Health Tips: ಮೊಸರಿನೊಂದಿಗೆ ಅಪ್ಪಿತಪ್ಪಿಯೂ ಕೂಡ ಇವುಗಳನ್ನು ಸೇವಿಸಬೇಡಿ
Do Not Eat These Things With Curd: ಮೊಸರು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕೆಲ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಅಪ್ಪಿತಪ್ಪಿಯೂ ಕೂಡ ಸೇವಿಸಬಾರದು. ಹಾಗಾದರೆ ಬನ್ನಿ ಯಾವ ಯಾವ ಆಹಾರ ಪದಾರ್ಥಗಳನ್ನು ಮೊಸರಿನ ಜೊತೆಗೆ ಸೇವಿಸಬಾರದು ಎನ್ನಲಾಗಿದೆ ತಿಳಿದುಕೊಳ್ಳೋಣ.
Do Not Eat These Things With Curd: ಮೊಸರನ್ನು ಆರೋಗ್ಯಕ್ಕೆ ಒಂದು ಹಿತಕಾರಿ ಆಹಾರ ಪದಾರ್ಥ ಎಂದು ಹೇಳಲಾಗುತ್ತದೆ. ಇದೇ ವೇಳೆ, ಮೊಸರು ಸೇವನೆಯು ಹೊಟ್ಟೆಯನ್ನು ಆರೋಗ್ಯಕರವಾಗಿಡಲು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಮೊಸರು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೊಸರಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್‌ಗಳು, ಬಿ-12, ಮೆಗ್ನೀಸಿಯಮ್‌ನಂತಹ ಅಗತ್ಯ ಪೋಷಕಾಮ್ಶಗಳಿವೆ. ಪ್ರತಿದಿನ ಮೊಸರು ಸೇವಿಸುವುದರಿಂದ ತೂಕವನ್ನು ನಿಯಂತ್ರಿಸಬಹುದು ಮತ್ತು ನಮ್ಮ ಹೃದಯವನ್ನು ನಾವು ಆರೋಗ್ಯವಾಗಿರಿಸಬಹುದು. ಹೀಗಾಗಿ ಪ್ರತಿದಿನ ಮೊಸರು ಸೇವಿಸುವುದು ಸೂಕ್ತ. ಆದರೆ ಕೆಲವು ಆಹಾರಗಳನ್ನು ಮೊಸರಿನ ಜೊತೆಗೆ ಮರೆತೂ ಕೂಡ ಸೇವಿಸಬಾರದು.ಯಾವ ಪದಾರ್ಥಗಳನ್ನು ಮೊಸರಿನ ಜೊತೆಗೆ ಸೇವಿಸಬಾರದು ನೋಡೋಣ ಬನ್ನಿ,
ಮೊಸರಿನೊಂದಿಗೆ ಈ ವಸ್ತುಗಳನ್ನು ಸೇವಿಸಬೇಡಿ-
ಉದ್ದಿನ ಬೆಳೆ- ಮೊಸರು ಹೊಟ್ಟೆಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ನೀವು ಮೊಸರನ್ನು ಉದ್ದಿನ ಬೇಳೆಯೊಂದಿಗೆ ಸೇವಿಸಿದರೆ ಅದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ವಾಂತಿ-ಭೇದಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ನೀವೂ ಕೂಡ ಈ ರೀತಿಯ ಆಹಾರ ಸಂಯೋಜನೆಯನ್ನು ತಪ್ಪಿಸಬೇಕು.
ಮಾವು- ಬೇಸಿಗೆಯಲ್ಲಿ, ಜನರು ತಂಪಿನ ಅನುಭವ ಪಡೆಯಲು ಸಾಕಷ್ಟು ಜನರು ಶೇಕ್ಸ್ ಮತ್ತು ಸ್ಮೂಥಿಗಳನ್ನು ಸೇವಿಸುತ್ತಾರೆ, ಮೊಸರು ಮತ್ತು ಹಾಲನ್ನು ಹಣ್ಣುಗಳು, ಒಣ ಹಣ್ಣುಗಳು ಮತ್ತು ಬೀಜಗಳೊಂದಿಗೆ ಸ್ಮೂಥಿಗಳಲ್ಲಿ ಬೆರೆಸಲಾಗುತ್ತದೆ. ಆದರೆ ಅನೇಕರು ಮಾವಿನಕಾಯಿಯೊಂದಿಗೆ ಮೊಸರನ್ನು ಬೆರೆಸುತ್ತಾರೆ. ಆದರೆ ನೀವು ಮಾವು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಿದರೆ ಅದು ನಿಮ್ಮ ಹೊಟ್ಟೆಯ ಆರೋಗ್ಯವನ್ನು ಕೆಡಿಸುತ್ತದೆ. ಅಷ್ಟೇ ಅಲ್ಲ, ಇದನ್ನು ಅತಿಯಾಗಿ ಸೇವಿಸುವುದರಿಂದ ತ್ವಚೆಯಲ್ಲಿ ಮೊಡವೆ ಮತ್ತು ಅಲರ್ಜಿ ಸಮಸ್ಯೆ ಉಂಟಾಗುತ್ತದೆ.
ಹಾಲು- ಹಾಲನ್ನು ಮೊಸರಿನೊಂದಿಗೆ ಸೇವಿಸುವ ತಪ್ಪು ಎಂದಿಗೂ ಮಾಡಬೇಡಿ. ಏಕೆಂದರೆ ಇದನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಗ್ಯಾಸ್, ಹೊಟ್ಟೆ ಉಬ್ಬರ, ಮಲಬದ್ಧತೆ ಮತ್ತು ವಾಂತಿ ಭೇದಿಯಂತಹ ಸಮಸ್ಯೆಗಳು ಎದುರಾಗಬಹುದು.
ಇದನ್ನೂ ಓದಿ-Hairfall Reducing Juice: ಕೂದಲುದುರುವಿಕೆ ಮತ್ತು ಮಲಬದ್ಧತೆ ಸಮಸ್ಯೆಗೆ ರಾಮಬಾಣ ಉಪಾಯ ಈ ಜ್ಯೂಸ್
ಈರುಳ್ಳಿ- ಜನರು ರೈತಾ ಅಥವಾ ಕೋಸಂಬರಿಯನ್ನು ತಯಾರಿಸುವಾಗ ಅನೇಕ ರೀತಿಯ ತರಕಾರಿಗಳನ್ನು ಬಳಸುತ್ತಾರೆ, ಅನೇಕ ಜನರು ಈರುಳ್ಳಿಯೊಂದಿಗೆ ಮೊಸರು ತಿನ್ನುತ್ತಾರೆ, ಆದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈರುಳ್ಳಿಯೊಂದಿಗೆ ಮೊಸರು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ, ಅಲರ್ಜಿ ಮತ್ತು ಸೋರಿಯಾಸಿಸ್‌ನಂತಹ ಸಮಸ್ಯೆಗಳು ಉಂಟಾಗಬಹುದು.
ಇದನ್ನೂ ಓದಿ-Body Detox: ಶರೀರವನ್ನು ನಿರ್ವಿಷಗೊಳಿಸುವ ಅವಶ್ಯಕತೆ ಇದೆ ಎನ್ನುತ್ತವೆ ಈ ಸಂಕೇತಗಳು
(ಹಕ್ಕುತ್ಯಾಗ-ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ )
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.