ತರಕಾರಿಗಳಲ್ಲೇ ಅತಿ ಹೆಚ್ಚು ಬೇಡಿಕೆ ಇರುವ ತರಕಾರಿ ಎಂದರೆ 'ಕ್ಯಾರೆಟ್'. ಕೆಲವು ಅಡಿಗೆಗೆ ಅದರಲ್ಲೂ ಮಸಾಲೆ ರೊಟ್ಟಿ, ಬಾತ್, ಪಲಾವ್ ಮುಂತಾದ ಅಡಿಗೆಗೆ ಕ್ಯಾರೆಟ್ ಇಲ್ಲದೆ ಮಾಡಿದರೆ ಅಷ್ಟು ರುಚಿಸುವುದಿಲ್ಲ. ನಿಮಗೆ ಗೊತ್ತಾ... ಕ್ಯಾರೆಟ್ ಕೇವಲ ರುಚಿ ನೀಡುವುದು ಮಾತ್ರವಲ್ಲದೆ, ದೇಹಕ್ಕೆ ಹಲವು ರೀತಿಯ ಆರೋಗ್ಯ ಒದಗಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ.


COMMERCIAL BREAK
SCROLL TO CONTINUE READING

ಕ್ಯಾರೆಟ್ ಅನ್ನು ನೀವು ಹಸಿಯಾಗಿಯೂ ಸೇವಿಸಬಹುದು ಅಥವಾ ಬೇಯಿಸಿಯೂ ಸೇವಿಸಬಹುದು.


ಕ್ಯಾರೆಟ್ ನಿಂದ ಏನೆಲ್ಲಾ ಲಾಭ ಇದೆ ಗೊತ್ತೇ! ಇದನ್ನ ತಿಳಿದರೆ ನೀವು ಖಂಡಿತವಾಗಿಯೂ ಕ್ಯಾರೆಟ್ ಸೇವಿಸದೆ ಇರುವುದಿಲ್ಲ...



* ಕ್ಯಾರೆಟ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.



* ಕ್ಯಾರೆಟ್ ಸೇವನೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.



* ಕ್ಯಾರೆಟ್ ಸೇವನೆ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಿಸುತ್ತದೆ. 


* ರಕ್ತ ಶುದ್ಧೀಕರಣ ಮಾಡುತ್ತದೆ.

* ಕ್ಯಾರೆಟ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.



* ಪ್ರತಿದಿನ ರಾತ್ರಿ ಊಟದ ನಂತರ ಕ್ಯಾರೆಟ್ ಜ್ಯೂಸ್ ಸೇವಿಸುವುದರಿಂದ ದೇಹದಲ್ಲಿ ಬೊಜ್ಜು ಶೇಖರಣೆಯಾಗುವುದಿಲ್ಲ.




* ಕ್ಯಾರೆಟ್ ಸೇವನೆಯಿಂದ ತೂಕ ಇಳಿಸಬಹುದು.