ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಈ 5 ಹಣ್ಣುಗಳ ಸಿಪ್ಪೆಗಳು ರಾಮಬಾಣ!
Taming Diabetes: ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು, ನಾವು ನಮ್ಮ ಆಹಾರದಲ್ಲಿ ಅನೇಕ ವಿಷಯಗಳನ್ನು ಶಾಮೀಲುಗೊಳಿಸುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಣ್ಣುಗಳ ಸಿಪ್ಪೆಗಳೂ ಕೂಡ ಮಧುಮೇಹವನ್ನು ನಿಯಂತ್ರಿಸಲು ರಾಮಬಾಣ ಉಪಾಯ ಎಂದು ಪರಿಗಣಿಸಲಾಗುತ್ತದೆ (Health News In Kannada).
ಬೆಂಗಳೂರು: ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮಧುಮೇಹ ಕಾಯಿಲೆ ಬರುತ್ತದೆ. ಈ ಕಾಯಿಲೆಗೆ ಇದುವರೆಗೆ ಯಾವುದೇ ಸರಿಯಾದ ಚಿಕಿತ್ಸೆ ಕಂಡುಹಿಡಿಯಲಾಗಿಲ್ಲ. ಆದರೆ ಔಷಧಿಗಳು, ಆಹಾರ ಪದ್ಧತಿ ಬದಲಾವಣೆಯಿಂದ ಅದನ್ನು ನಾವು ನಿಯಂತ್ರಿಸಬಹುದು. ಮಧುಮೇಹದಿಂದಾಗಿ, ವ್ಯಕ್ತಿಯು ಆಯಾಸ, ಮಂದ ದೃಷ್ಟಿ, ತೂಕ ಕಳೆದುಕೊಳ್ಳುವಿಕೆ, ಹಸಿವಿನ ಭಾವನೆ ಮುಂತಾದ ಹಲವು ರೋಗಲಕ್ಷಣಗಳನ್ನು ಅನುಭವಿಸುತ್ತಾನೆ. ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ನಿಮ್ಮ ಆಹಾರದಲ್ಲಿ ನೀವು ಅನೇಕ ವಿಷಯಗಳನ್ನು ಶಾಮೀಲುಗೊಳಿಸಬಹುದು. ಮಧುಮೇಹವನ್ನು ಕಡಿಮೆ ಮಾಡಲು ಅನೇಕ ರೀತಿಯ ಹಣ್ಣುಗಳು ತುಂಬಾ ಪ್ರಯೋಜನಕಾರಿ. ಆದರೆ, ಕೆಲ ಹಣ್ಣುಗಳ ಸಿಪ್ಪೆಗಳೂ ಕೂಡ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಲ್ಲವು. ಹಾಗಾದರೆ ಈ ಹಣ್ಣುಗಳ ಸಿಪ್ಪೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಈ ಐದು ಹಣ್ಣುಗಳ ಸಿಪ್ಪೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತವೆ
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮಾವಿನ ಸಿಪ್ಪೆ
ಮಾವು ಒಂದು ಸಿಹಿ ಹಣ್ಣು, ಇದು ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ, ಆದ್ದರಿಂದ ಇದು ಮಧುಮೇಹ ರೋಗಿಗಳಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಮಾವಿನ ಸಿಪ್ಪೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಅದು ಸಹಾಯ ಮಾಡಬಲ್ಲದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸೇಬು ಸಿಪ್ಪೆ
ಸೇಬು ಸೇವನೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಸೇಬು ಮಾತ್ರವಲ್ಲ, ಸೇಬಿನ ಸಿಪ್ಪೆಯು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಕಿವಿ ಸಿಪ್ಪೆ
ಮಧುಮೇಹ ರೋಗಿಗಳಿಗೆ ಕಿವಿ ಹಣ್ಣು ತುಂಬಾ ಪ್ರಯೋಜನಕಾರಿಯಾಗಿದೆ, ಆದರೆ ಇದೆ ವೇಳೆ ಅದರ ಸಿಪ್ಪೆಗಳು ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಇದರಲ್ಲಿ ವಿಟಮಿನ್ ಇ ಇದೆ.ಸಕ್ಕರೆ ಪ್ರಮಾಣ ಹೆಚ್ಚಾದರೆ ಕಿವಿಯ ಸಿಪ್ಪೆಯನ್ನು ತಿನ್ನಬಹುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯನ್ನು ಸೇವಿಸುವುದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಬಾಳೆಹಣ್ಣಿನ ಸಿಪ್ಪೆಯಲ್ಲಿ ಫೈಬರ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ, ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ-ಹಲವು ಮಾರಣಾಂತಿಕ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಈ ಹಣ್ಣುಗಳ ಎಲೆಗಳು!
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಪೀಚ್ ಸಿಪ್ಪೆ
ಪೀಚ್‌ಗಳು ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿವೆ. ಪೀಚ್ ಸಿಪ್ಪೆಯ ಸೇವನೆಯು ಮಧುಮೇಹ ರೋಗಿಗಳಿಗೂ ಒಳ್ಳೆಯದು. ಇದರ ಸಿಪ್ಪೆಯಲ್ಲಿ ಹಲವು ರೀತಿಯ ಗುಣಗಳಿವೆ, ಇದರಲ್ಲಿ ವಿಟಮಿನ್ ಎ ಕೂಡ ಇದೆ.
ಇದನ್ನೂ ಓದಿ-ದೇಹವನ್ನು ನಿರ್ವಿಷಗೊಳಿಸಿ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತೆ ಈ ನೀರು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.