್ಟಿಯೂ ನೋಡಬೇಡಿ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.