Spring Onion Benefits: ಈರುಳ್ಳಿ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ಆರೋಗ್ಯ ತಜ್ಞರು. ಇದನ್ನು ಸೇವಿಸುವುದರಿಂದ ದೇಹವು ಆರೋಗ್ಯ ಸಮಸ್ಯೆಗಳಿಂದ ಬಳಲುವುದನ್ನು ತಡೆಯುತ್ತದೆ. ಇದು ಸಕ್ಕರೆ ಮಟ್ಟವನ್ನು ಸಹ ನಿಯಂತ್ರಣದಲ್ಲಿಡುತ್ತದೆ. ಈರುಳ್ಳಿ ಸೊಪ್ಪು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಇದರಿಂದ ವಾತಾವರಣದಲ್ಲಿನ ಶೀತ, ಜ್ವರದಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ತಜ್ಞರು.


COMMERCIAL BREAK
SCROLL TO CONTINUE READING

ಈರುಳ್ಳಿ ಸೊಪ್ಪಿನಲ್ಲಿರುವ ಆಂಟಿಹಿಸ್ಟಮೈನ್ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಇದು ಸಂಧಿವಾತ ಮತ್ತು ಅಸ್ತಮಾ ಚಿಕಿತ್ಸೆಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ಚಯಾಪಚಯವನ್ನು ನಿಯಂತ್ರಿಸುವಲ್ಲಿ ಈರುಳ್ಳಿ ಸೊಪ್ಪು ಉಪಯುಕ್ತವಾಗಿದೆ. ಇದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.


ಇದನ್ನೂ ಓದಿ: ಹೀಗೆ ಮಾಡಿದ್ರೆ ಕೇವಲ 1 ತಿಂಗಳಲ್ಲಿ 10 ಕೆಜಿ ವರೆಗೆ ತೂಕ ಕಳೆದುಕೊಳ್ಳಬಹದು..! ಟಿಪ್ಸ್‌ ಇಲ್ಲಿವೆ 


ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಈರುಳ್ಳಿ ಸೊಪ್ಪು ಒಳ್ಳೆಯದು. ಇವುಗಳಲ್ಲಿರುವ ಫ್ಲೇವನಾಯ್ಡ್ ಕೆಮೊಫೆರಾಲ್ ರಕ್ತನಾಳಗಳಿಗೆ ಒತ್ತಡವಾಗದಂತೆ ರಕ್ತ ಸರಾಗವಾಗಿ ಹರಿಯುವಂತೆ ಮಾಡುತ್ತದೆ. ಈರುಳ್ಳಿ ಸೊಪ್ಪು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಆಸ್ಟಿಯೊಪೊರೋಸಿಸ್‌ನಂತಹ ಮೂಳೆ ರೋಗಗಳ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.


ಈರುಳ್ಳಿ ಸೊಪ್ಪು ಹೃದಯ ಸಂಬಂಧಿ ಕಾಯಿಲೆಗಳನ್ನು ನಿಯಂತ್ರಣದಲ್ಲಿಡುತ್ತದೆ. ಈರುಳ್ಳಿ ಸೊಪ್ಪಿನಲ್ಲಿರುವ ವಿಟಮಿನ್ ಸಿ, ವಿಟಮಿನ್ ಬಿ2 ಮತ್ತು ಥಯಾಮಿನ್ ಸಮೃದ್ಧವಾಗಿದೆ. ಈರುಳ್ಳಿ ಸೊಪ್ಪು ತಾಮ್ರ, ರಂಜಕ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ರೋಮಿಯಂ, ಮ್ಯಾಂಗನೀಸ್ ಮತ್ತು ಫೈಬರ್ ಅನ್ನು ಹೊಂದಿರುತ್ತದೆ.


ಈರುಳ್ಳಿ ಸೊಪ್ಪು ಯಕೃತ್ತಿನಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡಲು ಈರುಳ್ಳಿ ಸಹಾಯ ಮಾಡುತ್ತದೆ. ಕಡಿಮೆ ಕ್ಯಾಲೋರಿ, ಕೊಬ್ಬು ಮತ್ತು ನಾರಿನಂಶ ಹೆಚ್ಚಿರುವ ಈರುಳ್ಳಿ ಸೊಪ್ಪು ನಿಯಮಿತವಾಗಿ ತಿನ್ನುವವರಿಗೆ ಅಧಿಕ ತೂಕ ಸಮಸ್ಯೆ ಕಾಡುವುದಿಲ್ಲ.


ಇದನ್ನೂ ಓದಿ: ರಾತ್ರಿ ನಿದ್ದೆ ಬರುವುದಿಲ್ಲವೇ... ಹೀಗೆ ಮಾಡಿ ಸೊಂಪಾಗಿ ಮಲಗುವಿರಿ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.