Health Tips: ದೇಹ ತಂಪಾಗಿಸಲು ಇಲ್ಲಿದೆ ಸರಳ ಮನೆಮದ್ದು
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ದೇಹವು ಹೀಟ್ ಆಗಲು ಆರಂಭವಾಗುತ್ತದೆ. ಇದರ ನಿಯಂತ್ರಣಕ್ಕೆ ಇಲ್ಲಿದೆ ಸರಳ ಮನೆ ಮದ್ದು
Jeera Water: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ದೇಹವು ಹೀಟ್ ಆಗಲು ಆರಂಭಿಸುತ್ತದೆ. ಅದನ್ನು ತಂಪಾಗಿಸಲು ಹಲವಾರು ರೀತಿಯಲ್ಲಿ ಚಿಕಿತ್ಸೆ ಪಡೆದರೂ ಕೆಲವೊಂದು ಬಾರಿ ಪ್ರಯೋಜನಕ್ಕೆ ಬಾರದೇ ಇರಬಹುದು ಆದರೆ ಸಾಧ್ಯವಾದಷ್ಟು ಮನೆಮದ್ದು ಸೇವನೆಯಲ್ಲಿ ಜಿರಿಗೆ ಉಪಯೋಗಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಆರೋಗ್ಯ ದೃಷ್ಠಿಯಲ್ಲಿ ಜಿರಿಗೆ ಹೇಗೆ ಸಹಕಾರಿ ನೋಡೊಣ..
ಜೀರ್ಣಕ್ರಿಯೆ ಸಮೃದ್ದಿ
ಒಂದು ಲೋಟಕ್ಕೆ ಜೀರಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆಯು ವೃದ್ಧಿಸುವುದು ಮತ್ತು ಹೊಟ್ಟೆಯ ಸಮಸ್ಯೆಯನ್ನು ಪರಿಣಾಮಕಾರಿ ಆಗಿ ನಿವಾರಣೆ ಮಾಡಬಹುದು. ಯಾಕೆಂದರೆ ಜೀರಿಗೆಯಲ್ಲಿ ಕೆಲವೊಂದು ಪ್ರಮುಖ ಸಾರಭೂತ ತೈಲಗಳು ಮತ್ತು ಪೋಷಕಾಂಶ ಗಳಾಗಿರುವಂತಹ ಮೆಗ್ನಿಶಿಯಂ, ಸೋಡಿಯಂ ಅಂಶಗಳನ್ನು ಒಳಗೊಂಡಿದೆ. ಅದರಲಿರುವ ಅಂಶವು ಹೊಟ್ಟೆಯ ಗ್ಯಾಸ್ ಮತ್ತು ವಾಕರಿಕೆ ನಿವಾರಿಸುತ್ತದೆ.
ದೇಹದ ಉಷ್ಣತೆ ನಿಯಂತ್ರಣ
ಖಾಲಿ ಹೊಟ್ಟೆಯಲ್ಲಿ ಏನೇ ಕುಡಿದರೂ ಅದು ನಮ್ಮ ಆರೋಗ್ಯಕ್ಕೆ ಹೆಚ್ಚಿನ ಲಾಭ ನೀಡುವುದು. ಇಂತಹ ಒಂದು ಪಾನೀಯವೆಂದರೆ ಅದು ಜೀರಿಗೆ ನೀರು. ಇದನ್ನು ಕುಡಿದರೆ ದೇಹವು ತಂಪಾಗಿರುತ್ತದೆ ಮತ್ತು ಇದು ದೇಹದಲ್ಲಿ ಉಷ್ಣತೆಯನ್ನು ಕಾಪಾಡಲು ನೆರವಾಗುವುದು.
ಇದನ್ನೂ ಓದಿ: Pregnancy Test : ಮನೆಯಲ್ಲಿ ಹೀಗೆ ಮಾಡಿಕೊಳ್ಳಿ Pregnancy ಟೆಸ್ಟ್ : ಯಾವುದೇ ಭಯ ಬೇಡ
ತೂಕ ಇಳಿಕೆ
ತುಂಬಾ ದಪ್ಪಗಿದ್ದೀವಿ ಎಂದು ಕೊರಗುವವರು ಸಹ ಇದನ್ನು ಹಾಗೆಯೇ ಬರಿ ಬಾಯಲ್ಲಿ ಪ್ರತಿನಿತ್ಯ ಸೇವಿಸಿ ದೇಹ ತೂಕ ನಿಯಂತ್ರಿಸಿಕೊಳ್ಳ ಬಹುದಾಗಿದೆ.
ಉರಿ ಮೂತ್ರ ನಿಯಂತ್ರಣ
ಬೇಸಿಗೆಯಲ್ಲಿ ದೇಹ ಉಷ್ಣವಾದಷ್ಟು ಉರಿ ಮೂತ್ರಕ್ಕೆ ತಿರುಗುತ್ತದೆ. ಇದನ್ನು ನಿಯಂತ್ರಿಸಲು ಜಿರಿಗೆಯನ್ನು ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ದೇಹವನ್ನು ತಂಪಾಗಿಸಿ ದೇಹದ ಸೂಕ್ಷ್ಮ ಸ್ಥಳವನ್ನು ಆರೋಗ್ಯವಾಗಿರಿಸುತ್ತದೆ.
ಇದನ್ನೂ ಓದಿ: ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಯನ್ನು ಬುಡ ಸಮೇತ ಕಿತ್ತು ಹಾಕುತ್ತದೆ ಸೌತೆಕಾಯಿ
ಜೀರಿಗೆಯು ಕಬ್ಬಿನಾಂಶ ಮತ್ತು ಆಹಾರದ ನಾರಿನಾಂಶವನ್ನು ಹೊಂದಿರುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ವಿಟಮಿನ್ ಎ ಮತ್ತು ಸಿ ಅಗಾದವಾಗಿದೆ. ಆಂಟಿಆಕ್ಸಿಡೆಂಟ್ ಗಳಾಗಿ ಕೆಲಸ ಮಾಡಿ ಸೋಂಕು ವಿರುದ್ಧ ಹೋರಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ