Health Tips: ಥೈರಾಯ್ಡ್ ಸಮಸ್ಯೆಗೆ ಯಾವ ಆಹಾರ ಸೇವಿಸಬೇಕು ಗೊತ್ತಾ..?
Hypothyroidism Diet: ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ.
Thyroid Disease Foods: ಇಂದು ಥೈರಾಯ್ಡ್ ಸಮಸ್ಯೆ ಸಾಮಾನ್ಯವಾಗಿದ್ದು, ಹೆಚ್ಚಾಗಿ ಮಹಿಳೆಯರಲ್ಲೇ ಈ ಸಮಸ್ಯೆ ಕಂಡುಬರುತ್ತದೆ. ಥೈರಾಯ್ಡ್ ಸಮಸ್ಯೆಯಿದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾರೆ. ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಈ ಸಮಸ್ಯೆಗೆ ಮುಖ್ಯ ಕಾರಣ. ಮಾನಸಿಕ ಒತ್ತಡ, ವ್ಯಾಯಾಮ ಅಥವಾ ದೈಹಿಕ ಚಟುವಟಿಕೆ ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತ ದೇಹದ ಬೆಳವಣಿಗೆ & ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದಿರುವುದು ಸಹ ಥೈರಾಯ್ಡ್ ಸಮಸ್ಯೆಗೆ ಕಾರಣ.
ಥೈರಾಯ್ಡ್ ನಮ್ಮ ಕತ್ತಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಒಂದು ಗ್ರಂಥಿ. ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪಾದಿಸುವುದೇ ಈ ಗ್ರಂಥಿಯ ಮುಖ್ಯ ಕಾರ್ಯ. ಮೂಲತಃ ಥೈರಾಕ್ಸಿನ್ ಅಯೋಡಿನ್‌ನಿಂದ ಕೂಡಿದ ಅಮೈನೋ ಆಮ್ಲ. ಇದು ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷಣದ ಪ್ರಮಾಣವನ್ನು ನಿಯಂತ್ರಿಸುತ್ತದೆ.
ಇದನ್ನೂ ಓದಿ: ಊಟಕ್ಕೂ ಮುನ್ನ ʼಈʼ ಹಣ್ಣು ತಿಂದ್ರೆ ಕ್ಷಣಾರ್ಧದಲ್ಲಿ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್..! ಮತ್ತೆಂದೂ ಹೆಚ್ಚಾಗಲ್ಲ!!
ಥೈರಾಯ್ಡ್ ಸಮಸ್ಯೆಯಿದ್ದರೆ ಪದೇ ಪದೇ ಆಯಾಸವಾಗುವುದು, ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಸಮಸ್ಯೆ, ಕೂದಲು ಉದುರುವುದು, ಆಗಾಗ ನಡುಕ ಉಂಟಾಗುವುದು, ಜಾಸ್ತಿ ಬೆವರುವಿಕೆ, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣ ಸಣ್ಣ ವಿಷಯಕ್ಕೂ ಕೋಪ ಬರುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಥೈರಾಯ್ಡ್ ಸಮಸ್ಯೆಗೆ ಆಹಾರಗಳು
● ದೇಹಕ್ಕೆ ಪ್ರೋಟಿನ್ ಅಂಶವನ್ನು ಅಗತ್ಯ ಪ್ರಮಾಣದಲ್ಲಿ ಲೀನ್ ಮೀಟ್ ಮತ್ತು ಮೊಟ್ಟೆಗಳು ಒದಗಿಸುತ್ತವೆ. ಇವುಗಳಲ್ಲಿ ಝಿಂಕ್ ಅಂಶ, ವಿಟಮಿನ್ ʼCʼ ಅಂಶ ಮತ್ತು ವಿಟಮಿನ್ ʼEʼ ಅಂಶ ಹೆಚ್ಚಾಗಿ ಲಭ್ಯವಿದೆ.
ಈ ಕಾರಣದಿಂದ ಹೈಪೋಥೈರಾಯ್ಡಿಸಂ ಸಮಸ್ಯೆ ನಿಮ್ಮಿಂದ ದೂರವಾಗುತ್ತದೆ. ಆದರೆ ಮಾಂಸಾಹಾರ ಮತ್ತು ಮೊಟ್ಟೆಗಳ ಸೇವನೆಯಲ್ಲಿ ಮಿತಿಯನ್ನು ಕಾಯ್ದುಕೊಳ್ಳಬೇಕು.
● ಹಣ್ಣು ಮತ್ತು ತರಕಾರಿಗಳನ್ನು ನೀವು ಪ್ರತಿದಿನವೂ ಸೇವನೆ ಮಾಡಬೇಕು. ಬದನೆಕಾಯಿ, ಹೂಕೋಸು ಮತ್ತು ಕುಂಬಳಕಾಯಿ ಆಹಾರ ಪದ್ಧತಿಯಲ್ಲಿ ಸೇರಿರಬೇಕು. ಬಣ್ಣ ಬಣ್ಣದ ಹಣ್ಣು - ತರಕಾರಿಗಳನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹೆಚ್ಚು ಲಾಭವಿದೆ.
● ಹೈಪೋಥೈರಾಯ್ಡಿಸಂ ಸಮಸ್ಯೆ ಹೊಂದಿರುವವರು ಸೋಯಾ ಆಹಾರ ಪದಾರ್ಥಗಳಾದ ಟೋಫು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ಬಿಡಬೇಕು.
● ಅತಿ ಹೆಚ್ಚಾದ ನಾರಿನಂಶ ಹೊಂದಿರುವ ಆಹಾರಗಳು ಥೈರಾಯ್ಡ್ ಹಾರ್ಮೋನ್ ಅನ್ನು ನಿಯಂತ್ರಣ ಮಾಡುತ್ತವೆ.
● ದೇಹದಲ್ಲಿ ಕ್ಯಾಲ್ಸಿಯಂ ಅಂಶದ ಪ್ರಮಾಣವನ್ನು ಮಧ್ಯಪಾನ ಕಡಿಮೆ ಮಾಡಿ ಥೈರಾಯಿಡ್ ಹಾರ್ಮೋನುಗಳ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗುತ್ತದೆ. ಹೀಗಾಗಿ ದೇಹದ ಒಳ್ಳೆಯ ಆರೋಗ್ಯಕ್ಕೆ ಮದ್ಯಪಾನ ಒಳ್ಳೆಯದಲ್ಲ.
● ಎಲೆಕೋಸು, ಹೂಕೋಸು ಮತ್ತು ಬ್ರೊಕೊಲಿಯಂತಹ ಕ್ರೂಸಿಫೆರಸ್ ತರಕಾರಿಗಳು ಅಧಿಕ ಫೈಬರ್ ಮತ್ತು ಪೌಷ್ಟಿಕಾಂಶಯುಕ್ತವಾಗಿರುತ್ತವೆ. ಆದರೆ ಐಯೋಡಿನ್ ಕೊರತೆ ಇದ್ದಲ್ಲಿ, ಆ ತರಕಾರಿಗಳಿಂದ ಥೈರಾಯ್ಡ್ ಹಾರ್ಮೋನಿನ ಉತ್ಪಾದನೆಗೆ ಅಡ್ಡಿಯಾಗಬಹುದು. ಆದರಿಂದ ಅವುಗಳನ್ನು ಮಿತವಾಗಿ ಸೇವಿಸುವುದು ಉತ್ತಮ
● ಕೊಬ್ಬುಗಳು, ಥೈರಾಯ್ಡ್ ಹಾರ್ಮೋನ್ ಬದಲಿ ಔಷಧಿಗಳನ್ನು ಹೀರಿಕೊಳ್ಳುವ ದೇಹದ ಸಾಮರ್ಥ್ಯಕ್ಕೆ ಅಡ್ಡಿಪಡಿಸುತ್ತವೆ. ಇದಲ್ಲದೆ ಹಾರ್ಮೋನುಗಳನ್ನು ಉತ್ಪಾದಿಸುವ ಥೈರಾಯ್ಡ್ ಸಾಮರ್ಥ್ಯಕ್ಕೆ ಕೊಬ್ಬಿನಿಂದ ಅಡ್ಡಿಯಾಗಬಹುದು. ಬೆಣ್ಣೆ, ಮಾಂಸ ಮತ್ತು ಎಲ್ಲಾ ರೀತಿಯ ಕರಿದ ಆಹಾರಗಳ ಸೇವನೆ ಕಡಿಮೆ ಮಾಡಬೇಕು.
ಇದನ್ನೂ ಓದಿ: ಪ್ರತಿದಿನ ಏಲಕ್ಕಿ ಹಾಲು ಕುಡಿಯುವುದರಿಂದ ದೇಹಕ್ಕೆ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗ್ತುತ್ತೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.