ಬೆಂಗಳೂರು: ಎಲ್ಲಾದರೂ ಹೊರಗೆ ಹೋದಾಗ, ದಣಿವಾದಾಗ ಈ ಹಾಲು ಕಣ್ಣಿಗೆ ಬಿತ್ತೆಂದರೆ ಸಾಕು, ಮೊದಲು ಹೋಗಿ ಕುಡಿದು ಬಿಡೋಣ ಅನ್ನಿಸದೇ ಇರದು. ಕಬ್ಬಿನಲ್ಲಿ ಉತ್ತಮ ರೀತಿಯ ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್, ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಕೇವಲ ದಣಿವು ನಿವಾರಣೆಯಾಗುವುದಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನೂ ಸಹ ನಿವಾರಿಸುವ ಗುಣ ಇದರಲ್ಲಿದೆ. 


COMMERCIAL BREAK
SCROLL TO CONTINUE READING

ಕಬ್ಬಿನ ಜ್ಯೂಸ್ ಕುಡಿಯುವುದರ ಪ್ರಯೋಜನಗಳು


  • ನೈಸರ್ಗಿಕ ಸಕ್ಕರೆ ಅಂಶವಿರುವ ಕಬ್ಬಿನ ಜ್ಯೂಸ್ ಕುಡಿಯುವುದರಿಂದ ನಿರ್ಜಲೀಕರಣವನ್ನು ತಡೆಯಬಹುದು. 

  • ಕಬ್ಬಿನಲ್ಲಿ ಆಂಟಿ ಆಕ್ಸಿಡೆಂಟ್ಸ್ ಹೆಚ್ಚಾಗಿರುವುದರಿಂದ ರೋಗನಿರೋಧಕ ಶಕ್ತಿ ಮತ್ತು  ಸೊಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

  • ದೇಹದಲ್ಲಿ ಪ್ರೋಟೀನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ಜ್ವರ, ಇನ್ನಿತರ ಸೋಂಕುಗಳು ಉಂಟಾಗುವುದನ್ನು ತಡೆಯಬಹುದು.

  • ಕಬ್ಬಿನಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಅಂಶ ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಸಹಕಾರಿ.

  • ಕಬ್ಬಿನ ಜ್ಯೂಸ್ ಕುಡಿಯುವುದರಿಂದ ಮೂತ್ರದ ಸೋಂಕು ನಿವಾರಣೆ, ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗೆ ಸಹಾಯ ಮಾಡುತ್ತದೆ. 

  • ಕಬ್ಬಿನ ರಸವು ನಿಮ್ಮ ಯಕೃತ್ತನ್ನು ಬಲಪಡಿಸಿ, ಕಾಮಾಲೆ ಅಥವಾ ಜಾಂಡೀಸ್ ಸಮಸ್ಯೆಯಿಂದ ರಾಮಬಾಣವಾಗಿದೆ.

  • ಇದರಲ್ಲಿ ಕ್ಷಾರೀಯ ಗುಣ ಇರುವುದರಿಂದ ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ. 

  • ಕಬ್ಬಿಣ ಹಾಲಿನಲ್ಲಿ ಆರೋಗ್ಯವರ್ಧಕ ಅಂಶಗಳಿರುವುದರಿಂದ ದೇಶಕ್ಕೆ ಶಕ್ತಿ ತುಂಬುವುದಲ್ಲದೆ, ಮಾನಸಿಕ ಒತ್ತಡವನ್ನೂ ನಿವಾರಿಸುತ್ತದೆ.