Diabetes Diet : ಮಧುಮೇಹವು ಪ್ರಸ್ತುತ ದಿನಗಳಲ್ಲಿ ಗಂಭೀರ ಕಾಯಿಲೆಯಾಗಿದೆ. ಈ ರೋಗವು ಬಹಳ ವೇಗವಾಗಿ ಹರಡುತ್ತಿದೆ. ಹಾಗೆ, ಈ ಕಾಯಿಲೆಗೆ ಯಾವುದೇ ಚಿಕಿತ್ಸೆ ಕೂಡ ಇಲ್ಲ. ಅದಕ್ಕೆ, ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಎಂಬ ಪ್ರಶ್ನೆಯು ಈ ರೋಗಿಗಳಲ್ಲಿದೆ. ನಿಮಗೂ ಮಧುಮೇಹ ಸಮಸ್ಯೆ ಇದ್ದರೆ ನಿಮ್ಮ ಜೀವನಶೈಲಿಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. 


COMMERCIAL BREAK
SCROLL TO CONTINUE READING

ಹೌದು, ಈ ಸಮಯದಲ್ಲಿ ನೀವು ನಿಮ್ಮ ಆಹಾರವನ್ನು ಬದಲಾಯಿಸಬೇಕು. ಏಕೆಂದರೆ ಮಧುಮೇಹವು ಒಂದು ಕಾಯಿಲೆಯಾಗಿದ್ದು ಅದನ್ನು ಗುಣಪಡಿಸಲು ಸಾಧ್ಯವಿಲ್ಲ ಆದರೆ ಅದನ್ನು ನಿಯಂತ್ರಿಸಬಹುದು. ಮಧುಮೇಹ ರೋಗನಿರ್ಣಯದ ನಂತರ ನೀವು ಯಾವ ವಿಷಯಗಳನ್ನು ಕಾಳಜಿ ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..


ಇದನ್ನೂ ಓದಿ : Weight Loss Tips : ದೇಹ ತೂಕ ಕಡಿಮೆಯಾಗುತ್ತಿಲ್ಲವೇ? ಹಾಗಿದ್ರೆ, ಪ್ರತಿದಿನ ಈ ಜ್ಯೂಸ್ ಕುಡಿಯಿರಿ!


 ಈ ರೀತಿ ಮಧುಮೇಹವನ್ನು ನಿಯಂತ್ರಿಸಿ


1. ಆರೋಗ್ಯಕರ ಕಾರ್ಬೋಹೈಡ್ರೇಟ್ ಆಯ್ಕೆಗಳನ್ನು ಆರಿಸಿ. ಹುರಿದ ಪದಾರ್ಥಗಳ ಬದಲಿಗೆ, ನೀವು ಧಾನ್ಯಗಳನ್ನು ತಿನ್ನಬೇಕು.
2. ತತಪ್ಪಿಯೂ ಸಹ ಚಹಾ ಅಥವಾ ಕಾಫಿಯೊಂದಿಗೆ ಬೆಳಿಗ್ಗೆ ಕುಡಿಯಬೇಡಿ. ಬದಲಾಗಿ, ನೀವು ದಾಲ್ಚಿನ್ನಿ ಚಹಾವನ್ನು ಕುಡಿಯಬಹುದು.
3. ಅನಾರೋಗ್ಯಕರ ಕೊಬ್ಬಿನ ಸೇವನೆಯನ್ನು ತಪ್ಪಿಸಿ ಮತ್ತು ಉಪ್ಪು ಆಹಾರವನ್ನು ಸೇವಿಸಬೇಡಿ. ಏಕೆಂದರೆ ಅವು ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತವೆ.
4. ಊಟದ ಮೊದಲು ಹಣ್ಣುಗಳ ವಿನೆಗರ್ ಅನ್ನು ಸೇವಿಸಿ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
5-ದಿನದ ಎರಡು ಊಟದ ನಡುವೆ ಮಜ್ಜಿಗೆಯನ್ನು ಸೇವಿಸಿ. ಹೀಗೆ ಮಾಡುವುದರಿಂದ ನಿಮಗೆ ಮತ್ತೆ ಮತ್ತೆ ಹಸಿವಾಗುವುದಿಲ್ಲ.
6. ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ, 15 ನಿಮಿಷಗಳ ಕಾಲ ನಡೆಯಿರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
7. ದೈನಂದಿನ ವ್ಯಾಯಾಮ ಅಥವಾ ಯೋಗವನ್ನು ಜೀವನದ ಭಾಗವಾಗಿ ಮಾಡಿಕೊಳ್ಳಿ, ಇದನ್ನು ಮಾಡುವುದರಿಂದ ನೀವು ಫಿಟ್ ಆಗಿರಬಹುದು. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯು ಸಹ ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ : Hair Care Tips: ಬೋಳು ತಲೆ ಸಮಸ್ಯೆಗೆ ಕರಿಮೆಣಸಿನಲ್ಲಿದೆ ಪರಿಹಾರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.