ಬೆಂಗಳೂರು: ನಿಫಾ ವೈರಸ್ ಬೆನ್ನಲ್ಲೇ ಇದೀಗ  ಝೀಕಾ ವೈರಸ್ ಎಲ್ಲೆಡೆ ಆತಂಕ ಸೃಷ್ಟಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಪ್ರಸ್ತುತ ಪ್ರಾಣಿಗಳಲ್ಲಿ ಕಾಣಿಸಿಕೊಂಡಿರುವ  ಝೀಕಾ ವೈರಸ್ ಮಾನವರಲ್ಲಿ ಕಾಣಿಸಿಕೊಳ್ಳುವುದನ್ನು ತಡೆಯುವ ದೃಷ್ಟಿಯಿಂದ ಮಾರ್ಗಸೂಚಿ ರಿಲೀಸ್ ಮಾಡಿರುವ ಆರೋಗ್ಯ ಇಲಾಖೆ,  ಝೀಕಾ ವೈರಸ್ ಲಕ್ಷಣಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದೆ. 


ವಾಸ್ತವವಾಗಿ, ಇತ್ತೀಚೆಗಷ್ಟೇ ಸೊಳ್ಳೆಗಳಲ್ಲಿ  ಝೀಕಾ ವೈರಸ್ ಪತ್ತೆಯಾಗಿರುವ ಹಿನ್ನಲೆಯಲ್ಲಿ ಗುರುವಾರ(ನವೆಂಬರ್ 2, 2023) ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.


ಇದನ್ನೂ ಓದಿ- Dengue ಜ್ವರ ಇದ್ದಾಗ ಈ ತರಕಾರಿಗಳ ಸೇವನೆಯಿಂದ ಶೀಘ್ರದಲ್ಲೇ ಸಿಗುತ್ತೆ ಪರಿಹಾರ


ಝೀಕಾ ವೈರಸ್ ಬಗ್ಗೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಆದರೆ, ಸಾಮಾನ್ಯ ಶೀತ, ಜ್ವರವನ್ನೂ ನಿರ್ಲಕ್ಷಿಸದೆ ತಕ್ಷಣವೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ. ಇದರೊಂದಿಗೆ ಬಿಬಿಎಂಪಿಯಿಂದ ವಾರ್ಡ್ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದ್ದು, ಪೌರ ಕಾರ್ಮಿಕರಿಗೆ ಸ್ವಚ್ಯತೆಗೆ ಆದ್ಯತೆ ಕೊಡುವಂತೆ ಸುತ್ತೋಲೆಯಲ್ಲಿ ಉಲ್ಲೇಖಿಸಿದೆ. 


ಝೀಕಾ ವೈರಸ್ ಲಕ್ಷಣಗಳು: 
* ಕಣ್ಣು ಕೆಂಪಾಗುವಿಕೆ
* ತಲೆ ನೋವು
* ಜ್ವರ
* ಕೀಲುಗಳಲ್ಲಿ ನೋವು
* ಗಂಧೆಗಳು
* ಸ್ನಾಯುಗಳಲ್ಲಿ ನೋವು


ಇದನ್ನೂ ಓದಿ- High Cholesterol: ಕೇವಲ ಒಂದೇ ಒಂದು ವಾರದಲ್ಲಿ ಹೈ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತೆ ಈ 4 ತರಕಾರಿ 


ಝೀಕಾ ವೈರಸ್ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳು: 
>> ನೀರು ಶೇಖರಣಾ ಪರಿಕರಗಳನ್ನು ಸದಾ ಮುಚ್ಚಳದಿಂದ ಮುಚ್ಚಿಡಲು ಮರೆಯಬೇಡಿ. ಇದರೊಂದಿಗೆ ವಾರದಲ್ಲಿ ಒಮ್ಮೆಯಾದರೂ ಅದನ್ನು ಸ್ವಚ್ಛಗೊಳಿಸಿ. 
>> ಸೊಳ್ಳೆಗಳು ಹೆಚ್ಚಾಗಿ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಹಾಗಾಗಿ ಮನೆಯ ಮುಂದೆ, ಅಕ್ಕ-ಪಕ್ಕದಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಿ. 
>> ಘನತ್ಯಾಜ್ಯ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿಮಾಡುವ ಬಗ್ಗೆ ವಿಶೇಷ ಕಾಳಜಿ ವಹಿಸಿ. 
>>  ವಿಶ್ರಾಂತಿ ಪಡೆಯುವಾಗ ತಪ್ಪದೆ ಸೊಳ್ಳೆ ಪರದೆ, ಮಸ್ಕಿಟೊ ಕಾಯಿಲ್ ಅಥವಾ ಲಿಕ್ವಿಡ್ ಅನ್ನು ಬಳಸಿ. 
>> ರೋಗ ಲಕ್ಷಣಗಳು ಸೌಮ್ಯ ಹಾಗೂ ಸಾಧಾರಣ ಸ್ವರೂಪವಾಗಿದ್ದು, 2 ರಿಂದ 7 ದಿನಗಳವರೆಗೆ ಇರುತ್ತದೆ. ಹಾಗಾಗಿ, ಗರ್ಭಿಣಿಯರು ವಿಶೇಷವಾಗಿ ಕಾಳಜಿ ತೆಗೆದುಕೊಳ್ಳಿ. 
>> ಸ್ವಯಂ ಔಷಧಿಗಳ ಬದಲಿಗೆ ವೈದ್ಯರನ್ನು ಸಂಪರ್ಕಿಸಿ ರೋಗ ಲಕ್ಷಣಗಳಿಗಪಡೆಯುವುದನ್ನು ಖಾತರಿ ಪಡಿಸಿಕೊಳ್ಳಿ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.