ನಿಮಗಿದು ಗೊತ್ತೆ..! ಧೂಮಪಾನ ಮಾಡಿ ಬಿಟ್ಟವರು, ಮಾಡದೇ ಇರುವವರಿಗಿಂತ ಹೆಚ್ಚು ಕಾಲ ಬದುಕುತ್ತಾರೆ
Quitting smoke health benefits : ಇತ್ತೀಚಿನ ಅಧ್ಯಯನ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ಧೂಮಪಾನವನ್ನು ತ್ಯಜಿಸುವ ವ್ಯಕ್ತಿಯ ದೇಹದಲ್ಲಿನ ದೊಡ್ಡ ಬದಲಾವಣೆಗಳಿಗೆ ಕಾರಣವಾಗುತ್ತದೆ ಎಂದು ಹೇಳಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
Smokeing side effects : ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ಎಷ್ಟು ಬಾರಿ ಹೇಳಿದರೂ ಜನರು ಈ ಮಾತನ್ನು ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಎಷ್ಟೇ ಆರೋಗ್ಯ ಸಮಸ್ಯೆಗಳು ಬಂದರೂ ಅವರಿಗೆ ಲೆಕ್ಕವೇ ಇಲ್ಲ. ಆದರೆ ತಂಬಾಕು ಸೇವನೆಯನ್ನು ನಿಲ್ಲಿಸುವುದರಿಂದ ಅನೇಕ ಅನಾಹುತಗಳನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.
ಇತ್ತೀಚಿಗೆ ಅಧ್ಯಯನವೊಂದು ಧೂಮಪಾನವನ್ನು ತ್ಯಜಿಸುವುದರಿಂದ ಕೇವಲ ಮೂರು ವರ್ಷಗಳ ನಂತರ ಜೀವಿತಾವಧಿಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ತಿಳಿಸಿದಿದೆ. ಬನ್ನಿ ಆ ಅಧ್ಯಯನ ಯಾವುದು? ಅದು ಏನು ಬಹಿರಂಗಪಡಿಸಿದೆ ಎಂಬುದನ್ನು ತಿಳಿಯೋಣ..
ಇದನ್ನೂ ಓದಿ : ಮೆದುಳಿನ ಶಕ್ತಿ ಹೆಚ್ಚಿಸುವ ಅತ್ಯದ್ಭುತ ಆಹಾರಗಳು
ಟೊರೊಂಟೊ ವಿಶ್ವವಿದ್ಯಾಲಯದ ಸಂಶೋಧಕರು ಧೂಮಪಾನದ ಕುರಿತು ಹೊಸ ಅಧ್ಯಯನವನ್ನು ನಡೆಸಿದರು. NEJM ಎವಿಡೆನ್ಸ್‌ನಲ್ಲಿ ಪ್ರಕಟವಾದ ಈ ಅಧ್ಯಯನವು 40 ವರ್ಷಕ್ಕಿಂತ ಮೊದಲು ಧೂಮಪಾನವನ್ನು ತ್ಯಜಿಸಿದ ಜನರು ಎಂದಿಗೂ ಧೂಮಪಾನ ಮಾಡದವರ ಜೀವಿತಾವಧಿಯನ್ನು ಹೊಂದಿರುತ್ತಾರೆ ಎಂದು ಕಂಡು ಹಿಡಿದಿದೆ.
ಧೂಮಪಾನವನ್ನು ತ್ಯಜಿಸುವುದರಿಂದ ಸಾವಿನ ಅಪಾಯ ಕಡಿಮೆ. ನೀವು ಧೂಮಪಾನ ಮಾಡುತ್ತಿದ್ದರೆ, ಆರೋಗ್ಯ ಸಮಸ್ಯೆಗಳು ಉಂಟಾಗಿ ನಿಮಗೆ ಸಾವಿನ ಅಪಾಯ ಹೆಚ್ಚಾಗುತ್ತದೆ. ಅಲ್ಲದೆ, ಶ್ವಾಸಕೋಶದ ಸಮಸ್ಯೆ ಉಂಟಾಗಿ ಕ್ಯಾನ್ಸರ್ ನಿಂದಾಗಿ ಅನೇಕರು ಸಾವನ್ನಪ್ಪುತ್ತಿದ್ದಾರೆ. ಜೀವಿತಾವಧಿ ಕಡಿಮೆಯಾಗುತ್ತದೆ. ಅದೇ ಧೂಮಪಾನವನ್ನು ತ್ಯಜಿಸಿದರೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಬಹುದು ಅಂತ ಈ ಅಧ್ಯಯನವು ತೋರಿಸಿದೆ.
ಇದನ್ನೂ ಓದಿ :ಹಾಲಿನೊಟ್ಟಿಗೆ ಕುಂಬಳಕಾಯಿ ಬೀಜ ಸೇವಿಸಿದ್ರೆ ದೂರವಾಗುತ್ತೆ ಈ ಆರೋಗ್ಯ ಸಮಸ್ಯೆ!
ಈ ಅಧ್ಯಯನದಲ್ಲಿ ನಾಲ್ಕು ದೇಶಗಳ ಜನರು ಭಾಗವಹಿಸಿದ್ದರು. ಯುಎಸ್, ಯುಕೆ, ಕೆನಡಾ ಮತ್ತು ನಾರ್ವೆಯ ಜನರ ಮೇಲೆ 15 ವರ್ಷಗಳ ಕಾಲ ಈ ಅಧ್ಯಯನವನ್ನು ಮಾಡಲಾಗಿದೆ. ಎಂದಿಗೂ ಧೂಮಪಾನ ಮಾಡದವರಿಗೆ ಹೋಲಿಸಿದರೆ 40 ರಿಂದ 79 ವರ್ಷ ವಯಸ್ಸಿನ ಧೂಮಪಾನಿಗಳು ಸಾಯುವ ಅಪಾಯವನ್ನು ಸುಮಾರು ಮೂರು ಪಟ್ಟು ಹೊಂದಿರುತ್ತಾರೆ. ಅಂದರೆ ಅವರು ಸರಾಸರಿ 12 ರಿಂದ 13 ವರ್ಷಗಳ ಜೀವನವನ್ನು ಕಳೆದುಕೊಂಡಿದ್ದಾರೆ. ಎಂದಿಗೂ ಧೂಮಪಾನ ಮಾಡದವರಿಗೆ ಹೋಲಿಸಿದರೆ, ಧೂಮಪಾನವನ್ನು ತ್ಯಜಿಸಿದವರಲ್ಲಿ ಸಾವಿನ ಅಪಾಯವು ಕಡಿಮೆಯಾಗಿದೆ ಎಂದು ಕಂಡುಬಂದಿದೆ.
ಗಮನಿಸಿ: ಇದು ವಿವಿಧ ಅಧ್ಯಯನಗಳು, ಸಂಶೋಧನೆಗಳು ಮತ್ತು ಆರೋಗ್ಯ ಜರ್ನಲ್‌ಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಿಮ್ಮ ತಿಳುವಳಿಕೆಗಾಗಿ ಎಂದಿನಂತೆ ಇಲ್ಲಿ ಒದಗಿಸಲಾಗಿದೆ. ಈ ಬಗ್ಗೆ ನಿಮಗೆ ಯಾವುದೇ ಅನುಮಾನಗಳಿದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕು. ಈ ಲೇಖನದಲ್ಲಿ ಉಲ್ಲೇಖಿಸಲಾದ ವಿಷಯಗಳಿಗೆ Zee Kannada News ಜವಾಬ್ದಾರಿಯಾಗಿರುವುದಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.