Sugarcane Juice : ಬ್ರೆಜಿಲ್ ನಂತರ ಇಡೀ ವಿಶ್ವದಲ್ಲೇ ಅತೀ ಹೆಚ್ಚು ಕಬ್ಬು ಬೆಳೆಯುವ ರಾಷ್ಟ್ರವಾಗಿರುವ ಭಾರತದಲ್ಲಿ, ಕಬ್ಬಿನ ಜ್ಯೂಸ್ ಕುಡಿಯದವರು ಬಹುಶಃ ಯಾರೂ ಇರಲಿಕ್ಕಿಲ್ಲ. ತನ್ನ ರುಚಿಯಿಂದಲೇ ಎಲ್ಲರನ್ನು ಸೆಳೆಯುವ ಈ ಕಬ್ಬಿನ ರಸಕ್ಕೆ ಕ್ಯಾನ್ಸರ್ ನಿಂದ ಹಿಡಿದು, ಮೊಡವೆಯವರೆಗೂ ಹಲವು ಸಮಸ್ಯೆಗಳನ್ನು ನಿವಾರಿಸುವಂತ ಶಕ್ತಿಯಿದೆ. ಕಬ್ಬಿನ ರಸದಿಂದ ಇಂತಹ ಅಗಾಧ ಆರೋಗ್ಯ ಲಾಭಗಳಿವೆ. 


COMMERCIAL BREAK
SCROLL TO CONTINUE READING

ಕಬ್ಬಿನ ರಸದಲ್ಲಿ ಫೈಬರ್ ಮತ್ತು ಪ್ರೋಟೀನ್ ಅಗಾಧ ಪ್ರಮಾಣದಲ್ಲಿದ್ದು, ಸ್ವಲ್ಪ ಪ್ರಮಾಣದ ಕೊಲೆಸ್ಟ್ರಾಲ್ ಇದೆ. ಯಾವುದೇ ಸೇರ್ಪಡೆಗಳಿಲ್ಲದ 240ml ಕಬ್ಬಿನ ರಸದಲ್ಲಿ 250 ಕ್ಯಾಲೋರಿಗಳು ಮತ್ತು 30ಗ್ರಾಂ  ನೈಸರ್ಗಿಕ ಸಕ್ಕರೆ ಇರುತ್ತದೆ. ಇದು ಯಾವುದೇ ಭಯವಿಲ್ಲದೇ ಸೇವಿಸಬಹುದಾದ ಆರೋಗ್ಯಕರ ಮತ್ತು ಅತ್ಯಂತ ಪೌಷ್ಟಿಕ ಪಾನೀಯವಾಗಿದೆ. 


ಕಬ್ಬು ತಕ್ಷಣದ ಶಕ್ತಿಯ ಮೂಲವಾಗಿದೆ. ನೀವು ತುಂಬಾ ಸುಸ್ತಾಗಿದ್ದರೆ, ಒಂದು ಲೋಟ ಕಬ್ಬಿನ ಜ್ಯೂಸ್ ಕುಡಿದರೆ ಸಾಕು, ನಿಮ್ಮ ಶಕ್ತಿ ಪುನಃ ವರ್ಧಿಸುತ್ತದೆ, ಸಾಕಷ್ಟು ಉತ್ಸಾಹ ಬರುತ್ತದೆ. ನಿಮ್ಮ ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲದೇ, ಬಿಸಿಲಿನ ದಿನಗಳಲ್ಲಿ ಆಗಾಗ ಬರುವ ನಿರ್ಜಲೀಕರಣದಿಂದ ನಿಮ್ಮನ್ನು ರಕ್ಷಿಸುತ್ತದೆ. ದೇಹದಿಂದ ಸುಲಭವಾಗಿ ಹೀರಲ್ಪಡುವ ಇದು, ಯಕೃತ್ತಿನ ಕಾರ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.


ಕಬ್ಬಿನ ರಸವು ಪೌಷ್ಟಿಕಾಂಶಗಳನ್ನು ಪಡೆಯಲು ಇರುವ ಅತ್ಯಂತ ಆರೋಗ್ಯಕರ ಮತ್ತು ನೈಸರ್ಗಿಕ ವಿಧಾನವಾಗಿದೆ. ಕಾಮಾಲೆಯಂತಹ ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ಪರಿಹಾರವಾಗಿದ್ದು, ಕಬ್ಬಿನ ರಸವು ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿ ಕಡಿಮೆ ಕೊಲೆಸ್ಟ್ರಾಲ್ ಇದ್ದು, ಹೃದಯದ ಆರೋಗ್ಯಕ್ಕೂ ಒಳ್ಳೆಯದು.


ಕಬ್ಬಿನ ರಸವು ಕ್ಯಾನ್ಸರ್ ವಿರುದ್ಧ ಕಠಿಣ ಹೋರಾಟವನ್ನು ಮಾಡಲು ಸಹಾಯ ಮಾಡುತ್ತದೆ. ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಮ್ಯಾಂಗನೀಸ್ ನ ಸಮೃದ್ಧ ಮೂಲವಾಗಿದೆ. ಇವುಗಳ ಸಹಾಯದಿಂದ, ದೇಹವು ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಬಹುದು. ವ್ಯಕ್ತಿಯು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ ಕಬ್ಬಿನ ರಸ ಅವರಿಗೆ ವರದಾನವಾಗಬಹುದು. ಜೊತೆಗೆ ಇತರರಿಗೆ ಕ್ಯಾನ್ಸರ್ ಕೋಶಗಳು ಬೆಳೆಯದಂತೆ ಈ ರಸ ಕಾಪಾಡುವುದು.


ಇದನ್ನೂ ಓದಿ-Green Tea: ಈ ಜನರು ತಪ್ಪಿಯೂ ಗ್ರೀನ್ ಟೀ ಕುಡಿಯಬಾರದು


ಕಬ್ಬಿನ ಹಾಲಿನಲ್ಲಿ ಕರಗುವ ನಾರಿನಾಂಶ ಅಗಾಧ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಕರುಳಿನ ಒಳಗೆ ಆಹಾರದ ಚಲನೆ ಸುಲಭವಾಗಿಸಲು ಸಹಾಯ ಮಾಡುತ್ತವೆ ಹಾಗೂ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇದರಿಂದ ಅಜೀರ್ಣ, ಮಲಬದ್ಧತೆ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರ ಹಾಗೂ ಹೊಟ್ಟೆಯ ಸೆಳೆತದ ಸಮಸ್ಯೆಗಳು ಎದುರಾಗದೇ ಇರಲು ನೆರವಾಗುತ್ತದೆ. ಕಬ್ಬಿನ ರಸದಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದ್ದು, ಹೊಟ್ಟೆಯ ಪಿಹೆಚ್ ಮಟ್ಟವನ್ನು ಸಮತೋಲನಗೊಳಿಸುತ್ತದೆ.


ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಕಬ್ಬಿನ ರಸವನ್ನು ಸೇವಿಸಬಹುದು, ಏಕೆಂದರೆ ಇದು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಹಲವಾರು ವಿಟಮಿನ್ ಮತ್ತು ಖನಿಜಗಳಿರುವುದರಿಂದ, ಕಬ್ಬಿನ ರಸವು ಹೊಟ್ಟೆಯ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಕಬ್ಬಿನ ರಸ ಮೂತ್ರಪಿಂಡದ ಕಲ್ಲುಗಳು, ಮೂತ್ರನಾಳದ ಸೋಂಕುಗಳು, ಲೈಂಗಿಕವಾಗಿ ಹರಡುವ ರೋಗಗಳು, ಪ್ರೊಸ್ಟಟೈಟಿಸ್ ಸೇರಿದಂತೆ ಇತರ ರೋಗಗಳಿಂದ ಉಂಟಾಗುವ ಸುಡುವ ಸಂವೇದನೆಯನ್ನು ನಿವಾರಿಸುವುದು.


ಕಬ್ಬಿನ ರಸದಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದಂತಹ ಖನಿಜಗಳು ತುಂಬಿವೆ. ತಾಜಾ ಕಬ್ಬನ್ನು ಜಗಿದು, ತಿನ್ನುವುದರಿಂದ ನಿಮ್ಮ ಹಲ್ಲಿನ ದಂತಕವಚ ಮತ್ತು ಹಲ್ಲುಗಳು ಬಲಗೊಳ್ಳುತ್ತವೆ. ಪ್ರಮುಖವಾಗಿ ಕಬ್ಬಿನ ಹಾಲಿನಲ್ಲಿ ಕ್ಯಾಲ್ಸಿಯಂ ಹಾಗೂ ರಂಜಕ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಇವು ಹಲ್ಲುಗಳ ಆರೋಗ್ಯವನ್ನು ವೃದ್ದಿಸುವುದರ ಜೊತೆಗೆ ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಸಾಮಾನ್ಯವಾಗಿ, ಬಾಯಿಯ ದುರ್ವಾಸನೆಯು ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಆದ್ದರಿಂದ ಕಬ್ಬಿನ ರಸದಲ್ಲಿರುವ ಪೋಷಕಾಂಶಗಳು ಕೊರತೆಯನ್ನು ನಿವಾರಿಸಿ, ವಾಸನೆ ತಡೆಯುತ್ತವೆ.
 
ಕಬ್ಬಿನ ರಸವು ಎಲ್ಲಾ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡುವ ಅತ್ಯುತ್ತಮ ಮೂಲವಾಗಿದೆ. ಇದು ಗ್ಲೈಕೋಲಿಕ್, ಆಲ್ಫಾ-ಹೈಡ್ರಾಕ್ಸಿ ನಂತಹ ಆಮ್ಲಗಳಲ್ಲಿ ಅಧಿಕವಾಗಿದ್ದು ಇದು ಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಕಬ್ಬಿನ ರಸ ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಮತ್ತು ಮೊಡವೆಗಳನ್ನು ಉಂಟುಮಾಡುವ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.


ಇನ್ನು ಕಬ್ಬಿನ ಹಾಲಿಗೆ ಎರಡು ಪ್ರಮುಖ ಗುಣಲಕ್ಷಣಗ ಳಿವೆ. ಬೇಸಿಗೆ ಕಾಲದಲ್ಲಿ ಇದನ್ನು ಕುಡಿದರೆ ದೇಹದ ಉಷ್ಣತೆ ತಂಪಾಗುತ್ತದೆ. ಅದೇ ರೀತಿಯಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಈ ಕಬ್ಬಿನ ಹಾಲನ್ನು ಕುಡಿಯುವುದರಿಂದ ದೇಹದ ಉಷ್ಣತೆ ಬಿಸಿಯಾಗುತ್ತದೆ. ಒಟ್ಟಿನಲ್ಲಿ ದೇಹದ ಉಷ್ಣತೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತದೆ. 


ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ಯಕೃತ್ ಅಥವಾ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸದೆ ಇದ್ದರೆ ಜಾಂಡೀಸ್ - ಕಾಮಾಲೆ ರೋ̧ಗ,  ಹೆಪಟೈಟಿಸ್ ಕಾಣಿಸಿಕೊಳ್ಳುವುದು. ಪ್ರಮುಖವಾಗಿ ಕಬ್ಬಿನ ಹಾಲಿನಲ್ಲಿ ಸಿಗುವ ಆರೋಗ್ಯಕಾರಿ ಅಂಶಗಳು ದೇಹದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಿ, ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿರುವ ಲಿವರ್‌ಗೆ ಸಮಸ್ಯೆ ಬರದೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಜೊತೆಗೆ ದೇಹದ ಲಿವರ್ ತನ್ನ ಕಾರ್ಯ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲು ಕೂಡ ನೆರವಿಗೆ ಬರುತ್ತದೆ. ಇಂತಹ ಸಂದರ್ಭಗಳಲ್ಲಿ ವೈದ್ಯರು ನೀಡಿರುವ ಚಿಕಿತ್ಸೆಗಳನ್ನು ಸರಿಯಾಗಿ ಅನುಸರಿಸುವುದರ ಜೊತೆಗೆ ವೈದ್ಯರ ಸಲಹೆಯ ಮೇರೆಗೆ ಕಬ್ಬಿನ ಹಾಲು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಬಹಳ ಒಳ್ಳೆಯದು.


ಇದನ್ನೂ ಓದಿ-ತೂಕ ಇಳಿಸಿಕೊಳ್ಳಬೇಕಾದರೆ ಚೆನ್ನಾಗಿ ನಿದ್ದೆ ಮಾಡಿ ! ಈ ಟಿಪ್ಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ


ಕಬ್ಬಿನ ಹಾಲಿನಲ್ಲಿ ಯಥೇಚ್ಛವಾಗಿ ವಿಟಮಿನ್ ಸಿ ಅಂಶಗಳು ಕಂಡು ಬರುವುದರಿಂದ, ವಾರದಲ್ಲಿ ಎರಡು ಮೂರು ಬಾರಿ  ಈ ಪಾನೀಯವನ್ನು ಸೇವನೆ ಮಾಡುವುದರಿಂದ, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.


ಕಬ್ಬಿನ ಹಾಲಿನಲ್ಲಿ ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ಅಂಶಗಳು ಹಾಗೂ ಯಥೇಚ್ಛವಾಗಿ ನಾರಿನಾಂಶ ಕಂಡು ಬರುವುದರಿಂದ ದೇಹದ ತೂಕವನ್ನು ಇಳಿಸುವವರಿಗೆ ಇದೊಂದು ಒಳ್ಳೆಯ ಪಾನೀಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಮುಖವಾಗಿ ಇದರಲ್ಲಿರುವ ನಾರಿನಾಂಶ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿ, ಪದೇ ಪದೇ ತಿನ್ನುವ ಅಭ್ಯಾಸಕ್ಕೆ ಕಡಿವಾಣ ಹಾಕುತ್ತದೆ. ಇದರಿಂದಾಗಿ ದೇಹದ ತೂಕ ಅತ್ಯುತ್ತಮವಾಗಿ ನಿರ್ವಹಣೆಯಾಗುತ್ತದೆ.


ಕಬ್ಬಿನ ಜ್ಯೂಸ್ ಅಥವಾ ಹಾಲು ಸಿಹಿಯಾಗಿರುವುದರಿಂದ, ಹೆಚ್ಚಿನವರಿಗೆ ಒಂದು ಗೊಂದಲವಿದೆ. ಇಷ್ಟೆಲ್ಲಾ ಆರೋಗ್ಯಕಾರಿ ಪ್ರಯೋಜನಗಳನ್ನು ಒಳಗೊಂಡಿರುವ, ಈ ಕಬ್ಬಿನ ಜ್ಯೂಸ್‌ನ್ನು ಸಕ್ಕರೆ ಕಾಯಿಲೆ ಇರುವ ರೋಗಿಗಳು ಕುಡಿಯಬಹುದಾ ಎಂದು.


ಆದರೆ ನಿಮಗೆ ಗೊತ್ತಿರಲಿ, ತನ್ನಲ್ಲಿ ನೈಸರ್ಗಿಕ ಸಕ್ಕರೆಯಾಂಶ ಹೊಂದಿರುವ ಈ ಕಬ್ಬಿನ ಹಾಲು ಮಧುಮೇಹ ರೋಗಿಗಳು ಕುಡಿಯುವುದರಿಂದ ಯಾವುದೇ ಸಮಸ್ಯೆಗಳು ಇಲ್ಲ. ಆದರೆ ಮಿತವಾಗಿ ಸೇವನೆ ಮಾಡಬೇಕು. ವಾರದಲ್ಲಿ ಒಮ್ಮೆ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಒಳ್ಳೆಯದು. ​ಈ ನಿಟ್ಟಿನಲ್ಲಿ ಕಬ್ಬಿನ ಹಾಲಿನ ನಿಯಮಿತ ಸೇವನೆ ಅಪಾರ ಆರೋಗ್ಯಕರ ಲಾಭ ತಂದುಕೊಡುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾ