Benefits Of Drinking Coconut Water: ನಮ್ಮಲ್ಲಿ ಬಹುತೇಕ ಎಲ್ಲಾ ಜನರಿಗೆ ಎಳನೀರು ಕುಡಿಯುವುದು ಇಷ್ಟವಾಗುತ್ತದೆ. ಸಾಮಾನ್ಯವಾಗಿ, ಜನರು ರಜಾದಿನಗಳನ್ನು ಕಳೆಯಲು ಸಮುದ್ರ ತೀರಕ್ಕೆ ಹೋದಾಗ, ಅವರು ಖಂಡಿತವಾಗಿಯೂ ಈ ನೈಸರ್ಗಿಕ ಪಾನೀಯವನ್ನು ಕುಡಿಯಲು ಇಷ್ಟಪಡುತ್ತಾರೆ. ನಮ್ಮ ದೇಹದಲ್ಲಿ ನೀರಿನ ಕೊರತೆಯಾಗದಂತೆ ಮತ್ತು ಇದು ನಿರ್ಜಲೀಕರಣವನ್ನು ತಡೆಯುತ್ತದೆ. ನಗರದಿಂದ ಗ್ರಾಮೀಣ ಭಾಗದವರೆಗೂ ಇದಕ್ಕೆ ಉತ್ತಮ ಬೇಡಿಕೆ ಇದೆ. ಏಳನೀರಿನಿಂದಾಗುವ ಎಲ್ಲಾ ಪ್ರಯೋಜನಗಳ ಬಗ್ಗೆ ನಿಮಗೆ ತಿಳಿದಿದೆಯೇ? ತೆಂಗಿನ ನೀರು ಕುಡಿಯುವುದರಿಂದ ಯಾವೆಲ್ಲಾ ರೋಗಗಳು ಮತ್ತು ಸಮಸ್ಯೆಗಳು ನಿವಾರಣೆಯಾಗುತ್ತವೆ ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಈ ಸಮಸ್ಯೆಗಳಿಗೆ ತೆಂಗಿನ ನೀರು ರಾಮಬಾಣ
ಬೊಜ್ಜು

ಬೊಜ್ಜು ಅಥವಾ ಸ್ಥೂಲಕಾಯತೆ ಒಂದು ಜೀವನಶೈಲಿ ಆಧಾರಿತ ಕಾಯಿಲೆಯಾಗಿದೆ, ಆದರೆ ಇದು ಹಲವಾರು ರೋಗಗಳಿಗೆ ಆಹ್ವಾನ ನೀಡುತ್ತದೆ, ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕರಗಿಸಲು ತೆಂಗಿನ ನೀರು ಸೇವನೆಯನ್ನು ನಿಮ್ಮ ದಿನಚರಿಯ ಭಾಗ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಕೆಲವೇ ತಿಂಗಳುಗಳಲ್ಲಿ ನಿಮ್ಮ ದೇಹ ಪುನಃ ಆಕಾರ ಪಡೆದುಕೊಳ್ಳುತ್ತದೆ.


ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ತೆಂಗಿನ ನೀರನ್ನು ಪ್ರತಿದಿನ ಸೇವಿಸಬೇಕು. ಏಕೆಂದರೆ ಅದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬು ಕಡಿಮೆಯಾಗುವುದರಿಂದ ಬಿಪಿ ಕ್ರಮೇಣ ಸಾಮಾನ್ಯಕ್ಕೆ ಬರಲಾರಂಭಿಸುತ್ತದೆ.  ಹೀಗಾಗಿ ಅಧಿಕ ಬಿಪಿ ಸಮಸ್ಯೆ ಇರುವವರಿಗೆ ಈ ನೈಸರ್ಗಿಕ ಪಾನೀಯ ತುಂಬಾ ಪ್ರಯೋಜನಕಾರಿಯಾಗಿದೆ.


ಹೃದ್ರೋಗ ಕಾಯಿಲೆಗಳಿರುವವರು ಎಳನೀರು ಸೇವಿಸಬಹುದು
ಭಾರತದಲ್ಲಿ ಹೃದ್ರೋಗದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಕಡಿಮೆ ಇಲ್ಲ, ಹೀಗಾಗಿ ನಾವು ನಮ್ಮ ದಿನಚರಿಯಲ್ಲಿ ಎಳನೀರು ಸೇವನೆಯನ್ನು ಶಾಮೀಲುಗೊಳಿಸಬೇಕು. ಇದು ಹೃದಯಾಘಾತ, ಪಾರ್ಶ್ವವಾಯು, ಪರಿಧಮನಿಯ ಕಾಯಿಲೆ ಮತ್ತು ಟ್ರಿಪಲ್ ವೆಸ್ಸೆಲ್ ಕಾಯಿಲೆಯ ಅಪಾಯವನ್ನು ಬಹಳಷ್ಟು ಮಟ್ಟಿಗೆ ಕಡಿಮೆ ಮಾಡುತ್ತದೆ.


ಇದನ್ನೂ ಓದಿ-Health Tips: ಮೊಳಕೆಯೋಡೆದ ಮೆಂತ್ಯ ಸೇವನೆಯ ಅದ್ಭುತ ಲಾಭಗಳು, ಈ ಕಾಯಿಲೆಗಳಿಗೆ ರಾಮಬಾಣ


ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ
ಕರೋನಾ ಅವಧಿಯ ನಂತರ, ಸೋಂಕನ್ನು ತಪ್ಪಿಸುವ ವಿಷಯದಲ್ಲಿ ಜನರು ಸಾಕಷ್ಟು ಜಾಗ್ರತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ನಾವು ನಿಯಮಿತವಾಗಿ ತೆಂಗಿನ ನೀರನ್ನು ಕುಡಿಯುತ್ತಿದ್ದರೆ, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳು ಮತ್ತು ಅನೇಕ ರೋಗಗಳ ವಿರುದ್ಧ ಸುಲಭವಾಗಿ ಹೋರಾಡಲು ದೇಹಕ್ಕೆ ಸಾಮರ್ಥ್ಯ ಒದಗಿಸುತ್ತದೆ.


ಇದನ್ನೂ ಓದಿ-Warm Water Tips: ಚಳಿಗಾಲದಲ್ಲಿ ಬಿಸಿ ನೀರು ಸೇವನೆಯ ಈ ಲಾಭಗಳು ನಿಮಗೂ ಗೊತ್ತಿರಲಿ


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.