Best Home remedies: ಮಳೆಗಾಲ ಹಾಗೂ ಚಳಿಗಾಲದಲ್ಲಿ ಅನೇಕರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಾರೆ. ಅನೇಕ ಕಾಯಿಲೆಗಳಿಗೆ ಮಾತ್ರೆ ಸೇರಿದಂತೆ ಇನ್ನಿತರ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಮನೆಯಲ್ಲಿಯೇ ಇರುವ ಮನೆಮದ್ದುಗಳನ್ನು ಮರೆತುಬಿಡುತ್ತಾರೆ. ಹಲವಾರು ಕಾಯಿಲೆಗಳಿಗೆ ಮುಕ್ತಿ ನೀಡುವ ಪವರ್‌ಫುಲ್‌ ಮನೆಮದ್ದುಗಳ ಮಾಹಿತಿ ಇಲ್ಲಿದೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನೂ ಓದಿCurd: ಮೊಸರು ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗುತ್ತಾ..?


  • ಕಡಲೇಬೇಳೆಯನ್ನು ಚೆನ್ನಾಗಿ ಬೇಯಿಸಿ ಬೆಲ್ಲದೊಡನೆ ರುಬ್ಬಿ ತಯಾರಿಸಿದ ಹೂರಣವನ್ನು ಮಿತ ಪ್ರಮಾಣದಲ್ಲಿ ಹಲವು ದಿನಗಳ ಕಾಲ ಸೇವಿಸಿದರೆ ಶರೀರದ ತೂಕವು ಹೆಚ್ಚಾಗುವುದು. 

  • ಹುರಿದ ಕಡಲೆಯ ಹಿಟ್ಟನ್ನು ಕೆಂಡದ ಮೇಲೆ ಹಾಕಿ ಬಂದ ಹೊಗೆಯನ್ನು ಕುಡಿಯುವುದರಿಂದ ಬಿಕ್ಕಳಿಕೆ ತಕ್ಷಣವೇ ನಿಲ್ಲುತ್ತದೆ.

  • ಶೀತ ಅಥವಾ ಇನ್ನಾವುದೇ ತೊಂದರೆಗಳಿಂದ ಗಂಟಲು ಕಟ್ಟಿ ಸರಿಯಾಗಿ ಮಾತನಾಡಲು ತೊಂದರೆಯಾದರೆ ಹಸಿಶುಂಠಿ, ಲವಂಗ ಮತ್ತು ಸ್ವಲ್ಪ ಅಡುಗೆ ಉಪ್ಪು ಸೇರಿಸಿ ಬಾಯಿಗೆ ಹಾಕಿಕೊಂಡು ಚಪ್ಪರಿಸಿದರೆ ಗಂಟಲು ಕಟ್ಟುವುದು ನಿವಾರಣೆಯಾಗುತ್ತದೆ. 

  • ಶುಂಠಿಯನ್ನು ಸುಟ್ಟು ಬೂದಿ ಮಾಡಿಟ್ಟುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

  • ಸುಮಾರು 2 ಚಮಚ ಶುಂಠಿ ರಸವನ್ನು ತೆಗೆದುಕೊಂಡು ಸುಮಾರು 2 ಮತ್ತು 1/2 ಚಮಚ ಜೇನುತುಪ್ಪವನ್ನು ಸೇರಿಸಬೇಕು. ಇದನ್ನು ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಈ ಮಿಶ್ರಣವನ್ನು ಸ್ವಲ್ಪ ಬೆಚ್ಚಗಾಗಿಸಬೇಕು. ತದನಂತರ ನಿಮ್ಮ ಆರ್ದ್ರ ಕೆಮ್ಮುಗಾಗಿ ನೀವು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸಬಹುದು.

  • ಶುಂಠಿಯಲ್ಲಿ ಉರಿಯೂತ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿಫಂಗಲ್, ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿವೆ. ಕೆಮ್ಮು ಮತ್ತು ಶೀತದಿಂದ ಮುಕ್ತಿ ಹೊಂದಲು ನೀವು ಶುಂಠಿ ಚಹಾ ಮತ್ತು ಅದರ ಕಷಾಯ ತೆಗೆದುಕೊಳ್ಳಬೇಕು.


ಇದನ್ನೂ ಓದಿ: ಮಲಗುವ ಮುನ್ನ ಈ 5 ಪದಾರ್ಥಗಳನ್ನು ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.