ಬೆಂಗಳೂರು: ಧಾವಂತದ ಬದುಕಿನಲ್ಲಿ ಜನರ ಆಹಾರ ಮತ್ತು ಲೈಫ್ ಸ್ಟೈಲ್ ನಲ್ಲಿ ಸಾಕಷ್ಟು ಬದಲಾವಣೆ ಬಂದಿದೆ. ಸಮಯದ ಅಭಾವದ ಕಾರಣ ಬಹುತೇಕ ಜನರು ಆರೋಗ್ಯಕ್ಕೆ ಹಾನಿಕಾರಕವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಮತ್ತು ಅದು ಅವರ ಆರೋಗ್ಯಕ್ಕೆ ಹಾನಿಯನ್ನೂ ಕೂಡ ತಲುಪಿಸುತ್ತಿದೆ. ಇದರಿಂದ ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ (Fatty Liver Disease) ಕೂಡ ಶಾಮೀಲಾಗಿದೆ. ಹೀಗಿರುವಾಗ ಫ್ಯಾಟಿ ಲೀವರ್ ಸಮಸ್ಯೆ ಇರುವ ಜನರು ಯಾವ ರೀತಿ ತಮ್ಮ ಕಾಳಜಿಯನ್ನು ವಹಿಸಬೇಕು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. (Health News In Kannada)

COMMERCIAL BREAK
SCROLL TO CONTINUE READING

ನಾನ್ ಅಲ್ಕೋಹಾಲಿಕ್ ಫ್ಯಾಟಿ ಲೀವರ್ ಎಂದರೇನು?
ಮದ್ಯಪಾನ ಮಾಡದೆ ಇರುವ ಜನರಲ್ಲಿ ಕಾಣಿಸಿಕೊಳ್ಳುವ ಫ್ಯಾಟಿ ಲೀವರ್ ಅನ್ನು ಫ್ಯಾಟಿ ಲೀವರ್ ಡಿಸೀಜ್ (Lifestyle Disease) ಎಂದು ಕರೆಯಲಾಗುತ್ತದೆ. ಈ ಕಾಯಿಲೆಯಲ್ಲಿ ವ್ಯಕ್ತಿಗಳ ಆಹಾರದ ಕಾರಣ  ಲೀವರ್ ನಲ್ಲಿ ಹೆಚ್ಚುವರಿ ಬೊಚ್ಚು ಅಥವಾ ಫ್ಯಾಟ್ ಸಂಗ್ರಹವಾಗುತ್ತದೆ. ಈ ಕಾರಣದಿಂದ ಲೀವರ್ ಹಾಳಾಗುತ್ತದೆ. (Lifestyle News In Kananda)

ನಾನ್ ಅಲ್ಕೊಹಾಲಿಕ್ ಫ್ಯಾಟಿ ಲೀವರ್ ಡಿಸೀಜ್ ಲಕ್ಷಣಗಳು
ಹೊಟ್ಟೆಯಲ್ಲಿ ಬಾವು ಕಾಣಿಸಿಕೊಳ್ಳುವುದು, ಎನ್ಲಾರ್ಜ್ ಸ್ಪೀನಲ್,  ಅಂಗೈ ಕೆಂಪಾಗುವಿಕೆ, ಕಣ್ಣುಗಳು ಸೇರಿದಂತೆ ಚರ್ಮ ಹಳದಿಯಾಗುವಿಕೆ, ಇವೆಲ್ಲವೂ ಕೂಡ ನಾನ್ ಅಲ್ಕೊಹಾಲಿಕ್ ಸ್ಟಿಟೋಪಟೈಟಸ್ ನ ಲಕ್ಷಣಗಳಾಗಿವೆ.

ಕೊಲಾಯಿನ್ ಹಾಗೂ ಲೀವರ್ ಸಂಬಂಧ
ಶರೀರದಲ್ಲಿ ಕೊಲಾಯಿನ್ ತುಂಬಾ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದು ಲೀವರ್ ನಲ್ಲಿರುವ ಫ್ಯಾಟ್ ಅನ್ನು ಜೀರ್ಣಿಸುವ ಕೆಲಸ ಮಾಡುತ್ತದೆ. ಜೊತೆಗೆ ಇದು ಫ್ಯಾಟಿ ಲೀವರ್ ಸಮಸ್ಯೆಯನ್ನು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಕೂಡ ಮಾಡುತ್ತದೆ. ಹೀಗಾಗಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಕೊಲಾಯಿನ್ ನಿಂದ ಕೂಡಿದ ಆಹಾರ ಪದಾರ್ಥಗಳನ್ನು ಸೇರಿಸಿದರೆ ಉತ್ತಮ. 


ಇದನ್ನೂ ಓದಿ-Diabetes Control Fruits: ಮಧುಮೇಹ ನಿಯಂತ್ರಣಕ್ಕೆ ಈ ಐದು ಹಣ್ಣುಗಳು ಸೂಪರ್ ಫುಡ್ ಗಳಾಗಿವೆ!

ಈ ಆಹಾರಗಳಲ್ಲಿ ಕೊಲಾಯಿನ್ ಕಂಡು ಬರುತ್ತದೆ
>> ಮೊಟ್ಟೆ-  ಮೊಟ್ಟೆಗಳು ಕೊಲಾಯಿನ್ ನ ಉತ್ತಮ ಮೂಲಗಳಾಗಿವೆ. ಹೀಗಿರುವಾಗ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಮೊಟ್ಟೆಗಳನ್ನು ತಪ್ಪದೆ ಶಾಮೀಲುಗೊಳಿಸಿ ಫ್ಯಾಟಿ ಲೀವರ್ ಸಮಸ್ಯೆಯಿಂದ ಪಾರಾಗಬಹುದು. 
>> ಸೋಯಾಬೀನ್- ಅರ್ಧ ಬಟ್ಟಲು ಹುರಿದ ಸೋಯಾಬೀನ್ ನಲ್ಲಿ 107ಎಂಜಿ ಕೊಲಾಯಿನ್ ಇರುತ್ತದೆ. ಇದು ನಿಮ್ಮ ಲೀವರ್ ಅನ್ನು ಆರೋಗ್ಯವಂತವಾಗಿರಿಸುತ್ತದೆ. ಹೀಗಾಗಿ ನೀವೂ ಕೂಡ ನಿಮ್ಮ ಡಯಟ್ ನಲ್ಲಿ ಸೋಯಾಬೀನ್ ಅನ್ನು ಸೇರಿಸಿಕೊಳ್ಳಿ.


ಇದನ್ನೂ ಓದಿ-Piles Management: ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಈ ಆಹಾರಗಳು ವಿಷಕ್ಕೆ ಸಮಾನ!

(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ