Health Benefits of Morning Walk: ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಕೆಲವು ದೈಹಿಕ ಚಟುವಟಿಕೆಯನ್ನು ಮಾಡುವುದು ಬಹಳ ಮುಖ್ಯ. ಜಿಮ್‌ಗೆ ಹೋಗಲು ನಿಮಗೆ ಸಮಯ ಸಿಗದಿದ್ದರೆ, ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಮಾಡುವ ನಿಯಮವನ್ನು ಅನುಸರಿಸಿ. ಬೆಳಗ್ಗೆ ವಾಕಿಂಗ್ ಮಾಡುವುದರಿಂದ ನಿಮ್ಮ ದೈಹಿಕ ಆರೋಗ್ಯಕ್ಕೆ ಮಾತ್ರವಲ್ಲದೆ ನಿಮ್ಮ ಮಾನಸಿಕ ಆರೋಗ್ಯಕ್ಕೂ ಪ್ರಯೋಜನಕಾರಿ. ಬೆಳಗಿನ ನಡಿಗೆಯಿಂದ ನೀವು ಕೆಲವು ಅದ್ಭುತ ಪ್ರಯೋಜನಗಳನ್ನು ಪಡೆಯುತ್ತೀರಿ. ವಾಕ್‌ ಮಾಡುವುದನ್ನು ನಿಮ್ಮ ದಿನಚರಿಯ ಭಾಗ ಮಾಡಿಕೊಂಡರೆ ನೀವು ಆರೋಗ್ಯವಾಗಿರುತ್ತೀರಿ.


COMMERCIAL BREAK
SCROLL TO CONTINUE READING

ಅನಾರೋಗ್ಯದಿಂದ ರಕ್ಷಣೆ


ಅಜ್ಜಿಯ ಕಾಲದಿಂದಲೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಹೋಗುವುದನ್ನು ರೂಢಿಸಿಕೊಂಡಿರುತ್ತಿದ್ದರು. ನೀವು ಪ್ರತಿದಿನ ನಿಯಮಿತವಾಗಿ ಬೆಳಗ್ಗೆ ವಾಕಿಂಗ್ ಮಾಡಿದ್ರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಲಪಡಿಸಬಹುದು. ಅಂದರೆ ನೀವು ಮತ್ತೆ ಮತ್ತೆ ಅನಾರೋಗ್ಯಕ್ಕೆ ಒಳಗಾಗದಂತೆ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಬೆಳಗಿನ ಜಾವದಲ್ಲಿ ಸುಮಾರು ಅರ್ಧ ಗಂಟೆ ವಾಕಿಂಗ್‌ಗೆ ಹೊರಡುವ ನಿಯಮವನ್ನು ರೂಢಿಸಿಕೊಳ್ಳಬೇಕು.


ಇದನ್ನೂ ಓದಿ: ಅರಿಶಿನದಲ್ಲಿ ಈ 5 ವಸ್ತುಗಳಲ್ಲಿ ಬೆರೆಸಿ ಮುಖಕ್ಕೆ ಹಚ್ಚಿದರೆ ಕಲೆಗಳು ತಕ್ಷಣವೇ ನಿವಾರಣೆಯಾಗುತ್ತವೆ..!


ತೂಕ ಇಳಿಕೆಗೆ ಸಹಕಾರಿ


ನಿಮ್ಮ ತೂಕ ಇಳಿಸುವ ಪ್ರಯಾಣವನ್ನು ಸುಲಭಗೊಳಿಸಲು ಬಯಸಿದರೆ, ನಿಮ್ಮ ದೈನಂದಿನ ದಿನಚರಿಯಲ್ಲಿ ಬೆಳಗಿನ ನಡಿಗೆಯನ್ನು ಸೇರಿಸಿಕೊಳ್ಳಬೇಕು. ಒಂದು ತಿಂಗಳೊಳಗೆ ಹೆಚ್ಚುತ್ತಿರುವ ತೂಕವನ್ನು ನೀವು ನಿಯಂತ್ರಿಸಬಹುದು. ಇದಲ್ಲದೆ ಪ್ರತಿದಿನ ಬೆಳಗ್ಗೆ ವಾಕಿಂಗ್ ಮಾಡುವುದರಿಂದ ನಿಮ್ಮ ಮೂಳೆ ಮತ್ತು ಸ್ನಾಯುಗಳ ಆರೋಗ್ಯವನ್ನು ಬಲಪಡಿಸಬಹುದು.


ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ


ಬೆಳಗ್ಗಿನ ನಡಿಗೆಯ ಮೂಲಕ ಅಧಿಕ ಬಿಪಿ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿಯಂತ್ರಿಸಬಹುದು. ಮುಂಜಾನೆ ತಾಜಾ ಗಾಳಿಯಲ್ಲಿ ನಡೆಯುವುದು ನಿಮ್ಮ ಹೃದಯದ ಆರೋಗ್ಯವನ್ನು ಬಲಪಡಿಸುತ್ತದೆ. ಬೆಳಗಿನ ನಡಿಗೆ ಗಂಭೀರ ಮತ್ತು ಮಾರಣಾಂತಿಕ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಪರಿಣಾಮಕಾರಿ. ಮಧುಮೇಹ ರೋಗಿಗಳಿಗೆ ಪ್ರತಿದಿನ ಬೆಳಗ್ಗೆ ನಡೆಯಲು ಸಲಹೆ ನೀಡಲಾಗುತ್ತದೆ. 


ಇದನ್ನೂ ಓದಿ: ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಪವರ್‌ ಫುಲ್‌ ಹಣ್ಣು.. ವರ್ಷಕ್ಕೊಮ್ಮೇ ಸಿಗುವ ಇದನ್ನು ಒಮ್ಮೆ ಸೇವಿಸಿದರೆ ಸಾಕು ಮಧುಮೇಹ ಬರುವುದೇ ಇಲ್ಲ! ಮೆದುಳಿನ ಆರೋಗ್ಯಕ್ಕಂತೂ ಅಮೃತವಿದು


(ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. Zee Kannada News ಇದನ್ನು ದೃಢಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.