ನವದೆಹಲಿ: ಪ್ರಸ್ತುತ ಯುಗದಲ್ಲಿ ಬಹುತೇಕರಿಗೆ ಕೊಲೆಸ್ಟ್ರಾಲ್ ದೊಡ್ಡ ಸಮಸ್ಯೆಯಾಗಿದೆ. ಎಲ್ಲಾ ವಯಸ್ಸಿನ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. ನಮ್ಮ ರಕ್ತದಲ್ಲಿನ ಕೊಬ್ಬಿನ ಪ್ರಮಾಣ ಅಧಿಕವಾದಾಗ, ಅದು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ. ಬಳಿಕ ಇದು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ಆಗ ರಕ್ತವು ಹೃದಯ ತಲುಪಲು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಇದು ಮೊದಲು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ನಂತರ ಹೃದಯಾಘಾತದಂತಹ ಗಂಭೀರ ಕಾಯಿಲೆಯಿಂದ ಜೀವವನ್ನೇ ತೆಗೆಯುತ್ತದೆ.


COMMERCIAL BREAK
SCROLL TO CONTINUE READING

ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಾವು ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸಬೇಕು. ಇದಕ್ಕಾಗಿ ನಾವು ಪ್ರತಿನಿತ್ಯ ಕೆಲವು ಆಹಾರಗಳನ್ನು ಸೇವಿಸಬೇಕು. ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿವೆ. ನಿಮ್ಮ ದೆಹಲಿದಲ್ಲಿನ ಕೆಟ್ಟ ವಸ್ತುಗಳನ್ನು ಹೊರಗೆ ಹಾಕಲು ಇವು ನೆರವಾಗುತ್ತವೆ.  


ಇದನ್ನೂ ಓದಿ: Fenugreek Leaves In Winter : ಚಳಿಗಾಲದಲ್ಲಿ ತಪ್ಪದೆ ಸೇವಿಸಿ ಮೆಂತ್ಯ ಸೊಪ್ಪು, ಆರೋಗ್ಯಕ್ಕಿದೆ ಈ ಅದ್ಭುತ ಪ್ರಯೋಜನಗಳು 


ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಈ ಆಹಾರ ಸೇವಿಸಿ


ನಾವು ಪ್ರತಿದಿನ ಅಡುಗೆಮನೆಯಲ್ಲಿರುವ ಎರಡು ವಸ್ತುಗಳನ್ನು ಸೇವಿಸಿದರೆ, ಅಧಿಕ ಕೊಲೆಸ್ಟ್ರಾಲ್‌ನಂತಹ ಗಂಭೀರ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು. ಅವು ಯಾವ ಆಹಾರ..? ಅವುಗಳನ್ನು ಹೇಗೆ ಸೇವಿಸಬೇಕು ಅನ್ನೋದರ ಬಗ್ಗೆ ತಿಳಿಯಿರಿ.


ದಾಲ್ಚಿನ್ನಿ: ದಾಲ್ಚಿನ್ನಿ ದೈನಂದಿನ ಸೇವನೆಯು ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಹಳ ಪರಿಣಾಮಕಾರಿ. ಇದಕ್ಕಾಗಿ ಮೊದಲು ಈ ಮಸಾಲೆಯ ತುಂಡುಗಳನ್ನು ತೆಗೆದುಕೊಂಡು ಮಿಕ್ಸರ್ ಗ್ರೈಂಡರ್‌ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಬಳಿಕ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ. ಬೆಳಗ್ಗೆ ಎದ್ದ ನಂತರ ಒಂದು ಚಿಟಿಕೆಯಷ್ಟು ಸೇವಿಸಿರಿ. ಇದರ ಪ್ರಯೋಜನಗಳು ಕೆಲವೇ ದಿನಗಳಲ್ಲಿ ಗೋಚರಿಸುತ್ತವೆ. ಆದರೆ ಈ ಮಸಾಲೆಯನ್ನು ಅತಿಯಾಗಿ ಸೇವಿಸಬಾರದು. ಏಕೆಂದರೆ ಇದು ದೇಹಕ್ಕೆ ಅನೇಕ ರೀತಿಯ ಹಾನಿಯನ್ನುಂಟುಮಾಡುತ್ತದೆ.


ಇದನ್ನೂ ಓದಿ: Pigeon pea : ಕಿಡ್ನಿ ಸಮಸ್ಯೆ ಮತ್ತು ಮದುಮೇಹ ರೋಗಿಗಳು ಸೇವಿಸಬಾರದು ತೊಗರಿ ಬೇಳೆ..!


ಅಗಸೆ ಬೀಜ: ಅಗಸೆ ಬೀಜಗಳು ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೆಚ್ಚಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು ನಿಯಮಿತವಾಗಿ ಇವುಗಳನ್ನು ಸೇವಿಸಿರಿ. ಇದಕ್ಕಾಗಿ ಅಗಸೆ ಬೀಜಗಳನ್ನು ತೆಗೆದುಕೊಂಡು ಮಿಕ್ಸರ್ ಗ್ರೈಂಡರ್ನಲ್ಲಿ ಪುಡಿಮಾಡಬೇಕು. ಬಳಿಕ ಒಂದು ಚಮಚ ಅಗಸೆ ಬೀಜದ ಪುಡಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಪ್ರತಿದಿನವೂ ಕುಡಿಯಿರಿ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೆ, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.