Health Tips: ತೂಕ ಇಳಿಸುವಾಗ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ..!
Weight Loss Tips: ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ತೂಕ ಇಳಿಸಿಕೊಳ್ಳಲು ದಿನವಿಡೀ ಪ್ರಯತ್ನಿಸುವ ಅನೇಕ ಜನರಿದ್ದಾರೆ. ಆದರೆ ಕೆಲವು ತಪ್ಪುಗಳಿಂದ ಅವರು ಯಾವುದೇ ರೀತಿಯ ಬದಲಾವಣೆಯನ್ನು ಕಾಣುವುದಿಲ್ಲ. ತೂಕ ನಷ್ಟ ಮಾಡಿಕೊಳ್ಳುವಾಗ ಜನರು ಯಾವ ತಪ್ಪುಗಳನ್ನು ಮಾಡುತ್ತಾರೆ ಅನ್ನೋದರ ಬಗ್ಗೆ ತಿಳಿದುಕೊಳ್ಳಿರಿ.
Weight Loss Tips: ತೂಕವನ್ನು ಕಳೆದುಕೊಳ್ಳುವುದು ತುಂಬಾ ಕಷ್ಟದ ಕೆಲಸ. ತೂಕ ಇಳಿಸಿಕೊಳ್ಳಲು ದಿನವಿಡಿ ಪ್ರಯತ್ನಿಸುವ ಅನೇಕ ಜನರಿದ್ದಾರೆ. ಆದರೆ ಕೆಲವು ತಪ್ಪುಗಳಿಂದ ಅವರು ಯಾವುದೇ ರೀತಿಯ ತೂಕ ಕಳೆದುಕೊಳ್ಳುವುದಿಲ್ಲ. ಜನರು ತೂಕ ಇಳಿಸಿಕೊಳ್ಳುವ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ತೂಕ ಇಳಿಸುವ ಪಯಣದಲ್ಲಿದ್ದಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಶಿಸ್ತುಬದ್ಧವಾಗಿ ದಿನಚರಿ ಪಾಲಿಸಿದರೆ ಸುಲಭವಾಗಿ ತೂಕ ನಷ್ಟ ಮಾಡಿಕೊಳ್ಳಬಹುದು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜನರು ಸಾಮಾನ್ಯವಾಗಿ ಮಾಡುವ ತಪ್ಪುಗಳನ್ನು ತಪ್ಪಿಸಬೇಕು. ಇದು ನಿಮ್ಮ ತೂಕ ನಷ್ಟ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ ಅಥವಾ ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ತೂಕ ಇಳಿಸಿಕೊಳ್ಳುವಾಗ ಯಾವ ತಪ್ಪುಗಳನ್ನು ಮಾಡಬಾರದು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
1. ಸಾಕಷ್ಟು ನಿದ್ದೆ ಮಾಡದಿರುವುದು: ನೀವು ಸಾಕಷ್ಟು ನಿದ್ರೆ ಪಡೆಯದಿದ್ದಾಗ, ನಿಮ್ಮ ದೇಹವು ಗ್ರೆಲಿನ್ ಎಂಬ ಹಾರ್ಮೋನ್ ಅನ್ನು ಹೆಚ್ಚು ಉತ್ಪಾದಿಸುತ್ತದೆ. ಇದು ನಿಮಗೆ ಹಸಿವನ್ನುಂಟು ಮಾಡುತ್ತದೆ. ನಿದ್ರೆಯ ಕೊರತೆಯು ನಿಮ್ಮ ದೇಹವು ಲೆಪ್ಟಿನ್ ಎಂಬ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು.
ಇದನ್ನೂ ಓದಿ: ಈ ಸಮಸ್ಯೆ ಇದ್ದವರು ತಪ್ಪಿಯೂ ತಿನ್ನಬಾರದು ಕಲ್ಲಂಗಡಿ ಹಣ್ಣು
2. ಸರಿಯಾಗಿ ಆಹಾರ ಸೇವಿಸದಿರುವುದು: ಕಡಿಮೆ ತಿನ್ನುವುದು ತೂಕ ನಷ್ಟಕ್ಕೆ ಕಾರಣವಾಗುತ್ತದೆ ಎಂದು ಹಲವರು ಭಾವಿಸುತ್ತಾರೆ, ಆದರೆ ಇದು ನಿಜವಲ್ಲ. ಕಡಿಮೆ ಕ್ಯಾಲೋರಿ ಆಹಾರವನ್ನು ಸೇವಿಸುವುದರಿಂದ ನಿಮ್ಮ ತೂಕವನ್ನು ಆರಂಭದಲ್ಲಿ ಕಡಿಮೆ ಮಾಡಬಹುದು, ಆದರೆ ನಿಮ್ಮ ಆಹಾರದಲ್ಲಿ ಸಾಮಾನ್ಯ ಆಹಾರ ತೆಗೆದುಕೊಳ್ಳಲು ಪ್ರಾರಂಭಿಸಿದ ತಕ್ಷಣ, ನಿಮ್ಮ ತೂಕದಲ್ಲಿ ಏರಿಳಿತ ಕಾಣುತ್ತದೆ. ಆದ್ದರಿಂದ ತೂಕವನ್ನು ಕಳೆದುಕೊಳ್ಳುವಾಗ ಸಮತೋಲಿತ ಆಹಾರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು.
3. ಒಂದೇ ರೀತಿಯ ಆಹಾರ ಸೇವನೆ: ತೂಕ ಇಳಿಸಿಕೊಳ್ಳಲು ಮತ್ತೆ ಮತ್ತೆ ಅದೇ ಆಹಾರ ಸೇವಿಸಿದರೆ ಬೇಜಾರಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ನೀವು ಮತ್ತೆ ಸಾಮಾನ್ಯ ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ನಿಮ್ಮ ತೂಕವನ್ನು ಹೆಚ್ಚಿಸುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಹೀಗಾಗಿ ನಿಮ್ಮ ಆಹಾರದಲ್ಲಿ ಅನೇಕ ರೀತಿಯ ಆಹಾರ ಉತ್ಪನ್ನಗಳನ್ನು ಸೇರಿಸಬೇಕು. ಇದು ನಿಮ್ಮ ಬೇಸರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಸಮತೋಲನವು ಆಹಾರವನ್ನು ಚೆನ್ನಾಗಿ ಜೀರ್ಣಿಸಿಕೊಳ್ಳಲು ಸಹಕಾರಿಯಾಗುತ್ತದೆ.
4. ಎಲ್ಲ ರೀತಿಯ ಆಹಾರ ಸೇವಿಸಿರಿ: ಆರೋಗ್ಯಕರ ದೇಹಕ್ಕೆ ಎಲ್ಲಾ ಆಹಾರ ಗುಂಪುಗಳು ಅವಶ್ಯಕ. ನೀವು ಯಾವುದೇ ಒಂದು ರೀತಿಯ ಆಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಟ್ಟರೆ, ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶ ಸಿಗುವುದಿಲ್ಲ. ಹೀಗಾಗಿ ಆಹಾರ ತಜ್ಞರ ಸಲಹೆಯ ಪ್ರಕಾರ, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಕೊಬ್ಬಿನ ಸಮತೋಲಿತ ಆಹಾರವನ್ನು ಸೇವಿಸಬೇಕು.
5. ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ: ಒಂದೇ ಸ್ಥಳದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ತೂಕ ಹೆಚ್ಚಾಗಬಹುದು. ನಿತ್ಯ ವ್ಯಾಯಾಮದ ಜೊತೆಗೆ ತೂಕ ಇಳಿಸುವ ಪಯಣದಲ್ಲಿ ಯಾವಾಗ ದೇಹ ಅದೇ ಭಂಗಿಯಲ್ಲಿದೆ ಎಂದು ಅನಿಸುತ್ತದೆಯೋ ಆಗ ಎದ್ದು ಸ್ವಲ್ಪ ಹೊತ್ತು ನಡೆಯಬೇಕು. ಈ ಕಾರಣದಿಂದ ದೇಹದ ರಕ್ತ ಪರಿಚಲನೆಯು ಸಮನಾಗಿ ಉಳಿಯುತ್ತದೆ, ಇದು ನಿಮ್ಮನ್ನು ಶಕ್ತಿಯುತವಾಗಿರಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಬೆಳ್ಳುಳ್ಳಿ ತಿನ್ನಿ!! ಜೀರ್ಣಕ್ರಿಯೆ, ಕೊಲೆಸ್ಟ್ರಾಲ್, ಅಸ್ತಮಾ... ಹೀಗೆ ಹಲವು ಸಮಸ್ಯೆಗಳಿಗೆ ಒಂದೇ ಪರಿಹಾರ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.