Benefits of mint leaves: ಪುದೀನಾ ಹಲವಾರು ಆಹಾರದ ಉಪಯೋಗಗಳು ಮತ್ತು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಸಾಮಾನ್ಯ ಶೀತ, ಕೆಮ್ಮು, ಬಾಯಿ ಮತ್ತು ಗಂಟಲಿನ ಉರಿಯೂತ, ಸೈನಸ್ ಸೋಂಕುಗಳು ಮತ್ತು ಉಸಿರಾಟದ ಸೋಂಕುಗಳಿಗೆ ಉಪಯುಕ್ತವಾಗಿದೆ. ಬಾಯಿ ಅಥವಾ ಗಂಟಲಿನ ಉರಿಯೂತವನ್ನು ಕಡಿಮೆ ಮಾಡುವ ಏಜೆಂಟ್ ಆಗಿ ಪುದೀನನ್ನು ಬಳಸಲಾಗುತ್ತದೆ. ಪುದೀನಾದ ಮತ್ತಷ್ಟು ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

● ನಿಯಮಿತವಾಗಿ ಪುದೀನಾ ರಸ ಅಥವಾ ಪುದೀನಾ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಎದೆಯ ದಟ್ಟಣೆ ಕಡಿಮೆಯಾಗುತ್ತದೆ. ಪುದೀನಾದಲ್ಲಿರುವ ಮೆಂಥಾಲ್ ಡಿಕೊಂಗಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ಶ್ವಾಸಕೋಶದಲ್ಲಿ ಸಂಗ್ರಹಿಸಿದ ಲೋಳೆಯನ್ನು ಸಡಿಲಗೊಳಿಸಲು ಸಹಾಯ ಮಡುತ್ತದೆ. ಮೂಗಿನಲ್ಲಿ ಕಟ್ಟಿಕೊಂಡ ಪೊರೆಗಳನ್ನು ಕುಗ್ಗಿಸಿ ಸುಲಭವಾಗಿ ಉಸಿರಾಡಲು ಸಹಾಯಗುವಂತೆ ಮಾಡುವುದು.


ಇದನ್ನೂ ಓದಿ: ಮೂತ್ರ ವಿಸರ್ಜನೆಯ ನಂತರ ಉರಿಯೂತ ಕಂಡುಬಂದರೆ ಅದು 3 ಗಂಭೀರ ಕಾಯಿಲೆಗಳ ಲಕ್ಷಣ..!


● ಪುದೀನಾದಲ್ಲಿರುವ ಔಷಧೀಯ ಗುಣ ಹಾಗೂ ಅದರ ಪರಿಮಳವು ಅರೋಮಾ ಥೆರಪಿಗಳಿಗೆ ಸಹಾಯ ಮಾಡುವುದು. ಪುದೀನಾ ಉಲ್ಲಾಸಕರವಾದ ವಾಸನೆಯನ್ನು ಒಳಗೊಂಡಿರುವುದರಿಂದ ಅದು ಬಹುಬೇಗ ಶಾಂತ ಹಾಗೂ ಉಲ್ಲಾಸದ ಭಾವನೆಯನ್ನು ನೀಡುತ್ತವೆ. ಪುದೀನಾದ ರಸ ಮತ್ತು ಅದರ ಪರಿಮಳವು ಮಾನಸಿಕ ಒತ್ತಡ ಹಾಗೂ ಖಿನ್ನತೆಯ ಭಾವನೆಯನ್ನು ಬಹುಬೇಗ ನಿವಾರಿಸುವುದು.


● ಪುದೀನಾ ಎಲೆಯನ್ನು ಅಗಿಯುವುದರಿಂದ ಬಾಯಿಯ ನೈರ್ಮಲ್ಯ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸಲು ಸಹಾಯವಾಗುವುದು. ಪುದೀನಾದಲ್ಲಿನ ಸಾರಭೂತ ತೈಲಗಳು ತಾಜಾತನದ ಉಸಿರಾಟವನ್ನು ಪಡೆಯಲು ಸಹಾಯವಾಗುತ್ತದೆ. 


● ಪುದೀನಾ ರಸಕ್ಕೆ ಅರಿಶಿಣವನ್ನು ಕಲಸಿ ಮೈಗೆ ಲೇಪನ ಮಾಡಿಕೊಂಡು ಅರ್ಧಗಂಟೆಯ ನಂತರ ಸ್ನಾನ ಮಾಡುವುದರಿಂದ ತುರಿಕೆ, ಉರಿ ಮುಂತಾದ ಚರ್ಮ ವ್ಯಾಧಿಗಳು ನಿವಾರಣೆಯಾಗುತ್ತವೆ. ದೇಹದಲ್ಲಿನ ಉಷ್ಣ ಕಡಿಮೆಯಾಗುತ್ತದೆ.


● ಪುದೀನಾ ಎಲೆಗಳ ರಸಕ್ಕೆ ಜೇನುತುಪ್ಪ ಅಥವಾ ಕೆಂಪು ಕಲ್ಲು ಸಕ್ಕರೆ, ನಿಂಬೆಹಣ್ಣಿನ ರಸ ಕಲಸಿ ಸೇವಿಸಿದರೆ ಆಯಾಸ, ನಿಶ್ಯಕ್ತಿ ಮತ್ತು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗಿ ಮನಸ್ಸಿಗೆ ಉಲ್ಲಾಸ ಉಂಟುಮಾಡುತ್ತೆ.


● ಪ್ರತಿದಿನವೂ ನಾಲ್ಕೈದು ಪುದೀನಾ ಎಲೆಗಳನ್ನು ಜಗಿದು ತಿನ್ನುವುದರಿಂದ ಹಲ್ಲುಗಳ ನೋವು, ದವಡೆಯಲ್ಲಿ ರಕ್ತಸ್ರಾವ ನಿವಾರಣೆಯಾಗಿ ವಸಡುಗಳು ದೃಢವಾಗಿ, ಬಾಯಿಯ ದುರ್ವಾಸನೆ ನಿವಾರಣೆಯಾಗುತ್ತೆ.


ಇದನ್ನೂ ಓದಿ: ಈ 4 ಆಹಾರಗಳನ್ನು ಸೇವಿಸಿದರೆ ಔಷಧಿ ಇಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಬಹುದು..!


ಪುದೀನಾ ಎಲೆಗಳನ್ನು ಜಜ್ಜಿ ಮೂಸುತ್ತಿದ್ದರೆ, ತಲೆನೋವು, ತಲೆ ಸುತ್ತುವಿಕೆ ಶಮನವಾಗುತ್ತದೆ. ಪುದೀನಾ ಕಷಾಯಕ್ಕೆ ಜೇನುತುಪ್ಪ ಕಲಸಿ ಸೇವಿಸುತ್ತಿದ್ದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.