ಬೆಂಗಳೂರು: ವೈದ್ಯರ ಪ್ರಕಾರ, ಮಹಿಳೆಯರಲ್ಲಿ ಸಾಂದರ್ಭಿಕ ಗುಪ್ತಾಂಗ ರಕ್ತಸ್ರಾವವು ಗಂಭೀರವಾಗಿಲ್ಲ, ಆದರೆ ಇದು ಆಗಾಗ್ಗೆ ಅಥವಾ ದೈಹಿಕ ಸಂಬಂಧದ ಬಳಿಕ ಸಂಭವಿಸಿದರೆ, ಅದು ತುಂಬಾ ಗಂಭೀರವಾಗಿರುತ್ತದೆ. ದೈಹಿಕ ಸಂಬಂಧದ ಬಳಿಕ ಸಂಭವಿಸುವ ರಕ್ತಸ್ರಾವವು ಕ್ಯಾನ್ಸರ್ನ ಸಂಕೇತವಾಗಿದೆ.


COMMERCIAL BREAK
SCROLL TO CONTINUE READING

ಮಹಿಳೆಯರಲ್ಲಿ ಗುಪ್ತಾಂಗದಿಂದ ಉಂಡಾಗುವ  ರಕ್ತಸ್ರಾವವು ಸಾಮಾನ್ಯವಾಗಿ ಮುಟ್ಟಿನ ಸಮಯದಲ್ಲಿ ಅಂದರೆ ಪಿರಿಯಡ್ಸ್ ಸಮಯದಲ್ಲಿ ಸಂಭವಿಸುತ್ತದೆ ಮತ್ತು ಪ್ರತಿಯೊಬ್ಬರ ಋತುಚಕ್ರವು ವಿಭಿನ್ನವಾಗಿರುತ್ತದೆ. ಕೆಲವರಿಗೆ ಈ ಚಕ್ರವು 24 ಮತ್ತು ಕೆಲವರಿಗೆ 30 ದಿನಗಲದ್ದಾಗಿರುತ್ತದೆ, ಆದರೆ ಪಿರಿಯಡ್ಸ್ ಹೊರತುಪಡಿಸಿ, ಖಾಸಗಿ ಅಂಗದಿಂದ ಉಂಟಾಗುವ ರಕ್ತಸ್ರಾವವು ಸಾಮಾನ್ಯವಾಗಿರುವುದಿಲ್ಲ. ಅದರಲ್ಲಿಯೂ ವಿಶೇಷವಾಗಿ ಅವರು ದೈಹಿಕ ಸಂಬಂಧದ ವಿಷಯಕ್ಕೆ ಬಂದಾಗ.


ಸ್ತ್ರೀರೋಗತಜ್ಞ ಡಾ.ಮೀನು ಸಿಂಗ್ ಅವರು ಗುಪ್ತಾಂಗ ರಕ್ತಸ್ರಾವದ ಸಮಸ್ಯೆಯ ಹಿಂದೆ 4 ಕಾರಣಗಳಿರಬಹುದು ಎಂದು ಹೇಳುತ್ತಾರೆ. ವೈದ್ಯರ ಪ್ರಕಾರ, ಕೆಲವೊಮ್ಮೆ ಇಂತಹ ಸಮಸ್ಯೆಗಳಿಗೆ ಭಯಪಡಬೇಕಾಗಿಲ್ಲ. ಆದರೆ ಇದು ನಿಯಮಿತವಾಗಿದ್ದರೆ ಭಯಪಡಲು ಕೆಲವು ಕಾರಣಗಳಿವೆ.


ದೈಹಿಕ ಸಂಬಂಧದ ಬಳಿಕ ಉಂಟಾಗುವ ರಕ್ತಸ್ರಾವಕ್ಕೆ ಈ 4 ಕಾರಣಗಳು
1. ಗುಪ್ತಾಂಗ ಶುಷ್ಕತೆ

ವೈದ್ಯರ ಪ್ರಕಾರ, ದೈಹಿಕ ಸಂಬಂಧದ ನಂತರ ಉಂಟಾಗುವ ರಕ್ತಸ್ರಾವಕ್ಕೆ ಸಾಮಾನ್ಯ ಕಾರಣವೆಂದರೆ ಗುಪ್ತಾಂಗ ಶುಷ್ಕತೆ. ಸಾಕಷ್ಟು ನಯಗೊಳಿಸುವಿಕೆಯ ಕೊರತೆಯಿಂದಾಗಿ, ಅನೇಕ ಮಹಿಳೆಯರು ದೈಹಿಕ ಸಂಬಂಧದ ವೇಳೆ ಘರ್ಷಣೆ ಮತ್ತು ಉರಿತದ ಸಂವೇದನೆಯನ್ನು ಅನುಭವಿಸುತ್ತಾರೆ. ಗುಪ್ತಾಂಗದ ಒಳಪದರವು ಸೂಕ್ಷ್ಮವಾಗುತ್ತದೆ. ಹೀಗಾಗಿ ರಕ್ತಸ್ರಾವ ಉಂಟಾಗುತ್ತದೆ. ಯೋನಿಯಲ್ಲಿ ಶುಷ್ಕತೆ ಹಾರ್ಮೋನ್ ಬದಲಾವಣೆಗಳಿಂದಾಗಿರಬಹುದು. ಕೆಲವೊಮ್ಮೆ ಮಾನಸಿಕ ಒತ್ತಡ ಮತ್ತು ದೈಹಿಕ ಅನಾರೋಗ್ಯದಿಂದಲೂ ಈ ಸಮಸ್ಯೆ ಉದ್ಭವಿಸಬಹುದು.


2. ಲೈಂಗಿಕವಾಗಿ ಹರಡುವ ಸೋಂಕುಗಳು
ಲೈಂಗಿಕವಾಗಿ ಹರಡುವ ಸೋಂಕಿನಿಂದಾಗಿ ಅನೇಕ ಮಹಿಳೆಯರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಾರೆ. ಕ್ಲಮೈಡಿಯ, ಗೊನೊರಿಯಾ, ಟ್ರೈಕೊಮೋನಿಯಾಸಿಸ್, ಹರ್ಪಿಸ್ ದೈಹಿಕ ಸಂಬಂಧದ ನಂತರ ರಕ್ತಸ್ರಾವಕ್ಕೆ ಕಾರಣವಾಗಬಹುದು. ಸುರಕ್ಷಿತ ಲೈಂಗಿಕತೆಗೆ ನಿಯಮಿತ STI ತಪಾಸಣೆ ಅತ್ಯಗತ್ಯ. ಇದು ದೈಹಿಕ ಸಂಬಂಧದ ನಂತರ ರಕ್ತಸ್ರಾವದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.


3. ಬ್ಯಾಕ್ಟೀರಿಯಲ್ ವೆಜಿನೋಸಿಸ್ ಅಥವಾ ಯೀಸ್ಟ್ ಸೋಂಕು
ಬ್ಯಾಕ್ಟೀರಿಯಲ್ ವೆಜಿನೋಸಿಸ್ ಅಥವಾ ಯೀಸ್ಟ್ ಸೋಂಕುಗಳಂತಹ ಗುಪ್ತಾಂಗ ಸೋಂಕುಗಳು ಗುಪ್ತಾಂಗದ ಅಂಗಾಂಶಗಳನ್ನು ಕೆರಳಿಸಬಹುದು. ಇಂತಹ ಸಮಸ್ಯೆಯಿದ್ದರೆ ದೈಹಿಕ ಸಂಬಂಧ ಬೆಳೆಸಿದ ಬಳಿಕ ರಕ್ತಸ್ರಾವವಾಗಬಹುದು. ಗುಪ್ತಾಂಗದಲ್ಲಿ ಬ್ಯಾಕ್ಟೀರಿಯಾದ ಸೋಂಕು ತುಂಬಾ ಕೆಟ್ಟ ಸಂಕೇತವಾಗಿರುತ್ತದೆ ಮತ್ತು ಇದಕ್ಕೆ ಅಗತ್ಯ ಚಿಕಿತ್ಸೆ ಪಡೆದುಕೊಳ್ಳಬೇಕು.


4. ಗರ್ಭಕಂಠದ ಕ್ಯಾನ್ಸರ್
ದೈಹಿಕ ಸಂಬಂಧದ ಬಳಿಕ ಗುಪ್ತಾಂಗದಿಂದ ರಕ್ತಸ್ರಾವವಾಗುವುದು ಗರ್ಭಕಂಠದ ಕ್ಯಾನ್ಸರ್ನ ಸಂಕೇತವಾಗಿದೆ. ಗರ್ಭಕಂಠದ ಕ್ಯಾನ್ಸರ್ ಗರ್ಭಕಂಠದ ಜೀವಕೋಶಗಳ ಅಸಹಜ ಬೆಳವಣಿಗೆಯ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ ಮತ್ತು ದೈಹಿಕ ಸಂಬಂಧದ ಸಮಯದಲ್ಲಿ ಅಥವಾ ನಂತರ ರಕ್ತಸ್ರಾವವಾಗುತ್ತದೆ. ಆದ್ದರಿಂದ, ಒಂದು ವೇಳೆ ಅದು ನಿಯಮಿತವಾಗಿ ರಕ್ತಸ್ರಾವವಾಗಿದ್ದರೆ, ಚಿಕಿತ್ಸೆಯು ತುಂಬಾ ಮುಖ್ಯವಾಗಿದೆ. ಇಂತಹ ಸಮಸ್ಯೆಗಳು 30 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರಲ್ಲಿ ಕಂಡುಬರುತ್ತವೆ.


ಇದನ್ನೂ ಓದಿ-ಪುರುಷರ ವೈವಾಹಿಕ ಜೀವನದ ಸಮಸ್ಯೆಗೆ ಪರಿಹಾರ ಅಡಗಿದೆ ಈ ವಿಶೇಷ ಜೇನಿನಲ್ಲಿ!


ಹೀಗಾಗಿ ಮಹಿಳೆಯರು ಗುಪ್ತಾಂಗದಿಂದ ಯಾವಾಗಲೂ ರಕ್ತಸ್ರಾವವಾಗುತ್ತಿದ್ದರೆ ಅಥವಾ ಹೆಚ್ಚು ಬಿಳಿ ಸ್ರಾವ ಕಂಡುಬಂದರೆ, ಅದನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.


ಇದನ್ನೂ ಓದಿ-ಕೆಟ್ಟ ಕೊಲೆಸ್ಟ್ರಾಲ್ ಮಟ್ಟಕ್ಕೆ ಕಡಿವಾಣ ಹಾಕುತ್ತವೆ ಈ ಗಿಡಮೂಲಿಕೆಗಳು!


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.